ದಲಾಇಲುಲ್ ಖೈರಾತ್: ಆರಂಭಿಕ ಹಸ್ತಪ್ರತಿಗಳು ಮತ್ತು ಚಿತ್ರಕಲೆಗಳು

ಪೈಗಂಬರ್ (ಸ.ಅ.) ರ ಮೇಲಿನ ಪ್ರಕೀರ್ತನೆಗಳು ಮತ್ತು ದರೂದಿನ ಸಮಾಹಾರ ಈ ದಲಾಇಲುಲ್ ಖೈರಾತ್. ಹದಿನೈದನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಗ್ರಂಥವನ್ನು ಜಾಗತಿಕ ಮುಸ್ಲಿಮರು ತಮ್ಮ ಮನೆಗಳಲ್ಲಿ, ಮಸ್ಜಿದ್ ಮತ್ತು ಮಖ್ಬರಾಗಳಲ್ಲಿ ದಿನನಿತ್ಯ…

ಅಗತ್ತಿ ಉಸ್ತಾದ್‌ ಎಂಬ ಮಲಬಾರಿನ ವಿನೀತ ಇತಿಹಾಸಜ್ಞ

“The Calligraphic State: Textual Domination and History in a Muslim Society” ಬಹಳ ಆಪ್ತ ಎನಿಸಿದ ಈ ಕೃತಿಯನ್ನು ಮೊದಲ ಬಾರಿ ನೋಡಿದ್ದು ಎರಡು ಸಾವಿರದ ಐದು-ಆರು ಇಸವಿಗಳಲ್ಲಿ ಬೆಂಗಳೂರಿನ…

ಜಾಮಿಉ ತಮ್ಸೀಲ್ ಮತ್ತು ಪರ್ಷಿಯನ್ ಸಾಹಿತ್ಯ ಸಮೃದ್ಧಿ

ಪ್ರತಿಯೊಂದು ಪುಸ್ತಕವು ತನ್ನದೇ ಆದ ಐತಿಹಾಸಿಕ ಮತ್ತು ಪ್ರಾದೇಶಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಸಾಲು- ಸಾಲು ಪುಸ್ತಕಗಳನ್ನು ಜೋಡಿಸಿ ಓದುವುದಕ್ಕಿಂತ ಆ ಸಾಲುಗಳ ನಡುವೆ ಉತ್ತಮ ಪುಸ್ತಕದ ಆಯ್ಕೆ ಮಾಡಿ ಓದುವುದು ಸೂಕ್ತ. ಅದು…

ಶಿರವಸ್ತ್ರ : ಮಧ್ಯ ಕಾಲದ ಧಾರ್ಮಿಕ ಸಂಕೇತ

ಸಂಸ್ಕೃತಿ ಇತಿಹಾಸದುದ್ದಕ್ಕೂ ಶಿರವಸ್ತ್ರವನ್ನು ಸುಲ್ತಾನರು ಮತ್ತು ವಿದ್ವಾಂಸರಿಂದ ಹಿಡಿದು ಯೋಧರು ಮತ್ತು ಸಾಮಾನ್ಯರವರೆಗೂ, ಮುಸ್ಲಿಂ ಪುರುಷರು ತಮ್ಮ ಸಂಪ್ರದಾಯ ಅಥವಾ ಶ್ರೇಣಿ, ಸಂಬಂಧ, ಸ್ಥಾನಮಾನ ಮತ್ತು ಘನತೆಯನ್ನು ಸೂಚಿಸಲು ಹಾಗೂ ಮುಸ್ಲಿಂ ಪುರುಷರನ್ನು…

ಇಸ್ಲಾಮಿಕ್ ದತ್ತಿ ಸೇವೆಗಳು: ಪ್ರವಾದೀ ಕಾಲದಿಂದ ಇಪ್ಪತ್ತನೇ ಶತಮಾನದವರೆಗೆ

ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ಪ್ರಾಥಮಿಕ ಘಟ್ಟವು ಐತಿಹಾಸಿಕ ಹಿಜ್ರಾದ ಬಳಿಕ ಆರಂಭಗೊಂಡು ಅಬ್ಬಾಸಿಯ್ಯಾ ಆಡಳಿತಾವಧಿಯ ಆರಂಭಿಕ ವೇಳೆಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಾಜಮುಖಿ ಸಂಸ್ಥೆಗಳು ಖುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದ ಮೇಲೆ ರೂಪುಪಡೆಯಿತು.…

ಹಳರಮೀಸ್ : ಮಲಬಾರಿನ ಚಾರಿತ್ರಿಕ ಹಿನ್ನೆಲೆ

ಮಲಬಾರ್ ಪ್ರದೇಶಕ್ಕೆ ಹಳರಮೀ ಸಯ್ಯಿದರುಗಳ ವಲಸೆಯು ಹಿಂದೂ ಮಹಾಸಾಗರದ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಘಟಿಸಿದ ಹಾಗೆ ಮಲಬಾರ್ ಮುಸ್ಲಿಮರ ಜೀವನ ಮತ್ತು ಸಂಸ್ಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟು ಮಾಡಿತು. ಪ್ರಮುಖವಾಗಿ ಅವರ ವಲಸೆಯು ಕೇರಳದ…

ಹಯ್ಯ್ ಬಿನ್ ಯಖ್ಲಾನ್: ದಾರ್ಶನಿಕ ಜ್ಞಾನೋದಯದ ಅಮರ ವರ್ಣನೆ

ಪವಿತ್ರ ಖು‌ರ್‌ಆನ್ ಮತ್ತು ಸಾವಿರದ ಒಂದು ರಾತ್ರಿಗಳು ಎಂಬೆರಡು ಕೃತಿಗಳನ್ನು ಬಿಟ್ಟರೆ ಅರೇಬಿಕ್ ಭಾಷೆಯಿಂದ ಇತರ ಭಾಷೆಗಳಿಗೆ ಅತ್ಯಂತ ಹೆಚ್ಚು ಅನುವಾದಿಸಲ್ಪಟ್ಟ ಕೃತಿ ಹಯ್ಯ್ ಬಿನ್ ಯಖ್ಲಾನ್ ಎನ್ನಬಹುದು. ಫಿಲಾಸಫಸ್ ಆಟೋಡಿಡಾಕ್ಟಸ್ ಎಂದು…

ಮಲಬಾರಿಯೊಬ್ಬನ ಇಸ್ತಾಂಬುಲ್‌ ಅನುಭವ ಕಥನ

ಇಸ್ತಾಂಬುಲಿನ ಜಗಮಗಿಸುವ ಅನುಭವಗಳಲ್ಲಿ ಲೀನವಾಗಿ ಮಲಬಾರಿನ ಜ್ಞಾನ ಗರಿಮೆಯನ್ನು ನೆನಪಿಸೋಣ. ಮಲಬಾರ್ ಎಂಬ ಅನುಗ್ರಹೀತ ಪ್ರದೇಶದ ವರ್ಣರಂಜಿತ ಚಿತ್ರವು ತುರ್ಕಿಯಲ್ಲಿನ ಜ್ಞಾನಾಸಕ್ತರ ಕಣ್ಣಲ್ಲಿ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ವಿವರಿಸುವ ಶ್ರಮ…

ಕಾಶ್ಮೀರ: ಪುರಾತನ ನಗರದ ಸೂಫಿ ಸನ್ನಿಧಿಯಲ್ಲಿ

ಕಾಶ್ಮೀರದ ಸುಗಂಧ ಹಾಗೂ ಸೌಂದರ್ಯವನ್ನು ಅರಸುತ್ತಾ ಅಲ್ಲಿನ ಮಂಜು ಮುಸುಕಿದ ಹಾದಿಗಳಲ್ಲಿ ಜನರ ನಡುವೆ ವಿಹರಿಸಿದ ಅನುಭವ ಕಥೆಯಿದು. ಕಾಶ್ಮೀರದಲ್ಲಿನ ನನ್ನ ಸಂಚಾರವು ಲೋಕಲ್ ಗಾಡಿಗಳಲ್ಲಿ ಸಾಗಿತ್ತು. ಎಲ್ಲಿಗೆ ಹೋದರೂ ಅಲ್ಲಿನ ಪ್ರಾದೇಶಿಕ…

ದಿ ನಾಲೆಡ್ಜ್ ಟ್ರಯಂಫಂಟ್: ಮಧ್ಯಕಾಲೀನ ಇಸ್ಲಾಮಿನ ಜ್ಞಾನ ವಿನಿಮಯ ದೃಷ್ಟಿಕೋನ

ಅರಬಿ, ಪರ್ಷಿಯನ್, ಅರ್ಮಾಯಿಕ್, ಗ್ರೀಕ್ ಭಾಷೆಗಳಲ್ಲಿ ಅತೀವ ಪಾಂಡಿತ್ಯವುಳ್ಳ ರೋಸೆಂಟಲ್ ರವರ ‘Knowledge Triumphant: The Concept of Knowledge in Medieval Islam’ ಎಂಬ ಕೃತಿಯ ಕುರಿತು ಕಿರು ಅವಲೋಕನ. ಆಧುನಿಕ…

ಗತಿಸಿಹೋದ ಭಾರತೀಯ ಕಾಫಿ ಪರಂಪರೆಯ ಜಾಡಿನಲ್ಲಿ

ಶಿಥಿಲಗೊಳ್ಳುತ್ತಿದ್ದ ಮೊಘಲ್ ಸಾಮ್ರಾಜ್ಯದ ಅರಮನೆಗಳು. ಜಾಮಿಯಾ ಮಸೀದಿಯ ಪ್ರೌಢ ಗುಂಬಝಿನ ಆಚೆಗೆ ಮುಳುಗುವ ಸೂರ್ಯನ ಕೆಂಪು ಕಿರಣಗಳು ಹರಡಿದ್ದವು. ಹಳೆ ದೆಹಲಿಯ ಆಕಾಶದಲ್ಲಿ ಸಂಜೆಯ ಪ್ರಾರ್ಥನೆಯ ಕರೆ ಮೊಳಗಿದವು. ತಿರುವು ಮುರುವು ಹಾದಿಗಳಲ್ಲಿ…

ವಿಶ್ವವಿದ್ಯಾಲಯ ಎಂದರೇನು? ಒಂದು ಹುಡುಕಾಟ (ಭಾಗ-1)

“ವಿಶ್ವವಿದ್ಯಾಲಯ ಎಂದರೇನು?” ಇದೊಂದು ದೊಡ್ಡ ಪ್ರಶ್ನೆ. ಈ ಪ್ರಶ್ನೆಯೊಂದಿಗೆ ಅನುಸಂಧಾನ ನಡೆಸಲು ಸಹೋದ್ಯೋಗಿಗಳು ನನ್ನನ್ನು ಕೇಳಿದರೆ ನನಗೆ ಗಾಬರಿ ಆಗುತ್ತದೆ. ಇದನ್ನು ಇತ್ಯರ್ಥಪಡಿಸಲು ಸಾಧ್ಯವೇ ಎಂದು ಯೋಚಿಸಿ ಭಯ ಆವರಿಸುತ್ತದೆ. ಅದಾಗ್ಯೂ, ನನ್ನ…

ಹಜ್ಜ್ ಮತ್ತು ಕಡಲ್ಗಳ್ಳತನ: ಸಮುದ್ರ ಕಥನಗಳಲ್ಲಿ ಗಂಜ್‌ ಎ ಸವಾಯಿ

ಗಂಜ್ ಎ ಸವಾಯಿ ಎನ್ನುವ ಮೊಘಲ್‌ ಹಡಗಿನ ಕತೆ ಹಿಂದೂ ಮಹಾಸಾಗರ ಮಾರ್ಗದ ಹಜ್ಜ್ ಪವಿತ್ರಯಾತ್ರೆಯ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎನ್ನಬಹುದು. ಕ್ರಿ.ಶ. 1695ರಲ್ಲಿ ಹಜ್ಜ್ ಕರ್ಮಗಳ ಬಳಿಕ ಯಾತ್ರಿಕರು ಹಾಗೂ…

ವಸಾಹತು ಕಾಲದ ಹಜ್ಜಾನುಭವ: ಪವಿತ್ರ ಯಾತ್ರೆ ಮತ್ತು ಜಾಗತಿಕ ಕೊಡುಕೊಳೆಗಳು

ಜೋಸೆಫ್ ಕೊನ್ರಾಡ್‌ರವರ ‘ಲಾರ್ಡ್ ಜಿಮ್’ ಕಾದಂಬರಿಯು, ಎನ್. ಎಸ್ ಪಡ್ನಾ ಎಂಬ ಕಾಲ್ಪನಿಕ ಹಡಗು ನಿರ್ಜನ ದ್ವೀಪವೊಂದರಲ್ಲಿ ಯಾತ್ರಿಕರನ್ನು ತೊರೆದು ಹೋಗುವುದರ ಕುರಿತೂ, ಪವಿತ್ರ ಮಕ್ಕಾ ತಲುಪಬೇಕೆಂಬ ಅವರ ಅತೀವ ಹಂಬಲದ ಸುತ್ತಲೂ…

ತವಕ್ಕಲ್ ಮಸ್ತಾನ್: ಮಹಾ ನಗರದಲ್ಲಿನ ಅಭಯ

ನಗರಗಳು ಅನೇಕ ವೈವಿಧ್ಯತೆಗಳನ್ನು ಒಡಲಲ್ಲಿಟ್ಟು ಬೇರೆ ಯಾವುದರ ಕುರಿತೂ ಚಿಂತಿಸದೆ ನಿರಂತರ ಚಲಿಸುತ್ತಿರುತ್ತವೆ. ಸ್ಥಳಗಳಾಗಲಿ ವ್ಯಕ್ತಿಗಳಾಗಲಿ ವಸ್ತುಗಳಾಗಲಿ ಅವುಗಳಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳಲು ನಗರಗಳು ನಮ್ಮನ್ನು ಅನುಮತಿಸಬೇಕೆಂದಿಲ್ಲ. ಮಾನಸಿಕವಾಗಿ ಹತ್ತಿರವಾಗಲು ಪ್ರಾರಂಭಿಸುವಾಗ ನಗರಗಳು ಅದನ್ನು…

ಶವರ್ಮ: ಗಡಿದಾಟಿದ ಸಂಸ್ಕೃತಿ ಮತ್ತು ಆಹಾರ ಪದ್ಧತಿ

ಸುರುಟುವುದು ಎಂಬರ್ಥವನ್ನು ನೀಡುವ ‘ಜಿವಿರ್ಮ’ (Civirme) ಎಂಬ ತುರ್ಕಿ ಪದದಿಂದ ಶವರ್ಮ ಎಂಬ ಪದ ಹುಟ್ಟು ಪಡೆಯುತ್ತದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿದ ರಾಷ್ಟ್ರಗಳಲ್ಲಿ ಸೌಟನ್ನು ಉಪಯೋಗಿಸಿ ಮಾಂಸವನ್ನು ಗ್ರಿಲ್ ಮಾಡಿ…

ಈಜಿಪ್ಟಿನ ರಂಝಾನ್ ಡೈರಿ

ಜಗತ್ಪ್ರಸಿದ್ಧ ಈಜಿಪ್ಟ್ ಬರಹಗಾರ, ಸಾಹಿತ್ಯ ನೋಬೆಲ್ ಪ್ರಶಸ್ತಿ ಪಡೆದ ನಜೀಬ್ ಮಹ್ಫೂಝ್ ಕೈರೋ ನಗರದ ರಂಝಾನ್ ತಿಂಗಳ ಬಗ್ಗೆ ಈ ರೀತಿ ಬರೆಯುತ್ತಾರೆ:“ರಂಝಾನಿನ ಹಗಲು ಹೊತ್ತು ಶಾಂತ ವಾತಾವರಣನ್ನು ಈಜಿಪ್ಟಿನಲ್ಲಿ ನನಗೆ ಕಾಣಲು…

ಅರ್ವಿ : ಅರಬ್ -ತಮಿಳರ ಅಳಿದು ಹೋದ ಭಾಷೆ

2008 ಇಸವಿಯ ಬೇಸಿಗೆ ಕಾಲದ ಸಂಜೆ ಹೊತ್ತು, ದಕ್ಷಿಣ ಭಾರತದ ವೆಲ್ಲೂರಿನ ಅರಬಿ ಕಾಲೇಜಿನ ವಿದ್ಯಾರ್ಥಿ,26ರ ಹರೆಯದ ಮೊಹಮ್ಮದ್ ಸುಲ್ತಾನ್ ಬಾಖವಿ ಗಮನಾರ್ಹವಾದ ಸಂಗತಿಯೊಂದನ್ನು ಕಂಡುಹಿಡಿದನು. ಪೂರ್ವಜರಾದ ಆಧ್ಯಾತ್ಮಿಕ ಗುರುಗಳು ಅಂತ್ಯ ವಿಶ್ರಮ…

ದಕ್ಷಿಣೇಷ್ಯಾ ಇತಿಹಾಸದ ಒಳಸುಳಿಗಳು: ನೈಲ್‌ ಗ್ರೀನ್‌ ಸಂದರ್ಶನ

ವಿಖ್ಯಾತ ಇತಿಹಾಸಜ್ಞರಾದ ನೈಲ್‌ ಗ್ರೀನ್‌ ಸದ್ಯ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲಿಸ್‌ನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇಸ್ಲಾಮ್‌, ಸೂಫಿಸಂ ಹಾಗೂ ವ್ಯಾಪಾರ ಇವರ ವಿಷಯಗಳಾಗಿದ್ದು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸೂಫಿಸಂ:…

ಮೌನದ ಅನಂತ ಧ್ವನಿಗಳು

‘ದೇವರ ಮೌನ’ ಎಂಬ ಪ್ರಯೋಗದೊಂದಿಗೆ ಮುಸ್ಲಿಮ್ ವಿದ್ವಾಂಸ ಪರಂಪರೆ ಹೇಗೆ ಅನುಸಂಧಾನ ನಡೆಸಿದೆ ಎಂದು ನಾನು ಆಗಾಗ್ಗೆ ಚಿಂತಾಮಗ್ನನಾಗುತ್ತೇನೆ. “ಕನಿಷ್ಠ ಒಂದು ಬಾರಿಯಾದರೂ ಅದನ್ನು ಆಲಿಸಲು ಪ್ರಯತ್ನಿಸು” ಎಂದವರು ಉತ್ತರಿಸಬಹುದು. ಇಲ್ಲದಿದ್ದರೆ “ಅವರಿಗೆ…

ಕನಸಿನಲ್ಲಿ ನಡೆದ ವಿಧಿ

ಕನಸುಗಳಿಗೆ ನಮ್ಮ ಜೀವನದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಅಜ್ಞಾತ ಹಾಗೂ ಅಂತರ್ಗತವಾಗಿರುವುದನ್ನೂ ಬಹಿರಂಗಪಡಿಸುವ ಸಾಮರ್ಥ್ಯ ಇದೆ. ಅವು ಭವಿಷ್ಯವನ್ನು ನೋಡುವ ನಮ್ಮ ಮನಸ್ಸಿನ ನಿಗೂಢ ಶಕ್ತಿಯನ್ನು ಪ್ರತಿನಿಧಿಸುತ್ತವೆ. ನಾವು ಕನಸಿನಲ್ಲಿ ಕಂಡ…

ಮಿಥ್ಯೆಗಳಿಂದ ತುಂಬಿದ ಲಕ್ಷದ್ವೀಪ ಇತಿಹಾಸ ಮತ್ತು ಸಾಹಿತ್ಯ

ಇತ್ತೀಚೆಗೆ ಲಕ್ಷದೀಪ ಚರಿತ್ರೆಯಾಧಾರಿತ ಕಾದಂಬರಿಯೊಂದನ್ನು ಓದಿದೆನು. ಲಕ್ಷದ್ವೀಪ ಇತಿಹಾಸದ ಭಾಗವಾದ ಬೀ ಕುಂಞೆ ಬೀಯವರ ಜೀವನಾಧಾರಿತ ಆ ಕಾದಂಬರಿಯು ಇನ್ನೇನು ಹೊರತರಬೇಕಿತ್ತಷ್ಟೆ. ಕಣ್ಣೂರು ಅರಕ್ಕಲ್ ರಾಜ್ಯಭಾರದ ಕ್ರೂರತೆಯನ್ನು ಕಟ್ಟಿಕೊಡುವ ಘಟನೆಯೊಂದನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ.…

ಮಲಾಯ್ ದ್ವೀಪಗಳಲ್ಲಿ ಹರಡಿದ ಮಲಬಾರಿ ಬೇರು

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ ‘ದಾರು ತರೀಂ’ ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್ವಾಂಸ ಯೆಮನಿನ ಹಬೀಬ್ ಉಮರ್ ಬಿನ್ ಹಾಫಿಝ್‌ ರ ಪ್ರಮುಖ ಶಿಷ್ಯರಾದ ಹಬೀಬ್ ಮಹದಿ…

ಮದ್‌ಹಬೇ ಇಷ್ಕ್: ಗಾಢ ಪ್ರೇಮದ ಸೂಫೀ ಹಾದಿ..

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನೂ ಹುಟ್ಟಲಿರುವ ಎಲ್ಲಾ ಮಾನವರು ಸೃಷ್ಟಿಕರ್ತನ ಮುಂದೆ ಒಟ್ಟುಗೂಡುತ್ತಾರೆ. ಸೃಷ್ಟಿಕರ್ತನು ಅನೇಕ ವಾಗ್ದಾನಗಳನ್ನು ಮಾಡುತ್ತಾನೆ,…

ಹಿಂದೂ ಮಹಾಸಾಗರದ ನಾವಿಕರು ಮತ್ತು ಸಮುದ್ರದ ಸಂತರು

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾರದಿಂದ ಒಮಾನಿನ ಸಲಾಲಾದಲ್ಲಿರುವ ಜೆಟ್ಟಿಯಲ್ಲಿ ಹವಾಮಾನ ವರದಿಗಳ ಆಧಾರದ ಮೇಲೆ ಮರದ ಹಡಗು ಒಂದನ್ನು ಲಂಗರು…

ಒಮಾನ್ ಕುಮ್ಮಾ: ಪರಂಪರೆಯ‌ ಕೊಂಡಿ

ಒಮಾನಿನ ರಾಜಧಾನಿ ಮಸ್ಕತಿನಲ್ಲಿ ಸಫೀಯ ಅಹ್ಮದ್ ಅಲ್ಲಹದಿ ರಕ್ತಮಯ ಬಣ್ಣದ ನೂಲು ಬಳಸಿ ಒಮಾನ್ ಅರೇಬಿಯನ್ ಕುಮ್ಮ [Kumma] ಎಂದು ಹೆಸರುವಾಸಿಯಾದ ಒಮಾನ್ ಟೋಪಿಯನ್ನು‌ ತನ್ನ ಮನೆಯಲ್ಲೇ ಕುಳಿತು ತಯಾರಿಸುತ್ತಾರೆ. ಗಟ್ಟಿಯಾದ ಬಿಳಿ…

ಫ್ಯೂದರ್ ದಸ್ತೋವಸ್ಕಿ, ಪ್ರವಾದಿ ಮತ್ತು ಕುರಾನ್

“ಕಾಂಟ್‌ನ Critique of Pure Reason ಹಾಗೂ ಕುರಾನ್ ಅನ್ನು ನನಗೆ ಕಳುಹಿಸಿಕೊಡು, ರಹಸ್ಯವಾಗಿ ಕಳುಹಿಸಿ ಕೊಡುವುದಿದ್ದರೆ ಹೆಗೆಲ್‌ನ ಬರೆಹಗಳನ್ನೂ ಕಳುಹಿಸು, ಮುಖ್ಯವಾಗಿ ಹೆಗೆಲ್‌ನ History of Philosophy”.ಇದು ಫೆಬ್ರವರಿ 22, 1854…

ರೂಮಿಯನ್ನು ಕಾಡಿದ ಕಥೆಗಳು

4. ಕರಡಿಯೊಂದಿಗೆ ಗೆಳೆತನ ಉತ್ತರ ಇರಾನಿನ ಪರ್ವತ ಪ್ರದೇಶದಲ್ಲಿ ಬಹಳಷ್ಟು ಕಂದು ಕರಡಿಗಳಿದ್ದವು.‌ ಈ ಕರಡಿಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳುತ್ತಾ ಪರ್ವತಗಳ ಮೇಲೆ ಓಡಾಡುತ್ತಿದ್ದವು. ಆದರೆ, ಊರವರು ಎಂದೂ ನೋಡದ, ಆದರೆ ಡ್ರಾಗನ್ ಎಂದು…

ಸೀರಾ ಪುರಾಣಂ : ಉಮರ್ ಪುಲವರ್ ಮತ್ತು ತಮಿಳು ಇಸ್ಲಾಮಿಕ ಸಾಹಿತ್ಯ

” ಭಾರತ ನಮ್ಮ ರಾಷ್ಟ್ರಇಸ್ಲಾಂ ನಮ್ಮ ಜೀವನಮಾರ್ಗ ಮತ್ತುತಮಿಳು ನಮ್ಮ ಭಾಷೆಯೂ ಆಗಿದೆ “ ‘ಮಕ್ಕಾ ನಗರ್ ಮನಾಪಿ’ ಎಂಬ ತಮಿಳು ಕ್ಯಾಸೆಟ್ ಹಾಡು. ‘ದಕ್ಷಿಣ ಭಾರತದಲ್ಲಿರುವವರಾಗಿದ್ದಾರೆ ಭಾರತೀಯ ಮುಸಲ್ಮಾನರ ಪೈಕಿ ಪುರಾತನ…

ರೂಮಿಯನ್ನು ಕಾಡಿದ ಕಥೆಗಳು

1. ಗಿಳಿ ಮತ್ತು ವ್ಯಾಪಾರಿ ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನ ಬಳಿ ಸುಂದರವಾದ ಒಂದು ಗಿಳಿಯಿತ್ತು. ಅದು ಮಾತನಾಡುತ್ತಾ, ಹಾಡುತ್ತಾ ವ್ಯಾಪಾರಿಗೂ, ಗ್ರಾಹಕರಿಗೂ ಮನರಂಜನೆ ನೀಡುತ್ತಿತ್ತು. ಸುತ್ತಮುತ್ತಲ ಊರುಗಳಿಂದ ಜನರು ಆ…

ಮುಸ್ಲಿಮ್ ಮಹಿಳೆಯರ ಹಿಜಾಬ್, ಸ್ತ್ರೀವಾದ ಮತ್ತು ವಸಾಹತುಶಾಹಿತ್ವ

ತಮ್ಮ ಸ್ವಂತ ಬದುಕಿನ ಬಗ್ಗೆ ನಿರ್ಧಾರ ಮಾಡುವ ಆಯ್ಕೆ ಹೊಂದಿರುವ ಮುಸ್ಲಿಂ ಮಹಿಳೆಯರನ್ನು ಸಾಮಾನ್ಯವಾಗಿ ಪಿತೃಪ್ರಭುತ್ವದ ಸಂತ್ರಸ್ತರು ಎಂದು ಒತ್ತು ಕೊಟ್ಟು ನೋಡುವ ದೃಷ್ಟಿಕೋನದಿಂದ ಅಪಾಯಕಾರಿ ದುಷ್ಪರಿಣಾಮಗಳಿವೆ. ಇಂಗ್ಲಿಷ್ ಆಂಡ್ ಫಾರಿನ್ ಲ್ಯಾಂಗ್ವೇಜ್…

ಧರ್ಮ, ವಿಜ್ಞಾನದ ನಡುವಿನ ಅನುಸಂಧಾನ ಮತ್ತು ಹೊಸ ಮಾನವಶಾಸ್ತ್ರೀಯ ಅಧ್ಯಯನಗಳು

ಭಾರತದಲ್ಲಿರುವ ಕೆಲವೇ ಕೆಲವು ಸಯನ್ಸ್‌ ಆಂಡ್‌ ಟೆಕ್ನೋಲಜಿ ಸ್ಟಡೀಸ್‌ (STS) ಸಂಶೋಧಕರಲ್ಲಿ ರೆನಿ ಥೋಮಸ್‌ ಕೂಡಾ ಒಬ್ಬರು. ಅವರು ಸದ್ಯ ಭೋಪಾಲದ IISER ಸಂಸ್ಥೆಯಲ್ಲಿ ಸಾಮಾಜಿಕ ಮಾನವ ಶಾಸ್ತ್ರ (social anthropology) ವಿಭಾಗದ…

ಸನ್ಮತಿ ನೀಡುವ ‘ಈಶ್ವರ ಅಲ್ಲಾ ತೇರೋ ನಾಮ್’

(ಪುಸ್ತಕ ವಿಮರ್ಶೆ) ಡಾ.ಮಹೇಶ್‌ ಕುಮಾರ್ ಅವರು ‘ಈಶ್ವರ್ ಅಲ್ಲಾ ತೇರೋ ನಾಮ್’ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. (ಪ್ರಕಾಶಕರು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು, ೨೦೧೪.) ಇದು ಬಾಬಾ ಬುಡನ್‌ ಗಿರಿ ದರ್ಗಾದ ವಿವಾದ ಮತ್ತು…

ಆಧುನಿಕ ಅರ್ಥಶಾಸ್ತ್ರ ಮತ್ತು ಇಬ್ನು ಖಲ್ದೂನರ ದೃಷ್ಟಿಕೋನ

ಜ್ಞಾನದ ಪೂರ್ವಾಧುನಿಕ ಇತಿಹಾಸದಲ್ಲಿ ಆಧುನಿಕ ಜ್ಞಾನಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅನೇಕ ಅರಿವಿನ ಮೂಲಗಳು ಮತ್ತು ಸೈದ್ಧಾಂತಿಕ ವಿಧಾನಗಳು ಇದ್ದವು. ವಿಜ್ಞಾನ ಮತ್ತು ಜ್ಞಾನ ಸಂಪ್ರದಾಯಗಳನ್ನು ವಿರೋಧಿಸಿದ ಯುರೋಪ್ ಇತಿಹಾಸದ ಕರಾಳ ಕಾಲದಲ್ಲಿ, ಇಸ್ಲಾಮಿಕ್…

ಚರಿತ್ರೆ ಮತ್ತು ವರ್ತಮಾನಗಳ ನಡುವೆ ದೆಹಲಿಯ ಸಾಂಸ್ಕೃತಿಕ ಸೊಬಗು

ದೆಹಲಿಯ ಸುಡು ಬಿಸಿಲಿನಲ್ಲಿ, ಹೇಗಾದರೂ ರೂಮನ್ನು ತಲುಪಿ ಬಿಡುವ ತರಾತುರಿಯಲ್ಲಿ ನಾನಿದ್ದೆ. ಹಳೆಯ ಟ್ಯಾಕ್ಸಿಯೊಂದರಲ್ಲಿ ಮಡದಿ ಮತ್ತು ಮಗು ನನ್ನ ಜೊತೆಗಿದ್ದರು. ಟ್ಯಾಕ್ಸಿಯು ಗಲ್ಲಿಯೊಂದರ ಸವೆದ ರಸ್ತೆಯ ಮೂಲಕ ಮುಂದೆ ಸಾಗುತ್ತಿತ್ತು. ನಗರದ…

ಕಲೆಯ ನೀಲಾಕಾಶವನ್ನು ಹುಡುಕುತ್ತಾ ತೈಮೂರಿನ ನಾಡಿನಲ್ಲಿ

ಉಝ್ಬೇಕಿನತ್ತ ಯಾತ್ರೆ ಬೆಳಸಬೇಕೆಂಬ ಬಯಕೆ ಬಹುದಿನಗಳಿಂದಲೇ ಮನಸ್ಸಿನಲ್ಲಿತ್ತು. ಅಲ್ಲಿನ ಆರ್ಟ್, ಆರ್ಕಿಟೆಕ್ಚರ್ ಮತ್ತು ಆಧ್ಯಾತ್ಮಿಕತೆಯನ್ನು ಗ್ರಹಿಸುವುದು ನನ್ನ ಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು. ಹೀಗಿರುವಾಗ ತುರ್ಕಿ ಕೇಂದ್ರವಾಗಿ ಕಾರ್ಯಾಚರಿಸುವ ‘ದೀನ್ ಫೌಂಡೇಶನ್’ ಉಝ್ಬೇಕಿನಲ್ಲಿ ಜ್ಯಾಮೆಟ್ರಿ…

ಸೌಂದರ್ಯಶಾಸ್ತ್ರ : ಇಸ್ಲಾಮಿಕ್ ಕಲೆಯಲ್ಲಿ ಸೌಂದರ್ಯದ‌ ಅನ್ವೇಷಣೆ

16ನೇ ಶತಮಾನದ ಪ್ರಾರಂಭದಿಂದ 19ನೇ ಶತಮಾನದ ಪೂರ್ವಾರ್ಧದ ತನಕ ಅಟೋಮನ್ ಸಾಹಿತ್ಯಗಳ ಪೈಕಿ ಕ್ಲಾಸಿಕಲ್ ಕಾವ್ಯ ಪರಂಪರೆಯಾದ ‘ದಿವಾನ್ ಸಾಹಿತ್ಯ’ವು ತನ್ನ ಉತ್ತುಂಗತೆಯನ್ನು ತಲುಪಿತ್ತು. ಈ ಸುದೀರ್ಘ ಅವಧಿಯು ತನ್ನದೇ ಆದ ತತ್ವಗಳ…

ಗುಲಾಮರ ಬಗ್ಗೆ ಇದ್ದ ತಥಾಕಥಿತ ಧೋರಣೆಯನ್ನು ಬದಲಾಯಿಸಿದ ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ ಅಮೆರಿಕಾಗೆ ಸಾಗಿಸುವ ಮೊದಲು ಒಂದು ಜಗತ್ತು ಇತ್ತು.ಒಮರ್ ಬಿನ್ ಸೈದ್ ರಂಥಹ ಪಂಡಿತರು, ಇಬ್ರಾಹಿಂ…

ಸೂಫಿ ಚಿಂತನೆಯಲ್ಲಿ ಯಾತ್ರೆಗಳ ಭಿನ್ನ ಆಯಾಮಗಳು

ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ ‘ಸಫರ್’ ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.’ಯಾತ್ರೆ’ ಎಂಬುವುದನ್ನು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಲ್ಲಟಗೊಳ್ಳುವುದನ್ನು ಸೂಚಿಸಲಾಗಿ ಬಳಸಲಾದರೆ, ಸೂಫಿ ಪಂಥದಲ್ಲಿ…

ಉರ್ದು

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟುಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿ ದಖ್ಖನಿನ ವಲಿಯು ಕೈ ತುತ್ತು ತಿನ್ನಿಸಿದಸೌದಾನ ಕವಿತೆಗಳು ಹೆಚ್ಚಿಸಿದೆ ಅಂದಮೀರ್ ನ ಮಹಿಮೆ ನಡೆಯಲು…

ವಂಶಾವಳಿಯ ಜಾಡು ಹುಡುಕುತ್ತಾ ಗೀಲಾನ್ ಗ್ರಾಮದ ಸಂದರ್ಶನ

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜೀಲಾನಿ) ಅವರು ಪರ್ಷಿಯಾದ ಗೀಲಾನ್ ಪ್ರಾಂತ್ಯದ ತಮ್ಮ ತವರೂರನ್ನು…

ರಾಜಕೀಯ ಪ್ರಕ್ಷುಬ್ಧತೆ ಮತ್ತು ಮುಸ್ಲಿಂ ಜಗತ್ತು

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ್ಷಗಳು, ಪಂಥೀಯತೆ, ಸಾಮಾಜಿಕ ಬದಲಾವಣೆ, ಆರ್ಥಿಕ ಸಮಸ್ಯೆಗಳು ರಾಜಕೀಯ ಬಿಕ್ಕಟ್ಟುಗಳನ್ನು ತಂದಿಟ್ಟಿದ್ದೇ ಅಲ್ಲದೆ ಮುಸ್ಲಿಂ ಜಗತ್ತಿನ…

ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ…

ಜಿದ್ದಾ : ಯಾತ್ರಿಕರಿಂದ ನಿರ್ಮಿತವಾದ ಜಾಗತಿಕ ನಗರ

ಜನರಿಂದ ತುಂಬಿ ತುಳುಕುತ್ತಿರುವಬಾಬೆಲ್‌ನ ಮೋಡಿಯೇಓ ಜನರೇ..ಮೆಕ್ಕಾದ ಬಾಗಿಲೇ ಖಂಡಿತವಾಗಿಯೂಜಿದ್ದಾವೇ ಮೊದಲುಜಿದ್ದಾವೇ ಕೊನೆಯೂ ತಲಾಲ್  ಹಂಝರ ‘ಜಿದ್ದಾ ಗೈರ್’ ಎಂಬ ಕವಿತೆಯ ಆಯ್ದ ಸಾಲುಗಳಿವು. ಜಿದ್ದಾ ನಗರವು ಕೈರೋ,ಬೈರೂತ್, ಕಾಸಾಬ್ಲಾಂಕಾ ಹಾಗೂ ಇನ್ನಿತರ ಅರಬ್…

ಅಲ್‌ ಬಿರೂನಿ ಕಂಡ ಭಾರತ

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರದಲ್ಲಿ ನಿರತರಾಗಿದ್ದ ಅಲ್ ಬಿರೂನಿಯ ವಿದ್ವತ್ ಕೊಡುಗೆ ಮತ್ತು ಅವರ ಕಿತಾಬುಲ್ ಹಿಂದ್ (ಹಿಂದುಸ್ಥಾನದ ಪುಸ್ತಕ)…

ಒಂದು ಸಮುದ್ರ ಮತ್ತು ನಾಲ್ಕು ಕಾದಂಬರಿಕಾರರು: ಹಿಂದೂ ಮಹಾಸಾಗರದ ಸಾಹಿತ್ಯ ವಿಶ್ವವನ್ನು ಮರುರೂಪಿಸುವ ಬಗೆ

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ.…

‘ಅರಬ್ಬಿ ಕಡಲಿನ ರಾಜಕುಮಾರಿʼ ಕೊಚ್ಚಿಯ ಸೂಫಿ ಜಾಡು

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. ‘ಅರಬ್ಬಿ ಕಡಲಿನ ರಾಜಕುಮಾರಿ’ ಎಂದೇ ಪ್ರಸಿದ್ಧಗೊಂಡಿರುವ ಕೊಚ್ಚಿ ಕೇರಳದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.…

ಇಸ್ಲಾಮಿಕ್ ಜ್ಯಾಮಿತಿ ರಚನೆ: ಕಲೆ ಮತ್ತು ಚರಿತ್ರೆ

‘ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ’ (ಪವಿತ್ರ ಖುರ್‌ಆನ್ 27:88).ಈ ಒಂದು ಸಣ್ಣ ಲೇಖನದಲ್ಲಿ ನಾನು ಇಸ್ಲಾಮಿಕ್ ಕಲೆಯ ಆಧ್ಯಾತ್ಮಿಕ ಸ್ವರೂಪ, ಇತಿಹಾಸ ಮತ್ತು ಅದು ಇಸ್ಲಾಮಿಕ್ ಸಮಾಜದ ಮೇಲೆ ಬೀರಿದ…

ಅಲ್- ಖೈರುವಾನ್: ಆಫ್ರಿಕಾದ ಪ್ರಥಮ ಇಸ್ಲಾಮಿಕ್ ನಗರ

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕೊಳ್ಳಲು ಅರಬ್- ಮುಸ್ಲಿಮರಿಗೆ ಅರ್ಧ ಶತಮಾನಗಳೇ ಹಿಡಿಯಿತು. ‘ಕಾರ್ತೇಜ್’ ( carthage ) ಭದ್ರಕೋಟೆಯನ್ನಾಗಿಸಿ ಕಾರ್ಯ ನಿರ್ವಹಿಸುತ್ತಿದ್ದ…

ನೂಬಿಯನ್ ದರ್ವೇಶಿಯ ಅಂತರ್ದೃಷ್ಟಿ

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ್ಟಡ ಸಂಕೀರ್ಣದಲ್ಲಿ ಅಂದು ಸೌದಿಯ ಕಾನ್ಸುಲೇಟ್ ಜನರಲ್ ಕಾರ್ಯಾಚರಿಸುತ್ತಿತ್ತು.…

ಮುಸ್ಲಿಂ ಸಾಮ್ರಾಜ್ಯದಲ್ಲಿ ವಕ್ಫ್‌: ಉದ್ದೇಶ ಮತ್ತು ಹಿನ್ನೆಲೆ

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್ಮಿಕ ದತ್ತಿಗಳ(ಅವ್ಕಾಫ್/ವಕ್ಫ್) ಹರಡುವಿಕೆ ವ್ಯಾಪಕಗೊಂಡವು. ನಂತರದ ಸಹಸ್ರಮಾನದತ್ತ ಗಮನಿಸಿದರೆ ಮುಸ್ಲಿಂ ಸಮುದಾಯವು ವಾಸಿಸುತ್ತಿದ್ದ ಭೂ…

ಬೇಟೆ

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂದರೆ, ಅವಳು ಇಲ್ಲಿಂದ ಕಣ್ಮರೆಯಾದದ್ದಾಗಲೀ, ಈಗ ಮತ್ತೆ ಪ್ರತ್ಯಕ್ಷವಾದದ್ದಾಗಲಿ ಯಾರ ಗಮನಕ್ಕೂ…

ಭಾರತದ ಇತಿಹಾಸವನ್ನು ರೂಪಿಸಿದ ಎರಡು ಭಾಷೆಗಳು

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ಮೂರನೇ ಪ್ರಪಂಚ, ಮಧ್ಯ ಸಾಮ್ರಾಜ್ಯ ಮುಂತಾದವುಗಳು ಸಾಂಸ್ಕೃತಿಕ ಚಹರೆ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೆಲ…

ಮುಸ್ಲಿಮ್ ತತ್ವಜ್ಞಾನಿಗಳು

ಇಬ್ನು ಸೀನಾ (ಅವಿಸೆನ್ನಾ) ಭಾಗ – 1 ಅವಿಸೆನ್ನಾರ ಪೂರ್ವಿಕರು ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ ‘ಇರಾನ್‌ಶಹ್ರಿ’ ಎಂದು ಹೇಳಲಾಗುತ್ತದೆ. ಅವರು ತತ್ವಶಾಸ್ತ್ರವನ್ನು ಪೂರ್ವಕ್ಕೆ ತರಲು ಪ್ರಯತ್ನಿಸಿದರು; ಪೂರ್ವವನ್ನು…

ಮುಸ್ಲಿಮರ ಆರೋಗ್ಯ ಮತ್ತು ಇಸ್ಲಾಮೋಫೋಬಿಯಾ

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒಂದು ವಿಷಣ್ಣತೆಯಲ್ಲೇ ಕಳೆದುಹೋಯಿತು. ವರ್ಷದ ಆರಂಭದಿಂದಲೇ ದೇಶದಲ್ಲಿ ಇಸ್ಲಾಮೋಫೋಬಿಕ್…

‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮಾಜವಾದಿ ಚಳವಳಿಯ ಫಲವಾಗಿ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಯಿತು. ಅಂತರಾಷ್ಟ್ರೀಯ ವರ್ಕಿಂಗ್ ವಿಮೆನ್ಸ್ ದಿನವೆಂದು ಅಂಗೀಕರಿಸಲ್ಪಟ್ಟಿದ್ದ ಈ ದಿನವನ್ನು 1967ರಲ್ಲಿ…

‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ

[ತೋಪ್ಪಿಲ್ ಮುಹಮ್ಮದ್ ಮೀರಾನ್(1944–2019) ಆರು ಕಾದಂಬರಿಗಳನ್ನು ಹಲವು ಸಣ್ಣಕತೆಗಳನ್ನೂ ಬರೆದಿದ್ದಾರೆ. 1997 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ‘ಸೈವು ನರಕ್ಕಾಲಿ’ ಕೃತಿಗಾಗಿ ಪಡೆದಿದ್ದಾರೆ. ‘ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಅವಾರ್ಡ್’ ಹಾಗೂ…

ರಾಷ್ಟ್ರೀಯತೆಯ ಹುಸಿ ದುರಭಿಮಾನದ ಪೊಳ್ಳು ಕಥೆಗಳು: ಎರಿಕ್ ಹಾಬ್ಸ್ ಬಾಮ್ ಕೃತಿ ವಿಮರ್ಶೆ

“ಎರಿಕ್ ಹಾಬ್ಸ್ ಬಾಮ್ ರಾಷ್ಟ್ರೀಯತೆಯನ್ನು ಇಷ್ಟಪಟ್ಟಿರಲಿಲ್ಲ” ಎಂದು ವಿವರಿಸುತ್ತಾರೆ ಡೊನಾಲ್ಡ್ ಸಾಸೂನ್. ರಾಷ್ಟ್ರೀಯತೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರರಾದ ಹಾಬ್ಸ್ ಬಾಮ್ ಬರೆದ ಪ್ರಬಂಧಗಳ ಸಮಾಹಾರಕ್ಕೆ ಮುನ್ನುಡಿ ಬರೆಯುತ್ತಾ ಅವರು…

ಇಸ್ಲಾಮಿಕ್ ನಾಗರಿಕತೆಯ ಅನನ್ಯ ಕೃತಿಗಳು ಮತ್ತು ರಚನಾ ಪರಂಪರೆ

ಜಾಗತಿಕವಾಗಿ ಪಠ್ಯ ರೂಪದಲ್ಲಿರುವ ಹಲವು ಕೃತಿಗಳು ಮನುಷ್ಯರ ವಿಭಿನ್ನವಾದ ದೃಷ್ಟಿಕೋನಗಳನ್ನು, ಜೀವನಶೈಲಿಗಳನ್ನು ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಪ್ರತಿಫಲಿಸುತ್ತದೆ. ಆಧುನಿಕ ಪ್ರಕಟಣೆಗಳ ಆಗಮನಕ್ಕಿಂತ ಮೊದಲು ಧಾರಾಳ ಪುಸ್ತಕಗಳನ್ನು ರಚಿಸುವುದು ಹಾಗೂ ಅವುಗಳನ್ನು ಮತ್ತೆ ನಕಲು…

ಬಾಹ್ಯಾಕಾಶ ಚಲನೆ ಹಾಗೂ ಆಧುನಿಕ ಮುಸ್ಲಿಮರ ದೃಷ್ಟಿಕೋನಗಳು

ಸರಿಸುಮಾರು ಸಾವಿರ ವರ್ಷಗಳ ಹಿಂದೆ ಮುಸ್ಲಿಂ ಚಿಂತಕರು, ವಿದ್ವಾಂಸರು ವೈಜ್ಞಾನಿಕ ಅಧ್ಯಯನದ ಸುವರ್ಣ ಯುಗಕ್ಕೆ ಮುಹೂರ್ತವಿಟ್ಟಿದ್ದಾರೆ. ಅವರು ಗ್ರೀಕ್, ಸಂಸ್ಕೃತ ಭಾಷೆಗಳಲ್ಲಿದ್ದ ಖಗೋಳಶಾಸ್ತ್ರದ ಕೃತಿಗಳನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿ ಹೊಸ ಜಗತ್ತನ್ನು…

ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ…

ಮಕ್ಕಾದಿಂದ ಮಾಲ್ಕಂ ಎಕ್ಸ್‌ ಬರೆದ ಪತ್ರ

ಭೂಮಿಯ ಮೇಲಿನ ಅತ್ಯಂತ ಪವಿತ್ರ ನಗರವೂ, ಮುಸ್ಲಿಮೇತರರಿಗೆ ತಮ್ಮ ಕಣ್ಣಿನಿಂದಲೂ ಅನುಭವಿಸಲಾಗದ, ಪರಿಶುದ್ಧ ಮಕ್ಕಾ ನಗರದಲ್ಲಿ ನಾನು ಈಗಷ್ಟೇ ನನ್ನ ಹಜ್‌ ಯಾತ್ರೆ ಮುಗಿಸಿದ್ದೇನೆ. ಪ್ರತಿಯೊಬ್ಬ ಮುಸ್ಲಿಮನ ಬದುಕಿನಲ್ಲೂ ಈ ಪುಣ್ಯ ಯಾತ್ರೆ…

ಆಫ್ರಿಕನ್ ಗ್ರಂಥ ಪರಂಪರೆ; ಇತಿಹಾಸ ಹಾಗೂ ವರ್ತಮಾನ

ತನ್ನ ಮೂವತ್ತನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದ ಕೇಪ್ ಮಲಾಯ್ ಜನಾಂಗದಲ್ಲಿ ಜನಿಸಿದ ಸಾರಾ ಜಾಪ್ಪೆ ಮಾತ್ರ ‘ಆಫ್ರಿಕನ್ಸ್’ ಕುರಿತು ಮಾತನಾಡಲು ಸಿಕ್ಕ ವನಿತೆ. ಟೋಂಬೋಕ್ಟೋ ಮ್ಯಾನುಸ್ಕ್ರಿಪ್ಟ್ಸ್ ಪ್ರಾಜೆಕ್ಟಿನ (Tombouctou Manuscripts Project)…

ಹಳದಿ ನಾಯಿ

ಭಾಗ-3 ನಾನು ಅಲ್ಲಿಂದ ಎದ್ದು, ಮುಂದೆ ಸಾಗಿದೆ. ಸಯ್ಯದ್ ರಜಿ಼ಯ ನಿವಾಸದ ಮುಖ್ಯದ್ವಾರದ ಬಳಿ ದೊಡ್ಡ ಹಳದಿ ನಾಯಿಯೊಂದು ನಿಂತಿರುವುದನ್ನು ಅಲ್ಲಿಂದ ಸಾಗುವಾಗ ಕಂಡೆ. ಈ ಹಳದಿ ನಾಯಿಯು ಶೇಖ್ ಹಮ್ಜಾನ ಭವನದ…

ಹಳದಿ ನಾಯಿ

ಭಾಗ-2 ಆ ಹಿರಿಯರು ತಮ್ಮ ಪ್ರವಾಸದಿಂದ ಹಿಂತಿರುಗಿದಾಗ ರಸ್ತೆಯ ಪಕ್ಕದಲ್ಲಿ ದೈವಿ ಕಾಂತಿಯುಳ್ಳ ಮುಖಮುದ್ರೆಯ ವ್ಯಕ್ತಿಯೊಬ್ಬ ಚಪ್ಪಲಿ ಹೊಲಿಯುತ್ತಿದ್ದನು ಮುಂದೆ ಸಾಗಿ ನೋಡಿದರೆ, ಅಲ್ಲೊಂದು ಗೋಷ್ಠಿ ನಡೆದಿತ್ತು. ನಗರದ ವಿದ್ಯಾವಂತ ಜನರು ಅಲ್ಲಿ…

ಹಳದಿ ನಾಯಿ

ಭಾಗ-೧ ನರಿಮರಿಯಂಥ ವಸ್ತುವೊಂದು ಬಾಯಿಯಿಂದ ಹೊರಬಂದಿತು. ಅದನ್ನು ದುರುಗುಟ್ಟಿ ನೋಡಿದನು. ನಂತರ ಅವನು ಕಾಲಿಂದ ತುಳಿದನು. ಆದರೆ ತುಳಿದಷ್ಟು ಆ ನರಿಮರಿ ದೊಡ್ಡದಾಗುತ್ತ ಹೋಯಿತು.ಸೂಫಿ ಗುರುಗಳು ಈ ಕಥನವನ್ನು ನುಡಿದು ಮೌನಿಯಾದರು. ನಾನು…

ಅಲ್- ಫಿಜಿರೀ : ಪರ್ಶಿಯನ್ ಕೊಲ್ಲಿಯ ಸಮುದ್ರ ಸಂಗೀತ

1930ನೇ ದಶಕದ ವಿಶಾಲವಾದ ತೈಲ ನಿಕ್ಷೇಪಗಳ ಆವಿಷ್ಕಾರಕ್ಕಿಂತಲೂ ಪೂರ್ವ ಕಾಲದಲ್ಲಿ ಪರ್ಶಿಯನ್ ಕೊಲ್ಲಿಯಲ್ಲಿನ ಜನಜೀವನ ವಿಧಾನ ಇಂದಿನ ಸ್ಥಿತಿಗತಿಗಳಿಗಿಂತ ಬಹಳ ಭಿನ್ನಾವಸ್ಥೆಯಲ್ಲಿತ್ತು. ಆಧುನಿಕ ಬಹ್ರೇನ್, ಕತಾರ್, ಕುವೈತ್ ಮತ್ತು ಸಮೀಪ ಪ್ರದೇಶದಲ್ಲಿನ ಪುರುಷರು…

‘ಎ ಸ್ಮಾಲ್ ಡೆತ್’ – ‘ಇಬ್ನ್-ಅರಬಿ’ಯೆಡೆಗೊಂದು ಪಯಣ

ಹದಿನೇಳನೆಯ ಶತಮಾನದ ಹೊತ್ತಿಗೆ ಅರಬ್ ಪ್ರಪಂಚದಲ್ಲಿ ಕಾದಂಬರಿ ಸಾಹಿತ್ಯವು ಸಣ್ಣ ಪ್ರಮಾಣದಲ್ಲಿ ಪರಿಚಿತವಾಗಿದ್ದರೂ, ಆರಂಭಿಕ ದಿನಗಳಲ್ಲಿ ಇವು ಕೇವಲ ಅನುವಾದಿತ ಕೃತಿಗಳು ಮಾತ್ರವಾಗಿತ್ತು. ಇಸ್ಲಾಮಿಕ್ ಜೀವನ ಶೈಲಿಯೆಡೆಗಿನ ಸಾಹಿತ್ಯದ ನವ್ಯ ರೂಪದ ಅಭಿವ್ಯಕ್ತಿಯ…

ವಿಶ್ವ ಸಂಚಾರಿ ಕಬಾಬಿನ ಕಥೆ

ಬಹುಶಃ ನಿಮಗೆ ‘ಶೀಶ್ ಕಬಾಬ್’ ಅಂದರೆ ಏನೆಂದು ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಅದರ ಅರ್ಥವೇನೆಂದು ಗೊತ್ತಿರುವ ಸಂಭಾವ್ಯ ಕಡಿಮೆ. ತುರ್ಕಿ ಭಾಷೆಯಲ್ಲಿ ‘ಸೀಸ್’ ಅಂದರೆ ಖಡ್ಗ ಎಂದೂ, ಕಬಾಬ್ ಅಂದರೆ ಮಾಂಸ…

ರೂಮಿಯಿಂದ ಶಮ್ಸ್ ತಬ್ರೇಝರ ಮಡಿಲಿಗೆ

ಭಾಗ ಎರಡು ರೂಮಿಯನ್ನು ಕಣ್ತುಂಬಿಕೊಂಡ ನಾವು ಶಮ್ಸ್ ತಬ್ರೇಝರನ್ನು ಅರಸುತ್ತಾ ಮುಂದೆ ನಡೆದೆವು.ವಾಸ್ತವದಲ್ಲಿ ನಾನು ಮೊದಲಾಗಿ ತಬ್ರೇಝರನ್ನು ಕೇಳಿದ್ದೇ ರೂಮಿಯೆಂಬ ಸೇತುವೆಯ ಮುಖಾಂತರವಾಗಿತ್ತು.ತುರ್ಕಿಗೆ ವೀಸಾ ಮಂಜೂರಾದ ಬಳಿಕ ವಿಲಿಯಂ ಚಿಟ್ಟಿಕ್ ಇಂಗ್ಲಿಷ್‌ಗೆ ಅನುವಾದಿಸಿದ…

ಮನುಷ್ಯರ ನಡುವಿನ ಪ್ರೇಮ ಹಾಗೂ ಇಬ್ನ್ ಹಸ್ಮ್ ರ ಚಿಂತನೆಗಳು

ಪ್ರಾಚೀನ ಕಾಲದ ವಿದ್ವಾಂಸರು ಧರ್ಮಶಾಸ್ತ್ರದ ಜತೆಗೆ ದೈವ ಶಾಸ್ತ್ರ, ವೈದ್ಯಶಾಸ್ತ್ರ, ಮನೋವೈಜ್ಞಾನಿಕ ಶಾಸ್ತ್ರ ಹಾಗೂ ಇತರ ಶಾಸ್ತ್ರಗಳ ವಿವಿಧ ಮಜಲುಗಳನ್ನು ಆಳವಾದ ಅಧ್ಯಯನ ನಡೆಸಿ ಹಾಗೂ ಚಿಂತಿಸಿ ಬರಹ ರೂಪಕ್ಕೆ ತಂದಿದ್ದಾರೆ. ಅದರಲ್ಲಿ…

ಇಬ್ನು ಅರಬಿ ಸೂಫಿ ದರ್ಶನದಲ್ಲಿ ಮುಹಮ್ಮದೀ ಮೂಲಸ್ವರೂಪ

ಶ್ರೇಷ್ಠ ಸೂಫಿ ದಾರ್ಶನಿಕ ಇಬ್ನು ಅರಬಿ ರವರ ಫುಸೂಸುಲ್ ಹಿಕಮ್ ನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಕುರಿತು ಬರೆದ ಅಧ್ಯಾಯವೊಂದರ ಮೇಲೆ ದಾವೂದ್ ಅಲ್ ಖೈಸರಿ ನೀಡಿದ ವ್ಯಾಖ್ಯಾನದ ಆಧಾರದಲ್ಲಿ ಪ್ರಸ್ತುತ…

ಹಳದಿ ಬಣ್ಣವುಳ್ಳ ಸೌತ್ ಆಫ್ರಿಕಾದ ಗ್ರಂಥಗಳು

ಡಚ್ಚರು ವರ್ಣಭೇದ ನೀತಿಯ ಅಂಗವಾಗಿ ‘ಕರಿಯರು’ ಎಂದು ಮುದ್ರೆಯೊತ್ತಿ ಹದಿನೇಳು, ಹದಿನೆಂಟನೇ ಶತಮಾನದಲ್ಲಿ ಮುಸ್ಲಿಮರನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದ ವಿವಿಧ ಭಾಗಗಳಿಂದ ಗುಲಾಮರಾಗಿಯೂ ರಾಜಕೀಯ ಖೈದಿಗಳಾಗಿಯೂ ಕೇಪ್‌‌ ಪಟ್ಟಣಕ್ಕೆ ಕರೆತಂದರು. ‘ಕೇಪ್…

ವಿಜ್ಞಾನದ ಮೂಲಕ ಸತ್ಯವನ್ನರಿಯಲು ಸಾಧ್ಯವೆ?

ಆಶಯ, ಸಿದ್ಧಾಂತ, ವಿಚಾರ, ವಿಧಾನಗಳನ್ನು ಅಳೆಯುವ ಮೀಟುಗೋಲಾಗಿ ಇಂದು ‘ವೈಜ್ಞಾನಿಕತೆ’ ಮಾರ್ಪಟ್ಟಿದೆ. ವೈಜ್ಞಾನಿಕ ಎಂಬ ವಿಶೇಷಣ ಇಂದು ಯಥೇಚ್ಛವಾಗಿ ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿದೆ. ಅವೈಜ್ಞಾನಿಕವೆಂಬ ಹಣೆಪಟ್ಟಿಯಿಂದ ಹೊರಬರಲು ವಿಜ್ಞಾನದ ವಿಷಯಗಳಿಗೆ ಕಿಂಚಿತ್ ಸಂಬಂಧವಿಲ್ಲದ…

ಶೂನ್ಯತೆಯ ಸುಗಂಧ: ಮರುಭೂಮಿಯ ಪರಿಮಳ ಹಾಗೂ ಸೂಫಿಗಳು

ಆಂಡ್ರ್ಯೂ ಹಾರ್ವಿ ತನ್ನ ‘ಪೆರ್ಫ್ಯೂಮ್ ಓಫ್ ದಿ ಡೆಸೆರ್ಟ್’ [ Perfume Of the desert] ಎಂಬ ಪುಸ್ತಕದಲ್ಲಿ ಒಂದು ಸೂಫೀ ಕಥೆಯನ್ನು ಬರೆಯುತ್ತಾರೆ. ಕಥೆ ಹೀಗಿದೆ… ಒಂದು ಸಂಘ ಅರಬಿಗಳು ತನ್ನ…

ದುಃಖಿತ ಕಿತ್ತಳೆ ಹಣ್ಣುಗಳ ನಾಡು

ಕಥೆ ಜಾಫಾದಿಂದ ಅಕಾದ ಕಡೆಗೆ ಹೊರಟಾಗ ನನಗೇನೂ ಬೇಸರವಾಗಿರಲಿಲ್ಲ. ರಜಾ ದಿನಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತೇವಲ್ಲ; ಹಾಗೆಯೇ ಇದು ಕೂಡ ಎಂದು ಅನಿಸಿತ್ತು. ಆ ದಿನಗಳಲ್ಲಿ ಅಹಿತಕರ ಘಟನೆಗಳೇನೂ ಜರುಗಿರಲಿಲ್ಲ.…

ಧರ್ಮ ಮತ್ತು ಪರಿಸರ ಸಂರಕ್ಷಣೆ: ಹುಸೈನ್ ನಸ್ರ್ ರವರ ಒಳನೋಟಗಳು

Bulletin of Atomic Scientist ಸಂಸ್ಥೆಯ ಪ್ರತಿನಿಧಿ ಎಲಿಜಬೆತ್ ಈವ್ಸ್ ಪ್ರಸಿದ್ಧ ಚಿಂತಕ ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸೈಯದ್ ಹುಸೈನ್ ನಸ್ರ್ ಅವರೊಂದಿಗೆ ಪರಿಸರದ…

ಹೌಸ್ ಆಫ್ ವಿಸ್ಡಮ್ ಮತ್ತು ಆಧುನಿಕ ಗಣಿತ ವಿಜ್ಞಾನ

ಹೌಸ್ ಆಫ್ ವಿಸ್ಡಮ್ ಇತ್ತೆಂದು ನಂಬಲು ಕೆಲವರಿಗೆ ಈಗ ಯಾಕೋ ಒಂಥರಾ ಹಿಂಜರಿಕೆ. ನಮ್ಮನ್ನು ನಂಬುವಂತೆ ಮಾಡಲಾಗಿದೆಯೇ ಎಂಬ ಸಂದೇಹ. 13ನೇ ಶತಮಾನದಲ್ಲಿ ನಾಶವಾದ ಈ ಪ್ರಾಚೀನ ಗ್ರಂಥಾಲಯದ ಯಾವುದೇ ಕುರುಹುಗಳು ಉಳಿದಿಲ್ಲ,…

ಮದೀನಾ ಮತ್ತು ಏಥೆನ್ಸ್: ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ-2

ಭಾಗ – 2 ಇಸ್ಲಾಮಿಕ್ ಮತ್ತು ಪಾಶ್ಚಾತ್ಯ ಪರಂಪರೆ ಗಳೆರಡೂ ಕೂಡಾ ಉದಾರ ಕಲೆಗಳೊಂದಿಗೆ ಸಮಾನ ಬದ್ಧತೆಯನ್ನು ಹೊಂದಿತ್ತು. ಆದರೆ ಮುಸಲ್ಮಾನರು ಧಾರ್ಮಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡಲು ಆರಂಭಿಸುವುದರೊಂದಿಗೆ ಒಂದು ವ್ಯಕ್ತಿಯ…

ಸಾವಿತ್ರಿ ಬಾಯಿ ಫುಲೆಯವರನ್ನು ನೆನಪಿಸುವ ದೇಶ ಫಾತಿಮಾ ಶೇಖ್‌ ರನ್ನು ಮರೆತಿದ್ದೇಕೆ?

ಪ್ರತಿ ವರ್ಷ ಜನವರಿ ೩ರಂದು ಭಾರತವು ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನವನ್ನು ಆಚರಿಸುತ್ತದೆ. ಅವರು ಮೊದಲ ಭಾರತೀಯ ಮಹಿಳಾ ಶಿಕ್ಷಕಿಯಾಗಿದ್ದರು ಮತ್ತು ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದ ಮೊದಲಿಗೆಯೂ ಆಕೆಯೇ ಆಗಿದ್ದರು. ಈ…

ಇಸ್ಲಾಮಿಕ್ ನಾಗರಿಕತೆ ಮತ್ತು ಕ್ಯಾಲಿಗ್ರಾಫಿ; ಒಂದು ಇಣುಕು ನೋಟ

ಕ್ಯಾಲಿಗ್ರಾಫಿಯನ್ನು ಕಲಾ ಪ್ರಕಾರವಾಗಿ ಅಭಿವೃದ್ಧಿಪಡಿಸುವುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿರದೆ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿಕೊಂಡಿದೆ. ಚೈನೀಸ್, ಜಪಾನೀಸ್ ಕ್ಯಾಲಿಗ್ರಾಫಿ ಹಾಗೂ ವಾಯುವ್ಯ ಯುರೋಪಿನ ಕೆಲ್ಸ್‌ ಪುಸ್ತಕಗಳನ್ನು ಒಳಗೊಂಡಿರುವ ಬೈಬಲ್ ಕೂಡ…

ಹೃದಯದ ಔಷಧಿಗಳು; ಇಂಡೋ- ಇಸ್ಲಾಮಿಕ್ ವೈದ್ಯಶಾಸ್ತ್ರ ಪರಂಪರೆ

ಸುಗಂಧ ಹಾಗೂ ಹೃದಯ: ಸುಗಂಧ ಹಾಗೂ ಹೃದಯ ಸಂವೇದನೆಯ ನಡುವಿನ ಸಂಬಂಧವು ಇಸ್ಲಾಮಿಕ್ ವೈದ್ಯಶಾಸ್ತ್ರ ಸಂರಚನೆಯ ಪ್ರಮುಖ ಚರ್ಚಾ ವಿಷಯ. ಭಾರತದಲ್ಲಿ ಗ್ರೀಕ್- ಅರೇಬಿಕ್ (ಯುನಾನಿ) ವೈದ್ಯಶಾಸ್ತ್ರ ವಿಜ್ಞಾನದಲ್ಲಿ ನಿಪುಣರಾದ ತತ್ವಜ್ಞಾನಿ ಇಬ್ನ್…

ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು-2

ಭಾಗ – 2 ಸ್ನೇಹ, ಸೌಂದರ್ಯ, ಮತ್ತು ಇಸ್ಲಾಮಿಕ್‌ ಕಲೆ ಖುರ್‌ ಆನಿನಲ್ಲಿ, ಒಟ್ಟಾರೆ ಇಸ್ಲಾಮಿಕ್‌ ಪರಂಪರೆಯಲ್ಲಿ ಮತ್ತು ನಮ್ಮ ನಿತ್ಯ ಬದುಕಿನಲ್ಲಿ ಕೂಡ ಸೌಂದರ್ಯ ಮತ್ತು ಸ್ನೇಹ ಪರಸ್ಪರ ತಳುಕು ಹಾಕಿಕೊಂಡಿರುವಂತದ್ದು.…

ಪ್ರಣಯ ನಿರೂಪಣೆಯ ಪೌರಸ್ತ ಮತ್ತು ಪಾಶ್ಚಾತ್ಯ ಮಾದರಿಗಳು

ನಮ್ಮ ಸಾಮಾಜಿಕ ಸಂಬಂಧಗಳು ಮತ್ತು ಅವುಗಳನ್ನು ವ್ಯಾಖ್ಯಾನಿಸುವ ದೃಷ್ಟಿಕೋನವು ಆಧುನೀಕರಣ ಮತ್ತು ಡಿಜಿಟಲೀಕರಣಗಳಿಂದಾಗಿ ಬಹಳ ಬದಲಾವಣೆಗಳೇ ಆಗಿವೆ. ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಮೇಲೂ ಪರಿಣಾಮ ಬೀರಿದೆ. ಅಂತಹ ಭಾವನೆಗಳನ್ನು ನಿಯಂತ್ರಿಸುವುದೇ ಪ್ರೀತಿ.…

ಭಾರತೀಯ ಮತ್ತು ಇಸ್ಲಾಮಿಕ್ ದಾರ್ಶನಿಕತೆಯಲ್ಲಿ ಕಸ್ತೂರಿಯ ಸುಗಂಧ

ಕಸ್ತೂರಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರೂ, ಅಪರಿಚಿತವಾಗಿಯೇ ಉಳಿದ ಇದರ ಇನ್ನಷ್ಟು ವಿವರಗಳ ಕುರಿತು ಈ ಲೇಖನವು ತಿಳಿಯಪಡಿಸುತ್ತದೆ. ಪ್ರಾಚೀನ ಮತ್ತು ಆಧುನಿಕ ಸುಗಂಧ ವಸ್ತುಗಳ ಜೊತೆಗೆ ಕಸ್ತೂರಿಯ ಮೂಲ, ಇದರ ಗುಣಲಕ್ಷಣಗಳು, ವಿಭಿನ್ನ…

ದೇವರ ಜಾಡು ಹಿಡಿದು ಹೊರಟ ಮಹಿಳಾ ಯಾತ್ರಿಕರು

ನಾನು ಈ ಯಾತ್ರೆ ಆರಂಭಿಸಿದ್ದು ಧರ್ಮಭ್ರಷ್ಟತೆಯ ಮೂಲಕ. ಆಗ ನನಗೆ 15 ವರ್ಷ ವಯಸ್ಸಿರಬಹುದು. ಶಸ್ತ್ರಚಿಕಿತ್ಸೆಯೊಂದನ್ನ ಮುಗಿಸಿ ನಾನು ಪ್ಯಾರಿಸ್‍ನಲ್ಲಿ ಬೇಸಿಗೆ ದಿನಗಳನ್ನು ಕಳೆಯುತ್ತಿದೆ. ವಾಸ್ತವದಲ್ಲಿ ಈ ಶಸ್ತ್ರಚಿಕಿತ್ಸೆ ನನ್ನ ಆರೋಗ್ಯದ ಜತೆಗೆ…

ಮುಸ್ಲಿಂ ವಿದ್ವಾಂಸರ ವ್ಯಾಪಾರ ಮತ್ತು ಜ್ಞಾನದ ಪ್ರಸಾರ

ಇಮಾಮ್ ದಹಬಿಯ ಪುಸ್ತಕವಾದ, ‘ಸಿಯರು ಅ’ಲಾಮಿನ್ನುಬಲಾ’ದಲ್ಲಿ ಜೀವನ ಸಾಗಿಸಲು ಬೇಕಾಗಿ ವ್ಯಾಪಾರದಲ್ಲಿ ತೊಡಗಿದ ವಿದ್ವಾಂಸರ ಆಸಕ್ತಿದಾಯಕ ಜೀವನ ಕಥೆಗಳನ್ನು ಕಾಣಬಹುದು. ಜೀವನ ಮುಂದಕ್ಕೆ ಹೋಗುವಷ್ಟು ಮಾತ್ರವಾಗಿರುವ ಸಣ್ಣಮಟ್ಟಿನ ವ್ಯಾಪಾರಗಳಾಗಿರಲಿಲ್ಲ ಅವು. ಬದಲಾಗಿ, ಅವುಗಳಲ್ಲಿ…

ನೈಲಾನ್ ಕೊಡೆ

ಪ್ರಿಯ ವೈಕಂ ಚಂದ್ರಶೇಖರ್ ನಾಯರ್,ತಮ್ಮ ವಾರ ಪತ್ರಿಕೆ ‘ಚಿತ್ರ ಕಾರ್ತಿಕ’ ಸೊಗಸಾಗಿದೆ. ಅದರ ಪುಟಗಳನ್ನು ಅತ್ಯುತ್ಸಾಹದಿಂದಲೇ ತಿರುವಿ ಹಾಕುತ್ತಿದ್ದೇನೆ. ನಿಧಾನಕ್ಕೆ ಜ್ಞಾನಿಯಾಗುತ್ತಿದ್ದೇನೆ. ಸಂತೋಷವಾಗುತ್ತಿದೆ.ತಮಾಷೆಯೆಂದರೆ, ಚಿತ್ರಕಾರ್ತಿಕ ಎಂಬ ಹೆಸರನ್ನು ಮೊದಲು ಕೇಳಿದಾಗ ಹಿಂದೂಗಳ ಯಾವುದೋ…

ಶಾಂತಿಯ ಭಂಜಕರು: ಫೆಲಸ್ತೀನಿನ ಕುರಿತು ಫ್ರೆಂಚ್ ದಾರ್ಶನಿಕ ಡೆಲೂಝ್

1978 ಎಪ್ರಿಲ್ 7ರ Le Monde ಎಂಬ ಫ್ರೆಂಚ್ ಪತ್ರಿಕೆಗೆ ಪ್ರಮುಖ ಸಮಕಾಲೀನ ತತ್ವ ಚಿಂತಕ ಗಿಲ್ಸ್ ಡೆಲೂಝ್ ಬರೆದ ಲೇಖನವಿದು. ಅವರ Two Regimes of Madness ಎಂಬ ಪುಸ್ತಕದಲ್ಲೂ ಇದನ್ನು…

ದಕ್ಷಿಣ ಭಾರತದ ಸೂಫಿ; ಖ್ವಾಜಾ ಬಂದೇ ನವಾಝ್

ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತು ಚರ್ಚಿಸುವ ಗ್ರಂಥವಿದು. ಕನ್ನಡ ಸಾಹಿತ್ಯ ಹಾಗೂ ಸೂಫಿ ಚಿಂತನೆ ಮತ್ತು ಕಾವ್ಯಗಳ ನಡುವಿನ ಸಖ್ಯವು…

ಅಲ್-ನಖ್ಬಾ : ಫೆಲೆಸ್ತೀನಿನ ಮರುಯಾತ್ರೆಯ ಕೀಲಿಕೈ

ಅಲ್ ನಖ್ಬಾ ಎಂಬ ಪದದ ಅರ್ಥ ‘ದುರಂತ’ ಎಂದು ಮಾತ್ರವಲ್ಲ. ಅರಬಿ ಒಂದು ಪದದಲ್ಲಿ ಅನೇಕ ಅರ್ಥಗಳನ್ನು ಹುಟ್ಟಿಸಬಲ್ಲ ಭಾಷೆ. ಮರುಭೂಮಿಯ ಅನಿರ್ವಚನೀಯ ಗುಣ ವೈರುಧ್ಯಗಳು, ಆಕಸ್ಮಿಕತೆ, ವ್ಯಾಕುಲತೆ, ಆಶಂಕೆ ಇವೆಲ್ಲಾ ಆ…

ಬದುಕಿನ ನಾಡಿಮಿಡಿತದಲ್ಲಿ ಕಾವ್ಯದ ಎದೆಬಡಿತ ಆಲಿಸಿದ ಕವಿ: ಮಹಮೂದ್ ದರ್ವೇಶ್

ಮಹಮೂದ್ ದರ್ವೇಶ್!ಇತ್ತೀಚಿನ ದಿನಗಳಲ್ಲಿ ನನಗೆ ಓದಿನ ಸುಖ ದಯಪಾಲಿಸಿದ ಫೆಲೆಸ್ತೀನಿನ ಶಕ್ತಿಶಾಲಿ ಕವಿ. ಪತ್ರಿಕಾ ಕೆಲಸಗಳಲ್ಲಿ ಜಡ್ಡುಗಟ್ಟಿ, ದಿನ ನಿತ್ಯದ ಹೊರೆಯಿಂದ ಸಂವೇದನಾ ಶಕ್ತಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದ ನನ್ನನ್ನು ಹೃದಯ ಹಿಂಡಿ…

ಫೆಲಸ್ತೀನ್, ಲೆಬನಾನ್: ನಿಜ ಬದುಕಿನ ಅನಾವರಣ

ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವುದೋ, ಅಡಗಿಸಿಡುವುದೋ ಮಾಡುವವರಿಗೆ ನೇರ ಸೂಚಕಾ ವಸ್ತುವೇ ಡಾ. ಆಂಗ್ ಸ್ವೀ ಛಾಯ್ ಅವರು ಬರೆದ ‘From Beirut to Jerusalem’. ಈ…

ಹೊಸ ಯುಗದ ರೂಮಿ ಓದು : ಕೋಲ್ಮನ್ ಬಾರ್ಕ್ಸ್ ಮತ್ತು ಜನಪ್ರಿಯ ಅನುವಾದದ ಸಮಸ್ಯೆಗಳು.

ತಿಂಗಳುಗಳ ಹಿಂದೆ ‘Boise public library’ಯು ಆಯೋಜಿಸಿದ್ದ ‘ರೂಮಿ ನೈಟ್’ ಎಂಬ ಕಾರ್ಯಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೆವು. ನಾನು ಆ ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ನನ್ನಲ್ಲಿ ಗೆಳೆಯನ ತಾಯಿ ತನ್ನ ಅಸಮಾಧಾನವನ್ನು ತೋಡಿಕೊಂಡರು.…

ವಿಶ್ವಾಸಿಗಳ ಮಹಾ ತಾಯಿಯೊಬ್ಬಳ ಕಥೆ

ಶಿಂಖೀತ್ ನಾಡು, ಅಥವಾ ಆಂಗ್ಲ ಭಾಷಿಕರು ಸಾಮಾನ್ಯವಾಗಿ ಕರೆಯುವ ಮೌರಿತಾನಿಯ ಎಂಬ ಊರು ಸಾತ್ವಿಕ ವಿದ್ವಾಂಸರ, ಸಚ್ಚರಿತ ಸೂಫಿಗಳ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪಳಗಿದ ಅನೇಕ ಮಹಿಳಾಮಣಿಗಳ ಸಂಗಮ ಭೂಮಿ. ವಿದ್ವಾಂಸರ ಪ್ರಕಾರ,…

ಜನಪ್ರಿಯತೆಯ ತೆವಲು : ಹೊಸತಲೆಮಾರಿಗೆ ಅಂಟಿಕೊಂಡ ಸೋಂಕು

ನಾವು ಈ ಸಾಲಿನ ಪವಿತ್ರ ರಂಝಾನ್ ತಿಂಗಳಿನಲ್ಲಿದ್ದೇವೆ. ಈ ರಂಝಾನ್ ನಮಗೆ ಆತ್ಮ ನಿಯಂತ್ರಣ ಹಾಗೂ ಕ್ಷಮೆಯ ಕುರಿತಾಗಿ ಹಲವು ರೀತಿಯಲ್ಲಿ ಬೋಧಿಸುತ್ತಿದೆ. ಹೀಗಾಗಿ ರಂಝಾನ್ ಎಂಬುವುದು ಕೇವಲ ಆಹಾರವನ್ನು ಬಿಟ್ಟು ಕೂರುವುದು…

ಸವಾನಿಹ್ ಮತ್ತು ಇಂಡೋ ಪರ್ಷಿಯನ್‌ ಸೂಫಿಸಂ

ಸೂಫಿಸಂ ಕುರಿತ ಅತ್ಯಂತ ಹಳೆಯ ಪರ್ಷಿಯನ್‌ ರಚನೆಗಳಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರ ‘ಸವಾನಿಹ್’ ಗ್ರಂಥವೂ ಒಂದು. ಇಸ್ಮಾಯೀಲ್ ಬಿನ್ ಮುಹಮ್ಮದ್ ಅಲ್ ಮುಸ್ತಂಲಿಯವರ ‘ಶರಹು ತಅರ್ರುಫ್ ಲಿ ಮದ್ಸ್ಹಬಿ ತಸವ್ವುಫ್’, ಅಲಿಯ್ಯ್ ಬಿನ್…

ಕೋಮುವಾದಕ್ಕೆ ಸಾತ್ವಿಕ ಧರ್ಮ ಅಸ್ತ್ರವಾಗಲಿ: ಅನಂತಮೂರ್ತಿ

ಡಾ. ಯು. ಆರ್ ಅನಂತಮೂರ್ತಿ ಅವರು 2003 ರಲ್ಲಿ ಮಲಯಾಳಂನ ಪಾಠಭೇದಂ ಎಂಬ ಪತ್ರಿಕೆಗೆ ನೀಡಿದ ಸಂದರ್ಶನ ಧರ್ಮವನ್ನು ನಾವು ಕೋಮುವಾದವನ್ನು ಸೋಲಿಸಲು ಬಳಸಿಕೊಳ್ಳಬೇಕು. ಯಾಕೆಂದರೆ, ಎಲ್ಲಾ ಧರ್ಮಗಳಲ್ಲೂ ಮನುಷ್ಯನನ್ನು ಪ್ರೀತಿಸುವ ಮಂತ್ರಗಳಿವೆ‌.…

ಮನಮೋಹಕ ಶಾರ್ಜಾ ಪುಸ್ತಕ ಮೇಳ

ಒಬ್ಬ ಸಾಮಾನ್ಯವ್ಯಕ್ತಿ ಒಂದು ದೇಶದ ಸಾಂಸ್ಕೃತಿಕ ರಾಯಭಾರಿಯಾದ ಕಥೆಯಾಗಿದೆ ಇದು. ಸರಾಸರಿ ವ್ಯಕ್ತಿಯಾಗಿದ್ದುಕೊಂಡು ದೊಡ್ಡ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುವುದಕ್ಕೆ ಅಸಲಿ ಪುರಾವೆ ಇವರ ಜೀವನ. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಂಘಟಕ…

ಜಿನ್ನ್ ಗಳ ನಗರ

ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಓರ್ವ ಸೂಫಿಯನ್ನು ಭೇಟಿಯಾಗಿದ್ದು ಫಿರೋಝ್ ಶಾ ಕೋಟ್ಲಾದಲ್ಲಿ. ತೀಕ್ಷ್ಣ ಕಣ್ಣುಗಳು ಮತ್ತು ಮೈನಾದ ಗೂಡಿನಂತಿದ್ದ ಗಡ್ಡವನ್ನು ಇಳಿಬಿಟ್ಟಿದ್ದ ಅವರ ಹೆಸರು ಪೀರ್ ಸದ್ರುದ್ದೀನ್. ಅವರು ಕುಡಿಯಲು…

ಶರೀಅಃದ ಬಹುತ್ವದ ನೆಲೆಗಳು ಮತ್ತು ವಸಾಹುಶಾಹಿಗಳ ಕೋಡಿಫಿಕೇಶನ್

“ಅಬ್ಬಾಸೀ ಸಾಮ್ರಾಜ್ಯದ ಖಲೀಫಾ  ಅಬೂ ಜಅಫರುಲ್ ಮನ್ಸೂರ್ ರವರೊಂದಿಗೆ ಮಂತ್ರಿ ಇಬ್ನ್ ಅಲ್ ಮುಖಫ್ಫಅ ರವರು ಆಡಳಿತದಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಲಿಕ್ಕಾಗಿ ಒಂದು ಸಲಹೆ ಕೊಡುತ್ತಾರೆ. ತಮ್ಮ ಆಡಳಿತದ ಅಡಿಯಲ್ಲಿ ನಡೆಯುವ ಶರೀಅತ್ ವ್ಯವಹಾರಗಳನ್ನು…

ಇಕ್ಬಾಲ್ ಕಾವ್ಯದ ಗುಂಗಲ್ಲಿ

ನಶಾ ಪಿಲಾ ಕೆ ಗಿರಾನಾ ಸಬ್ಕೊ ಆತಾ ಹೈಮಝಾ ತೊ ತಬ್ ಹೈ ಗಿರ್ತೋಂಕೋ ಥಾಮ್ ಲೆ ಸಾಕಿ !– ಅಲ್ಲಾಮ ಇಕ್ಬಾಲ್ ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ,ಖುಷಿಯಿರುವುದು ಬಿದ್ದವನ ಎತ್ತಿಗಮ್ಯ…

ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನದ ಆನುಭಾವಿಕ ಒಳನೋಟಗಳು

ಹಸಿರು ಬಣ್ಣ ಇಸ್ಲಾಮಿನೊಂದಿಗೆ ತಳುಕುಹಾಕಿಕೊಂಡದ್ದು ಒಂದು ಕಾಕತಾಳೀಯ ವಿದ್ಯಮಾನವೇನಲ್ಲ.ಪವಿತ್ರ ಖುರ್ಆನಿನಲ್ಲಿ ಸ್ವರ್ಗೀಯ ಉದ್ಯಾನಗಳನ್ನು ಪರಿಚಯಿಸುವಾಗ ಹಸಿರು ಬಣ್ಣವು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಹಸಿರೆನ್ನುವುದು ಸಸ್ಯ ವರ್ಗಗಳ ಸಾಮಾನ್ಯ ವರ್ಣವೆಂಬುವುದಕ್ಕಿಂತ ಮಿಗಿಲಾಗಿ ಅದು ಬೆಳವಣಿಗೆ, ಭರವಸೆ,…

ರಾವಿ ನದಿಯ ದಂಡೆಯಲ್ಲಿ

ಶಾಂತ ಸಂಜೆಯಲ್ಲಿ ಹರಿಯುತ್ತಿದೆಮಧುರವಾಗಿ ರಾವಿ,ನನ್ನೆದೆಯ ನೋವನ್ನು ಮಾತ್ರಕೇಳದಿರಿ ಇಲ್ಲಿ ಸುಜೂದಿನ ಮೇಲುಕೀಳುಗಳಸಂದೇಶ ದೊರೆಯುತ್ತಿದೆಯಿಲ್ಲಿಜಗವೆಲ್ಲವೂ ‘ಹರಂ’ ನಹಿತ್ತಿಲಾಗಿದೆಯಿಲ್ಲಿ! ರಾವಿಯ ಅನಂತ ಹರಿವಿನ ದಂಡೆಯಲಿನಿಂತಿಹೆನು ನಾನುಆದರೂ ತಿಳಿಯದಾಗಿಹೆಎಲ್ಲಿ ನಿಂತಿರುವೆ ನಾನು! ವೃದ್ಧಗುರು ಮಧುಬಟ್ಟಲನು ಹಿಡಿದುನಿಂತಿಹನು ನಡುಗುತಿಹ…

ಹಕ್ಕಿಯ ದೂರು

ನೆನಪಾಗುತಿವೆ ಇಂದುಕಳೆದುಹೋದ ಆ ದಿನವುಹಕ್ಕಿಗಳ ಚಿಲಿಪಿಲಿಯಲ್ಲಿವಸಂತನ ಆಗಮನವು ಅತ್ತಿತ್ತ ಹಾರಿ ನಲಿದಾಡುತಿದ್ದಬೇಕೆಂದ ಕಡೆಗೆ ಹಾರಾಡುತಿದ್ದಸಂತಸದ ಗುಡಿಯಲಿದ್ದಆ ನನ್ನ ಸ್ವಾತಂತ್ರ್ಯವೆಲ್ಲಿ ಆ ಕ್ಷಣಗಳ ನೆನಪಿನಲ್ಲಿಎದೆಯೊಡೆಯುತಿಹುದಿಲ್ಲಿಇಬ್ಬನಿಯ ಕಣ್ಣೀರಿನಲ್ಲಿನಗುತಿದ್ದ ಆ ಮೊಗ್ಗೆಗಳೆಲ್ಲಿ ಯಾವ ಸೌಂದರ್ಯದ ಖನಿಯೋಅದಾವ ಮೋಹಿನಿಯ…

ನವ ಮಂದಿರ

ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,ತಪ್ಪು ತಿಳಿಯದಿರು ಎನ್ನಹಳತಾಗುತಿವೆ ಗರ್ಭಗುಡಿಯೊಳಿರುವಆ ಮೂರ್ತಿಗಳು ನಿನ್ನ ನಿನ್ನವರನೇ ದ್ವೇಷಿಸಲುಆ ಮೂರ್ತಿಗಳಿಂದ ನೀ ಕಲಿತಿರುವಾಗವೈರತ್ವ ದ್ವೇಷಗಳನ್ನೇ ಕಕ್ಕಲುಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು ಅಯ್ಯೋ! ಈ ಮಂದಿರ ಮಸೀದಿಗಳಿಂದಲೇನಾ…

ಯುರೋಪ್ ಜ್ಞಾನೋದಯ‌ ಮತ್ತು ಪೈಗಂಬರ್ ಮುಹಮ್ಮದ್(ಸ)

ಹದಿನಾರನೇ ಶತಮಾನದಲ್ಲಿ ಯುರೋಪ್‌ನಲ್ಲಿ ಖುರ್‌ಆನ್ ಅನುವಾದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವು ನೂರಾರು ತೊಡಕುಗಳನ್ನು ಎದುರಿಸಬೇಕಾದ ಒಂದು ಉದ್ಯಮವೇ ಆಗಿತ್ತು. ಕ್ರಿ.ಶ 1542 ರಲ್ಲಿ ಖುರ್‌ಆನಿನ ಲಾಟಿನ್ ಭಾಷೆಯ ಅನುವಾದವೊಂದನ್ನು ಪ್ರಕಟಿಸಲು ಮುಂದಾದ ಪ್ರಕಾಶಕನೊಬ್ಬನನ್ನು…

ಕಾಫಿಯ ಇತಿಹಾಸ: ಐತಿಹ್ಯಗಳಿಂದ ಸೂಫಿಸಂವರೆಗೆ

ಇಥಿಯೋಪಿಯನ್ ಪರ್ವತಶ್ರೇಣಿಗಳೇ ಕಾಫಿಯ ತಾಯ್ನಾಡು. ಕ್ರಿ.ಶ 525 ರಲ್ಲಿ ಯೆಮೆನ್ ಅನ್ನು ವಶಪಡಿಸಿಕೊಂಡ ಸೆಮಿಟಿಕ್- ಭಾಷಿಕರಾದ ಆಕ್ಸಿಮೈಟ್‌ಗಳೇ ಕಾಫಿಯನ್ನು ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಪರಿಚಯಿಸಿದವರು. ಇಥಿಯೋಪಿಯಾಗೆ ಸಮಾನವಾದ ಭೌಗೋಳಿಕತೆ ಮತ್ತು ಹವಾಮಾನವು ಈ…

ಅಲಿಘರ್ ವಿದ್ಯಾಲಯದಲ್ಲಿರುವ ಸಯ್ಯದರ ಸಮಾಧಿಯ ನುಡಿಗಳು

ಓ ಇಹದ ಬದುಕಿನಲಿಸಿಲುಕಿರುವ ಮನುಷ್ಯನೇಓ ಬದುಕೆಂಬ ಪಂಜರದಲಿಬಂಧಿಯಾಗಿಹ ಆತ್ಮವೇ ಈ ತೋಟದೊಳು ನಲಿಯುತಿಹಆ ಪಾದಗಳ ಸ್ವಾತಂತ್ರ್ಯವ ನೋಡು!ಅಂದು ಕಂಗೆಟ್ಟಿದ್ದವರಸಮೃದ್ಧತೆಯನೊಮ್ಮೆ ನೋಡು! ಯಾವ ಭವಿಷ್ಯದ ಕನಸಿತ್ತೋಆ ಮಹಾ ಪರ್ವವಿದು!ಸಹನೆ ತಾಳ್ಮೆಗಳ ಹೊಲದಲ್ಲಿಬೆಳೆದಿರುವ ಫಲವಿದು! ನನ್ನ…

ಸಾಕಿ

ಮತ್ತೇರಿಸಿದ ಮೇಲೆ ದೂಡಿಹಾಕುವವರೇ ಎಲ್ಲಾ,ಖುಷಿಯಿರುವುದು ಬಿದ್ದವನ ಎತ್ತಿಗಮ್ಯ ಸೇರಿಸುವುದರಲ್ಲಿ, ಸಾಕಿ! ಆ ಹಳೆಯ ಮಧುಪಾನೀಕರೆಲ್ಲರೂದೂರವಾಗುತಿಹರು,ಎಲ್ಲಿಂದಲಾದರೂ ಆ ಅಮೃತಜಲವನ್ನೊಮ್ಮೆದಯಪಾಲಿಸು ಸಾಕಿ! ವರ್ಣರಂಜಿತ ಸದ್ದುಗದ್ದಲಗಳಲ್ಲೇರಾತ್ರಿಯಿಡೀ ಕಳೆದುಹೋಯಿತು,ಅದೋ ಮುಂಜಾವು ಸಮೀಪಿಸುತ್ತಿದೆಅಲ್ಲಾಹನ ಸ್ಮರಣೆ ಮಾಡು ಸಾಕಿ!! ಉರ್ದು ಮೂಲ…

ಬ್ಯಾರಿಗಳ ಬದುಕಿನ ಜಾಡು ಹಿಡಿದು

ಸಹಸ್ರಾರು ವರುಷಗಳ ಇತಿಹಾಸವನ್ನೂ ಪರಂಪರೆಯನ್ನೂ ಹೊಂದಿರುವ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರ ಚರಿತ್ರೆಯನ್ನು ಹುಡುಕಿಕೊಂಡು ಮಂಗಳೂರಿಗೆ ತಲುಪಿದ್ದೆ. ಮುಂಜಾನೆ ರೈಲಿನಿಂದಿಳಿದು ಪೈಗಂಬರರ ಕಾಲದಷ್ಟು ಪ್ರಾಚೀನತೆಯುಳ್ಳ ಬಂದರಿನ ಝೀನತ್ ಬಕ್ಷ್ ಮಸೀದಿ ಹುಡುಕುತ್ತಾ ನಡೆದೆ.…

ದೆಹಲಿ ಸುಲ್ತಾನರಿಗೆ ಶರಣಾಗದ ಸೂಫಿ ಶ್ರೇಷ್ಠರು

ದೆಹಲಿ ಸುಲ್ತಾನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನಲ್ಲಿ ಚಿಶ್ತಿ ಸೂಫಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದರು. ಅವರ ಅತೀಂದ್ರಿಯ ಚಟುವಟಿಕೆಗಳು ಮತ್ತು ಆಲೋಚನೆಗಳಲ್ಲಿ ‘ಅಲ್ಲಾಹನೇ ಕಾರಣ, ಸೃಷ್ಟಿಕರ್ತ ಮತ್ತು ಕೇಂದ್ರ’ ಎಂಬ ಬಲವಾದ ನಂಬಿಕೆ ಎದ್ದು…

ಹುಟ್ಟುಹಬ್ಬ

ಮಕರ ೮ನೇ ದಿನ, ಇಂದು ನನ್ನ ಜನ್ಮ ದಿನ. ಮಾಮೂಲಿಗೆ ವಿರುದ್ಧವಾಗಿ ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ಇವತ್ತಿಗಾಗಿಯೇ ತೆಗೆದಿಟ್ಟಿದ್ದ ಖಾದಿ ಶರ್ಟ್, ಬಿಳಿ ಬಣ್ಣದ ಖಾದಿ ಲುಂಗಿ, ಬಿಳಿಯ ಕ್ಯಾನ್ವಾಸ್…

ರೂಮಿಯ ಪಟ್ಟಣದಲ್ಲೊಂದು ಪ್ರೇಮ ಯಾನ: ಭಾಗ ಒಂದು

ಇಸ್ತಾಂಬುಲ್‌ನಿಂದ ಸುಮಾರು 716 ಕಿ.ಮೀ ದೂರದಲ್ಲಿರುವ ಟರ್ಕಿಯ ಹೃದಯಭಾಗದಲ್ಲಿ ಬೆಚ್ಚಗೆ ಮಲಗಿರುವ ಪುಟ್ಟದಾದ ನಗರವೇ ಕೋನ್ಯಾ. ಮೌಲಾನಾ ಜಲಾಲುದ್ದೀನ್ ರೂಮಿ ಮತ್ತು ‘ಸಮಾ’ ನೃತ್ಯ ನನ್ನನ್ನು ಈ ಶಹರಕ್ಕೆ ಬರಮಾಡಿಕೊಂಡಿತೋ ಅಥವಾ ಜಿಯಾವುದ್ದೀನ್…

ನನ್ನ ನೆನಪಿನ ಮದೀನಾ ಯಾತ್ರೆ

ಮನೆಮಂದಿಯೆಲ್ಲರೂ ಮದೀನಾಕ್ಕೆ ತೆರಳಿದ ದಿನ ನಾನು ಯೂಟ್ಯೂಬ್ ತೆರೆದು ಮೊದಲೇ ಡೌನ್ಲೋಡ್ ಮಾಡಿಟ್ಟ ಹಾಡು ಕೇಳುತ್ತಿದ್ದಂತೆ ಅಚಾನಕ್ಕಾಗಿ ಅಶ್ರಫ್ ತೈನೇರಿ ಹಾಗೂ ರೆಹೆನಾ ಜೊತೆಗೂಡಿ ಹಾಡಿದ‘ಮಕ್ಕಾ ಮದೀನಾ ಞಾನ್ ಓರ್ತು ಪೋಯಿಹಕ್ ರಸೂಲಿಂಡೆ…

ಆ ನಾಯಕನನ್ನು ಹುಡುಕು

ನೆಲೆಯ ಆಚೆಗೊಂದು ನೆಲೆಯ ಹುಡುಕುಕಿನಾರೆ ಸಿಕ್ಕಿದೆಯಾದರೆ ಸಮುದ್ರವನ್ನು ಹುಡುಕು ಕಲ್ಲೇಟಿಗೆ ಒಡೆದುಹೋಗದ ಶೀಷೆಗಳಿಲ್ಲಕಲ್ಲೇ ಒಡೆದುಹೋಗುವಂತಹ ಶೀಷೆಯನ್ನು ಹುಡುಕು ವರುಷಗಳೇ ಉರುಳಿಹೋದವು ನಿನ್ನ ಸುಜೂದಿನಲ್ಲಿನಿನ್ನ ಬದುಕನ್ನೇ ಬದಲಿಸುವಂತಹಾ ಸುಜೂದನ್ನು ಹುಡುಕು ನಿನ್ನ ಪಥಿಕನ ಕೈಯ್ಯಲ್ಲಿ…

ಸಾವಿನೊಡನೊಂದು ಮುಖಾಮುಖಿ

ಹೊಳೆವ ಸೂರ್ಯನುಮರೆಯಾದ, ಪರದೆಯೊಳಗಿಂದಇಣುಕುತಿಹಳು ನಿಶೆಯುಭುವಿಯ ಹೆಗಲಿನ ಮೇಲೆಹರಡುತಿದೆ ಇರುಳ ಕೇಶರಾಶಿ ಅದಾವ ದುಃಖವನೆದುರಿಸಲೋಈ ಕರಿಯ ಧಿರಿಸುಸೂರ್ಯನ ಸಾವಿನ ಸೂತಕಕೆಪ್ರಕೃತಿಯ ಸಭೆಯೇ? ಮಾಯಾ ತುಟಿಗಳ ಮೇಲೊಂದುಬಾನು ಪಠಿಸುತಿದೆ ಗುಪ್ತಮಂತ್ರಎಚ್ಚೆತ್ತ ಕಂಗಳನು ಕಾಯುತಿಹನಿಶೆಯ ಜಾದೂಗಾರ ನೀರವತೆಯ…

ಶಬ್ – ಏ – ಮೀರಾಜ್

ಆಗಸದಲ್ಲಿ ಉದಿಸುತಿಹಸಂಜೆ ನಕ್ಷತ್ರದ ಕರೆಯಿದುಯಾವ ಮುಂಜಾವುಶರಣಾಗಿಹುದೋ ಆ ರಾತ್ರಿಯಿದು! ದೈರ್ಯವಿದ್ದವನಿಗೆ ಇಹುದಿಲ್ಲಿಸ್ವರ್ಗ ಗೇಣಿನಷ್ಟೇ ದೂರದಲ್ಲಿಕೂಗಿ ಹೇಳುತಿದೆ ಅದೋಮೀರಾಜಿನ ರಾತ್ರಿ ಮುಸಲ್ಮಾನನಲ್ಲಿ! ಮೂಲ: ಅಲ್ಲಾಮ ಇಕ್ಬಾಲ್ಅನುವಾದ: ಪುನೀತ್ ಅಪ್ಪು…

ಅಲೆ

ಈ ತಾಳ್ಮೆಗೆಟ್ಟ ಎದೆಯುಸದಾ ನನ್ನ ಪ್ರಕ್ಷುಬ್ಧಗೊಳಿಸಿದೆಬದುಕಿನ ಅಸ್ತಿತ್ವವೇಪಾದರಸದಂತೆ ವಿಚಲಿತಗೊಂಡಿದೆ! ನಾನೊಂದು ಅಲೆಯಾಗಿರುವೆಸಮುದ್ರವೇ ನನ್ನ ಗಮ್ಯವಾಗಿದೆಈ ಸುತ್ತಿ ಸುಳಿಯುವ ತರಂಗಗಳೇನನ್ನ ಬಂಧಿಸಲಾರದೆ ಹೋಗಿವೆ! ಜಲಾದ್ರಿಯಲ್ಲಿ ತರಂಗರೂಪಿಯಾಗಿನಡೆಯುತ್ತಿರುವೆ ನಾನುಧಾವಣಿಯು ಮೀನ್ಗಾರನ ಬಲೆಗೆಸಿಲುಕದಂತೆ ಸಾಗುತಿಹೆ ನಾನು! ಪೂರ್ಣ…

ಇಬ್ನುರುಶ್ದ್: ಪಶ್ಚಿಮ ಮತ್ತು ಪೂರ್ವಗಳ ನಡುವೆ

ಇಸ್ಲಾಮಿಕ್ ಸುವರ್ಣಯುಗವು ಇಬ್ನುಸೀನಾರಿಂದ (ಅವಿಸೆನ್ನ) ಅಲ್-ಫರಾಬಿಯವರೆಗಿನ ಹಲವು ಜಗತ್ಪ್ರಸಿದ್ಧ ಚಿಂತಕರಿಗೆ ಜನ್ಮವಿತ್ತಿದೆ. ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದ ವಿಶ್ವವಿದ್ಯಾಲಯಗಳು ಅರಬ್ ಮತ್ತು ಪರ್ಷಿಯನ್ ತತ್ವಜ್ಞಾನಿಗಳ ಶೈಕ್ಷಣಿಕ ಆವಿಷ್ಕಾರಗಳನ್ನು ಕಲಿಸುತ್ತಿರುವುದರಿಂದ ಪಾಶ್ಚಾತ್ಯ…

ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಮತ್ತು ಅಜ್ಮಲ್ ಖಾನ್‌‌ ಕವಿತೆಗಳು

ಬಿಡುಗಡೆಗೊಂಡು ಒಂದು ವಾರ ಪೂರ್ತಿಯಾಗುವುದರೊಳಗೆ ಆಮೆಝಾನ್‌ ಇ-ಪುಸ್ತಕ ಮಳಿಗೆಯ ಇಂಡಿಯನ್‌ ಮತ್ತು ಏಷ್ಯನ್‌ ಸಾಹಿತ್ಯ ವಿಭಾಗದ ಹಾಟ್ ನ್ಯೂ ರಿಲೀಸ್‌ ಪಟ್ಟಿಗೆ ಸೇರ್ಪಡೆಗೊಂಡಿರುವ The Mappila Verses ಎಂಬ ಇಂಗ್ಲಿಷ್‌ ಕವಿತಾ ಸಂಕಲನದ…

ಗುಜರಾತ್; ಮರೆತುಹೋದ ಇಸ್ಲಾಮಿಕ್ ಚಿತ್ರಗಳು

ಭಾರತದಲ್ಲಿನ ಇಸ್ಲಾಂ ಧರ್ಮವನ್ನು 16ನೇ ಶತಮಾನದ ಪರ್ಷಿಯನ್ ಮೊಘಲ್ ಸಾಮ್ರಾಜ್ಯದ ಉಪ-ಉತ್ಪನ್ನವೆಂದು ಅನೇಕರು ಪರಿಗಣಿಸಿದ್ದಾರೆ. ಆದರೆ ಆಗ್ರಾದಲ್ಲಿನ ತಾಜ್ ಮಹಲ್ ಮತ್ತು ದೆಹಲಿ ಜುಮಾ ಮಸೀದಿಯ ಹಿಂದಿನ ಗತಕಾಲ ಇತಿಹಾಸವನ್ನು ಪರಿಶೋಧಿಸಿದರೆ ಇಸ್ಲಾಂ…

ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ!

ನಕ್ಷತ್ರಗಳಾಚೆಯೂ ಜಗವಿಹುದುಪ್ರೀತಿಗಿನ್ನೂ ಪರೀಕ್ಷೆಗಳು ಹಲವಿಹುದು ಈ ಲೋಕದಲ್ಲಿ ಪ್ರೀತಿಸುವ ಜೀವಿಗಳಿಗೆ ಬರವಿಲ್ಲನೂರಾರು ಕಾರವಾನಗಳು ಇನ್ನೂ ಹಲವಿಹುದು ಇಲ್ಲಿಯ ಸುಗಂಧ – ಕಾಮನೆಗಳಲ್ಲಿ ಕಳೆದುಹೋಗದಿರುಹೂದೋಟಗಳು – ಗೂಡುಗಳು ಇನ್ನೂ ಹಲವಿಹುದು ಒಂದು ನೆಲೆ ಕಳೆದುಕೊಂಡೆಯೆಂದು…

ಪ್ರಜಾಸತ್ತೇ..

ಬಿಸಿಲ ಬೇಗೆಗೆ ನಲುಗಿಸೋತ ಹಗರೆಯ ಮಗುನೆಲಕ್ಕೊದ್ದಾಗಮರಳುಗಾಡಿನಲ್ಲಿಉಕ್ಕಿದ ಸಿಹಿನೀರ ಬುಗ್ಗೆಚಿನ್ನದ ಹೆದ್ದಾರಿಗಳಲ್ಲಿಉಕ್ಕುವುದಿಲ್ಲ ಜೀತದಾಳುಗಳೊಡನೆಮೋಸೆಸನುಬಂಧ ವಿಮುಕ್ತಿಯತ್ತ ನಡೆದಾಗಸಾಗರವೇ ಬಿರಿದು ದಾರಿ ತೋರಿದ ಗಳಿಗೆಇನ್ನೊಮ್ಮೆ ಬರುವುದಿಲ್ಲ ವಿಶ್ವಾಸಿಗರೇ ಕೇಳಿ‘ಸಿರಿವಂತನಿಗೆ ಸ್ವರ್ಗದ ದಾರಿಒಂಟೆಯನ್ನು ಸೂಜಿಯ ಕಣ್ಣೊಳಗೆತುರುಕಿದಷ್ಟೇ ಸುಲಭ’ಆದರೂ ಬಡವರ…

ಜಾವೆದ್ ನಾಮಾ

ನಿನ್ನ ಹೃದಯದೊಳಗೊಂದುಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆಆ ಹೂವುಗಳ ಮೌನಗಳಿಗೆ ಮಾತಾಗುಪ್ರೀತಿಯ ಒಂದಿಷ್ಟು ಪದಗಳಾಗು ಈ ಪ್ರೀತಿಯೆಂಬ ಜಗದಲ್ಲಿಪುಟ್ಟ ತಾವು ಹುಡುಕುಈ ನವ್ಯ ಯುಗದಲ್ಲಿರಮ್ಯ ಹಗಲಿರುಳ ಹುಡುಕು ಪಶ್ಚಿಮದ ಕಲೆಗಾರರಮನೆಯ ಪರಿಚಾರಕನಾಗಬೇಡಭಾರತದ ನೆಲದಲ್ಲಿಮಧುಶಾಲೆಯ ಸುಧೆಯ ಹರಿಸು…

ತಸ್ಬೀಹ್ ಮಾಲೆ: ಮನಃಶಾಸ್ತ್ರ ಮತ್ತು ಸೌಂದರ್ಯ ಶಾಸ್ತ್ರ

ನೀವು ತುರ್ಕಿ ರಾಷ್ಟ್ರಕ್ಕೆ ಭೇಟಿ ನೀಡಿದರೆ, ಅಲ್ಲಿನ ಜನರ ಕೈಯಲ್ಲಿ ಮಣಿಗಳಿಂದ ಪೋಣಿಸಿದ ದಾರವನ್ನು ಕಾಣಲು ಸಾಧ್ಯ. ಅವು ವಿಭಿನ್ನ ಆಕಾರ ಮತ್ತು ಬಣ್ಣಗಳಿಂದ ಕಂಗೊಳಿಸುತ್ತಿರುತ್ತವೆ. ಕೆಲವೊಂದು ವಿನ್ಯಾಸದಲ್ಲಿ ಸರಳ ಮತ್ತು ವಿಭಿನ್ನವಾಗಿದ್ದರೆ,…

ರೂಮಿ, ಧರ್ಮ ಮತ್ತು ಪಾಶ್ಚಾತ್ಯ ಅನುವಾದಕರು

ಕೆಲವು ವರ್ಷಗಳ ಹಿಂದೆ; ನಟಿ ಗ್ಲೇನತ್ ಪಾಲ್ಟ್ರೋ ಗೆ ವಿಚ್ಛೇದನ ನೀಡಿದ ಬಳಿಕ ಕೋಲ್ಡ್ ಪ್ಲೇ ಗಾಯಕ ಕ್ರಿಸ್ ಮಾರ್ಟಿನ್ ಖಿನ್ನತೆಗೆ ಒಳಗಾಗಿದ್ದರು. ಕ್ರಿಸ್ ಮಾರ್ಟಿನ್ ಗೆ ಒಬ್ಬ ಗೆಳೆಯನಿದ್ದ. ಆತ ಮಾರ್ಟಿನ್…

ಮಾಪ್ಪಿಳ ಸಾಹಿತ್ಯದ ಮಹತ್ವ, ಇತಿಹಾಸ ಹಾಗೂ ವರ್ತಮಾನದ ಸವಾಲುಗಳು

ಹಳೆಯ ಮಲಬಾರ್ ನ ಭಾಗವಾಗಿದ್ದ ಮಂಗಳೂರು, ಉಡುಪಿ, ಕೊಡಗು ಮತ್ತು ಆಸುಪಾಸಿನಲ್ಲಿ ಹಾಸುಹೊಕ್ಕಾಗಿರುವ ಮಾಪ್ಪಿಳ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನವಿದು. ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಮಾಲೆ, ಮೌಲಿದ್, ಬ್ಯಾರಿ ಜನಪದ ಹಾಡುಗಳು,…

ಝಹರಾ, ಬೆಳಗಿನ ತಾರೆ(ವೀನಸ್ -ಶುಕ್ರ)

ಈ ಸೂರ್ಯ ಚಂದ್ರರ ಒಡನಾಟದಸುಖವನ್ನು ಬಿಟ್ಟು ಬಿಡಲೇಬೆಳಗಿನ ಸಂದೇಶವ ಸಾರುವಈ ಸೇವೆಯನು ತ್ಯಜಿಸಿ ಬಿಡಲೇ ಈ ನಕ್ಷತ್ರಗಳ ಲೋಕದಲ್ಲಿಬದುಕುವುದು ನನಗೆ ಹೇಳಿದ್ದಲ್ಲಈ ಶಿರವನೇರುವುದಕ್ಕಿಂತಭುವಿಯ ಪಾದಕ್ಕಿಳಿಯುವುದೆ ಒಳಿತು ಈ ಆಗಸವಿದೇನು? ಯಾರೊಬ್ಬರೂಬದುಕಲಾರದ ನಾಡುಮುಂಜಾವಿನ ಬಿಳಿ…

ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆಬರಿದಾಗಿದೆ ಬದುಕುವಾಸೆಯಿಲ್ಲಿ,ಮುಳುಗಿಸಿಬಿಡು ಓ ಗಂಗಾ ನದಿಯೆಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ! ರಣರಂಗವಾಗಿಹುದುಜನ್ಮ ಭೂಮಿಯಿಲ್ಲಿಅದೆಂತಹಾ ಬಾಂಧವ್ಯ!ವಿರಹ ಬಂದು ಕುಳಿತಿಹುದುಪ್ರೇಮದಂಗಳದಲ್ಲಿ! ಪ್ರೀತಿಯೇ ಸಿಡಿದೆದ್ದಿಹುದುದ್ವೇಷಕ್ಕೆ ಎದುರಾಗಿಒಂದೇ ಹೊಲದೊಳಗೆಫಸಲುಗಳು ಕಾದಾಡುತಿಹವು ಸ್ನೇಹ ತಂಗಾಳಿ ಬೀಸಲಿಲ್ಲವೆಂದೂಆ ಹೂದೋಟದಲ್ಲಿಮೈನಾ…

ಎಕ್ಸಿಟ್ ವೆಸ್ಟ್: ಕೊನೆಯಿಲ್ಲದ ಸ್ವರ್ಗ ರಾಜ್ಯಗಳು

ನಿರಾಶ್ರಿತರ ಹಾಗೂ ಪೌರತ್ವ ಕಾಯ್ದೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ನಿರಾಶ್ರಿತರ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವ ರಿಯಲಿಸಂ ಮತ್ತು ಮ್ಯಾಜಿಕಲ್ ರಿಯಲಿಸಂನ ಸಮ್ಮಿಶ್ರಣದಿಂದ ಒಂದುಗೂಡಿರುವ ಮೊಹ್ಸಿನ್ ಹಾಮಿದ್ ರವರ ಕಾದಂಬರಿ “ಎಕ್ಸಿಟ್…

ಮುಸಾಫಿರ್

ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ ಹಾಗಾಗಿ, ಯಾತ್ರೆ ಹೊರಡುತೊರೆದು ನಿನ್ನ ವಿರಾಮದ ಮನೆಯಸಿಕ್ಕೇ ಸಿಗುತ್ತದೆನೀನು ತೊರೆದುದುದರ ಬದಲಿ ನಿವಾಸ ಮತ್ತು ಸೆಣಸಾಡುದಿಕ್ಕಾಪಾಲಾದ ಯಾತ್ರೆಯುದ್ದಕ್ಕೂಬದುಕಿನ ಮಾಧುರ್ಯವಿರುವುದೇಕಷ್ಟ ಕೋಟಲೆಗಳಲ್ಲಿಮತ್ತದರೆದುರು…

ರೂಮಿ ಮಸ್ನವಿ ಮತ್ತು ಖುರ್ಆನ್; ತುಲನಾತ್ಮಕ ಅಧ್ಯಯನಕ್ಕೊಂದು ಪ್ರವೇಶಿಕೆ

ಜಲಾಲುದ್ದೀನ್ ರೂಮಿಯವರು ರಚಿಸಿದ ಜನಪ್ರಿಯ ದ್ವಿಪದಿ ಕಾವ್ಯವಾಗಿದೆ ‘ಮಸ್ನವಿ’ ಎಂಬುವುದು. ಮಸ್ನವಿಯನ್ನು ಆಧಾರವಾಗಿಟ್ಟುಕೊಂಡು ಹಲವಾರು ವ್ಯಾಖ್ಯಾನಗಳು ಬರೆಯಲ್ಪಟ್ಟಿದ್ದರೂ ಅವುಗಳಲ್ಲಿ ಹೆಚ್ಚಿನವು ಖುರ್ಆನ್ ಮತ್ತು ಮಸ್ನವಿಗಳೆಡೆಯಲ್ಲಿನ ಅವಿನಾಭಾವ ಸಂಬಂಧದ ಕುರಿತಾಗಿದೆಯೆಂಬುವುದು ಗಮನಾರ್ಹ ಸಂಗತಿಗಳಲ್ಲೊಂದು. ಮಸ್ನವಿಯ…

ಮರುಯಾತ್ರೆಗಿರುವ ಗಂಟುಮೂಟೆಗಳು : ಫರೀದುದ್ದೀನ್ ಅತ್ತಾರರ ಸೂಫೀ ಕಾವ್ಯ ಲೋಕ

ಫರೀದುದ್ದೀನ್ ಆತ್ತಾರ್ (ರ) ರ ಜನನ ಕ್ರಿ. ಶ 1150, ನಿಷಾಪೂರಿನ ಹತ್ತಿರ ಪ್ರದೇಶವಾದ ಕಟಕಿಲ್ ಎಂಬ ಗ್ರಾಮದಲ್ಲಾಗಿತ್ತು. ಖುರಾಸಾನ್ ಹಾಗೂ ನಿಷಾಪೂರ್ ಗಳೆರಡೂ ಆ ಕಾಲಘಟ್ಪದ ಸೂಫಿಗಳ ಕೇಂದ್ರವೆಂದು ಪ್ರಸಿದ್ಧಗೊಂಡ ಸ್ಥಳಗಳಾಗಿದ್ದವು.…

ಸ್ಪೈನ್ – ಅಂದ್ಯುಲೂಸಿಯಾ

ಉರ್ದು ಕವಿ ಅಲ್ಲಾಮ ಇಕ್ಬಾಲರು 1933 ರಲ್ಲಿ ಸ್ಪೇನಿಗೆ ಬೇಟಿ ನೀಡಿದ್ದರು. ಆ ಸಮಯದಲ್ಲಿ ಬರೆದಿರುವ ಎರಡು ಕವಿತೆಗಳಲ್ಲಿ ಮಸ್ಜಿದೇ ಕುರ್ತುಬಾ ಮತ್ತು ಹಿಸ್ಪಾನಿಯಾ ಪ್ರಸಿದ್ಧ ಕವಿತೆಗಳಾಗಿವೆ. ಇಲ್ಲಿ ಪ್ರಕಟಿಸಲಾದ ಕನ್ನಡ ಭಾವಾನುವಾದವು…

ಸೂಫಿ ಕಥೆ ಹೇಳುವ ಹಕ್ಕಿಗಳು ಮತ್ತು ರೂಮಿ, ಅತ್ತಾರರ ರೂಪಕಗಳು

ಒಮ್ಮೆ ಪ್ರವಾದಿ ಇಬ್ರಾಹಿಂ (ಅ)ರು ಅಲ್ಲಾಹನ ಆಜ್ಞೆಯಂತೆ ನಾಲ್ಕು ಪಕ್ಷಿಗಳನ್ನು ದ್ಸಬಹ್ ಮಾಡಿ ಅವುಗಳ ಮಾಂಸಗಳನ್ನು ಪರಸ್ಪರ ಬೆರೆಸಿ ಸಣ್ಣ ಭಾಗವೊಂದನ್ನು ಪ್ರತ್ಯೇಕಿಸಿ ಅನತಿ ದೂರದಲ್ಲಿರುವ ಬೆಟ್ಟವೊಂದರ ಮೇಲಿರಿಸುತ್ತಾರೆ. ತುಸು ಹೊತ್ತಾದ ಬಳಿಕ,…

ಜಾಗತಿಕ ಮುಸ್ಲಿಮರ ಶಿರೋವಸ್ತ್ರ ಶೈಲಿಗಳು

ಇಸ್ಲಾಂ ಧರ್ಮದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ತಲೆ ಮುಚ್ಚಲು ಆದೇಶವಿದ್ದರೂ, ಇತರ ಧರ್ಮೀಯರು ಕೂಡ ಅದನ್ನು ಅನುಸರಿಸುತ್ತಾರೆ. ಶಿರೋವಸ್ತ್ರ ಧರಿಸುವ ರೀತಿ ನೋಡಿ ಓರ್ವ ವ್ಯಕ್ತಿಯ ಪ್ರದೇಶ, ಸ್ಥಿತಿ, ಆತನ  ಧರ್ಮ (ಉದಾಹರಣೆಗೆ:…

ಈದ್ಗಾಹ್

ರಮ್ಜಾನ್ ತಿಂಗಳ ಭರ್ತಿ ಮೂವತ್ತು ದಿನಗಳ ನಂತರ ಈದ್ ಬಂದಿತ್ತು. ಈದ್ ನ ಮುಂಜಾನೆ ಅದೆಷ್ಟು ಶುಭ್ರ ಮತ್ತು ಸುಂದರವಾಗಿತ್ತು! ಮರಗಳೆಲ್ಲಾ ಹಚ್ಚ ಹಸಿರು, ಹೊಲಗದ್ದೆಗಳಿಗೂ ಹಬ್ಬದ ಕಳೆ, ಆಕಾಶಕ್ಕೂ ಗುಲಾಬಿ ಸೊಬಗು…

ಮಿನಾರಗಳು: ನಾಗರಿಕತೆಯ ಕುರುಹುಗಳು

ಮಿನಾರಗಳು ಮಸೀದಿಗಳ ಉಪಸ್ಥಿತಿಯನ್ನು ಉತ್ತಮವಾಗಿ ಸೂಚಿಸುವ ವಾಸ್ತುಶಿಲ್ಪ ಕಲೆಯಾಗಿದೆ. ಶತಮಾನಗಳಿಂದ ಮಸೀದಿಗಳು ಸಾಮಾಜಿಕ ಕೇಂದ್ರ, ಆರಾಧನಾ ಸ್ಥಳ, ಬೋಧನೆಯ ಕೇಂದ್ರ, ನ್ಯಾಯಾಲಯ, ಹಣಕಾಸು ವಹಿವಾಟಿನ ಸ್ಥಳ, ಆಡಳಿತಾತ್ಮಕ ಕೇಂದ್ರಗಳಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ.…

ಬಾಜಿ:ಆಂಟನ್ ಚೆಕೋವ್

ಅದು ಶರತ್ಕಾಲದ ಒಂದು ಕಗ್ಗತ್ತಲ ರಾತ್ರಿ. ಆ ಬಡ್ಡಿ ವ್ಯಾಪಾರಿ ಮುದುಕ ತನ್ನ ಓದಿನ ಕೊಠಡಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದಿಟ್ಟಿ ಹಾಯಿಸುತ್ತಾ ಹದಿನೈದು ವರ್ಷಗಳ ಹಿಂದೆ ಇದೇ ಶರತ್ಕಾಲದಲ್ಲಿ ತಾನು…

ಅಸ್ತಿತ್ವದ ಏಕತ್ವ(ವಹ್ದತುಲ್‌ ವುಜೂದ್):‌ ಒಂದು ತಾತ್ವಿಕ ವಿಶ್ಲೇಷಣೆ

ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇದೆ ಎನ್ನಬಹುದಾದ ವಸ್ತುವಾದರೂ ಯಾವುದು? ವಾಸ್ತವದಲ್ಲಿ ಇಲ್ಲೇನಿದೆ? ನಮ್ಮ ಸುತ್ತಮುತ್ತ ಕಣ್ಣಾಡಿಸುವಾಗ ಹಾಗೂ ಇಂದ್ರಿಯಗಳ ಮೂಲಕ ಅನುಭವಿಸುವಾಗ ಅನೇಕ ವಸ್ತುಗಳು ಅಸ್ತಿತ್ವದಲ್ಲಿರುವುದು ಸ್ವಯಂವೇದ್ಯ ಸತ್ಯವಾಗಿ ತೋರುತ್ತದೆ. ಆದರೆ, ಇವೆಲ್ಲ ಇಲ್ಲಿ…

ಇಸ್ಲಾಂ ಮತ್ತು ಮಾನವ ವಿಕಾಸ ಸಿದ್ದಾಂತ

ಇಸ್ಲಾಮಿಕ್‌ ಥಿಯಾಲಜಿಯಲ್ಲಿ ಮುಖ್ಯವಾಗಿ ಮೂರು ವಿಂಗಡನೆಗಳು ಕಂಡುಬರುತ್ತದೆ. ಒಂದು: ಇಲಾಹಿಯ್ಯಾತ್.‌ ಇದು ದೇವರ ಮೇಲಿನ ನಂಬಿಕೆಯ ಕುರಿತ ಚರ್ಚೆಯನ್ನು ಮಾಡುವಂತದ್ದು. ಎರಡು: ನುಬುವ್ವತ್; ಪ್ರವಾದಿತ್ವ ಸಂಬಂಧಿತ ವಿವರಣೆಗಳು. ಮೂರು; ಸಮ್‌ಇಯ್ಯಾತ್, ದೇವಸಂದೇಶ ಮೂಲಕ…

ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು

ಇಹ್ಸಾನಿಗೆ ಪ್ರತಿಫಲವಾಗಿ ಇಹ್ಸಾನಲ್ಲದೆ ಬೇರೇನು?ಖುರ್‌ಆನ್ (55:60) “ಸಕಲ ವಸ್ತುಗಳಲ್ಲಿ ದೇವರು ಸೌಂದರ್ಯ ಸ್ಥಾಪಿಸಿದ್ದಾನೆ”.ಹದೀಸ್‌ “ಸೌಂದರ್ಯವೆಂಬುದು ಸತ್ಯದ ಉಜ್ವಲ ಶೋಭೆಯಾಗಿದೆ.”ಪ್ಲಾಟೊ “ತತ್ವ ವಿಚಾರಗಳಂತ ಕಾಲ್ಪನಿಕ ಸ್ವರೂಪಗಳು ಪರಿಮಿತವಾದ ರೂಪದಲ್ಲಾದರೂ ಹೇಗೆ ಪಾರಮಾರ್ಥಿಕ ಸತ್ಯಗಳನ್ನು ಸಮಂಜಸವಾಗಿ…

ಪರ್ಷಿಯನ್ ಕಾವ್ಯ ಸಾಹಿತ್ಯ

ವಿಶ್ವ ಸಂಸ್ಕೃತಿಗೆ ಪರ್ಷಿಯನ್ ಭಾಷೆಯು ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆಧುನಿಕ ಇರಾನಿನ ಬೆಳವಣಿಗೆಯ ಹಿಂದೆ ಪರ್ಷಿಯನ್ ಭಾಷೆಯ ಪಾತ್ರ ಹಿರಿದು. ಪರ್ಷಿಯನ್ ಮಹಾ ಕವಿಗಳಿಂದ ಪ್ರಭಾವಿತರಾಗದ ಸಾಹಿತಿಗಳು ಬಹಳ ಕಡಿಮೆ. ಪೂರ್ವದ ಹಾಗೂ…

ಮುಹಮ್ಮದ್ ಅಲಿ: ಕ್ರೀಡಾ ಲೋಕದ ಆದರ್ಶ ವ್ಯಕ್ತಿ

ಕ್ರೀಡಾ ಲೋಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರತಿಭೆಯಾಗಿದ್ದರು ಮುಹಮ್ಮದ್ ಅಲಿ ಯವರು. ಅಂದಿನ ಅಜೇಯ ಬಾಕ್ಸರ್ ಆಗಿದ್ದ ಸೋನಿ ಲಿಸ್ಟನ್ ನನ್ನು 1964 ರಲ್ಲಿ ಸೋಲಿಸಿ ರಿಂಗ್ ನೊಳಗೆ ಭರ್ಜರಿ ಎಂಟ್ರಿ ಕೊಟ್ಟರು.…

ಮಕ್ಕಾದಿಂದ ಮಾಲ್ಕಮ್ ಎಕ್ಸ್  ಬರೆಯುತ್ತಾರೆ..    

ಇಬ್ರಾಹೀಮ್ (ಅ.ಸ) ಹಾಗೂ ಮುಹಮ್ಮದ್ (ಸ.ಅ) ರ ಪ್ರದೇಶವಾದ ಈ ಪವಿತ್ರ ನಗರದಲ್ಲಿ, ವಿವಿಧ ವರ್ಣದ ಜನರೊಂದಿಗಿನ ಸಹೋದರತೆಯ ಅದಮ್ಯ ಬಂಧವನ್ನೂ, ಉದಾರ ಹೃದಯದ ಆತಿಥ್ಯವನ್ನೂ ನಾನು ಇಂದಿನವರೆಗೂ ಅನುಭವಿಸಿರಲಿಲ್ಲ. ಕಳೆದ ವಾರ…

ಮದೀನಾ ಮತ್ತು ಏಥೆನ್ಸ್:‌ ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ

ವಿದ್ಯಾವಂತ ಜನರಲ್ಲಿ ವಿದೃಶ ವಿಚಾರಗಳನ್ನು ಮತ್ತು ರೂಪಕಗಳನ್ನು ರೂಪಿಸುತ್ತಾ ಉದಾರ ಕಲೆ ಅಥವಾ ಲಿಬರಲ್‌ ಆರ್ಟ್ಸ್‌ ಎಂಬ ಪಾರಿಭಾಷಕ ಪದ ಇಂದು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಬರುತ್ತಿದೆ. ಸಂಜ್ಞೆಗಳನ್ನು ಸಮರ್ಪಕವಾಗಿ ವ್ಯಾಖ್ಯಾನ ಮಾಡುವಲ್ಲಿ ಮತ್ತು…

ಇಬ್ಬರು ಬಶೀರ್

ಈ ಟಿಪ್ಪಣಿಯನ್ನು ಬರೆದವನ ಹೆಸರು ನೋಡಿ ನಿಮಗೆ ಕುತೂಹಲವೆನಿಸಬಹುದು. ಬಾಲ್ಯದ ದಿನಗಳಲ್ಲಿ ಓದಿನ ನವಿರಾದ ಪ್ರಪಂಚಕ್ಕೆ ನನ್ನನ್ನು ಆಕರ್ಷಿಸಿ ಮಂತ್ರಮುಗ್ಧಗೊಳಿಸಿದವರು ಸಾಹಿತ್ಯಲೋಕದ ಸುಲ್ತಾನ ವೈಕಂ ಮೊಹಮ್ಮದ್ ಬಶೀರರು. ಅಂತಹಾ ಮೇರು ಪ್ರತಿಭೆಯ ಕುರಿತು…

ಫಾತಿಮಾ ಅಲ್-ಫಿಹ್ರಿಯಾ: ವೈಜ್ಞಾನಿಕ ಲೋಕದ ಮೊರಾಕೋ ಮಹಿಳೆ

ಫಾತಿಮಾ ಬಿಂತ್ ಮುಹಮ್ಮದ್ ಅಲ್-ಫಿಹ್ರಿಯಾ 800 ರ ದಶಕದ ಆರಂಭದಲ್ಲಿ ಟುನೀಶಿಯಾದಲ್ಲಿ ಜನಿಸಿದಳು. ಅವಳು ಫಾತಿಮಾ ಅಲ್-ಫಿಹ್ರಿ ಎಂಬ ಹೆಸರಿನಲ್ಲಿ ಜಗಜ್ಜಾಹೀರಾಗಿದ್ದಾಳೆ. ಕ್ರಿ.ಶ 859 ರಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಅಲ್ ಖರಾವಿಯೀನ್…