ಫೆಲಸ್ತೀನ್, ಲೆಬನಾನ್: ನಿಜ ಬದುಕಿನ ಅನಾವರಣ

ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವುದೋ, ಅಡಗಿಸಿಡುವುದೋ ಮಾಡುವವರಿಗೆ ನೇರ ಸೂಚಕಾ ವಸ್ತುವೇ ಡಾ. ಆಂಗ್ ಸ್ವೀ ಛಾಯ್ ಅವರು ಬರೆದ ‘From Beirut to Jerusalem’. ಈ ಪುಸ್ತಕವನ್ನು ‘ಬೈರೂತಿನಿಂದ ಜೆರುಸಲಂಗೆ’ ಎಂಬ ಹೆಸರಿನಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಬಹಳ ಚಂದವಾಗಿ ಕನ್ನಡೀಕರಿಸಿದ್ದಾರೆ.
ಫೆಲಸ್ತೀನ್ ಕುರಿತ ಓದುವಿಕೆಯಲ್ಲಿ ಪ್ರಮುಖವಾದ ಗ್ರಂಥವಿದು. ತಿರಸ್ಕ್ರತವಾದ ಒಂದು ಜನತೆ ಅಸಾಹಯಕತೆಯ ನಡುವೆ ಸಿಲುಕಿ ಅನುಭವಿಸುವ ‘ನೋವಿನ ಅನುಭವ’ಗಳನ್ನು ಸಾಕ್ಷಿಯಾರಿಸಿ ಬರೆದ ಗ್ರಂಥವಿದು. ಪ್ರತಿಯೊಂದು ಗೆರೆಯಲ್ಲೂ ಫೆಲಸ್ತೀನಿನ ನೋವು ಎಷ್ಟು ತೀವ್ರತೆಯನ್ನು ನೀಡುತ್ತದೆಯೆಂದು ಓದುಗನಿಗೆ ಓದುತ್ತಾ ಹೋದಂತೆ ಮನದಟ್ಟಾಗುತ್ತದೆ.

“ಫೆಲಸ್ತೀನಿಯರಿಗೆ, ಫೆಲಸ್ತೀನನ್ನು ಪ್ರೀತಿಸುವವರಿಗೆ” ಎಂಬ ಮುನ್ನುಡಿಯೊಂದಿಗೆ ಪುಸ್ತಕದ ಆರಂಭ. ಮುನ್ನುಡಿಯಲ್ಲೇ ತಾನು ಯಾರೆಂದು ಸೂಚಿಸುತ್ತಾರೆ ಡಾ. ಆಂಗ್ ಸ್ವೀ ಛಾಯ್. ಅವರೊಬ್ಬ ವಿದ್ಯೆ ಕರಗತಗೊಳಿಸಲು ಹೋರಾಡಿದ ಒಂದು ತಾಯಿಯ ಮಗ. ಅಪ್ಪ ಹಾಗೂ ಅಮ್ಮನ ಜೀವನ ಸಾಹಸಿಕ ಹಾಗು ನೀತಿಯ ಸಲುವಾಗಿತ್ತು. ಜೈಲಿನಲ್ಲಾಗಿತ್ತು ಅವರು ವಿವಾಹಿತರಾಗುವುದು. ಬಾಲ್ಯದಲ್ಲೇ ಉತ್ಸಾಹ, ಹುರುಪಿನಿಂದ ಕಲಿತು ವೈದ್ಯಕೀಯ ಕೆಲಸಕ್ಕೆ ಸೇರಿಕೊಂಡರು. ವೈದ್ಯರಾದ ಬಳಿಕ ಛಾಯ್ ‘ಈ ವೃತ್ತಿ ನನಗೆ ಹಣ ಗಳಿಸುವುದರ ಬದಲು ಬಡ-ನಿರ್ಗತಿಕರನ್ನು ರಕ್ಷಿಸಲು ಇರುವುದೆಂದು ತೀರ್ಮಾನಿಸಿ, ಪುಸ್ತಕ ಅಧ್ಯಯನದತ್ತ ಕಾಲಿಟ್ಟರು.

1982 ಇಸವಿಯಲ್ಲಿ ಲಂಡನ್ನಿನ ವೈದ್ಯರಾಗಿ ಸೇವೆ ಸಲ್ಲಿಸುವಾಗ, ನಿರಂತರ ಯುದ್ಧ ನಡೆಯುವ ಲೆಬನಾನಿಗೆ ‘ಪರಿಣಿತ ವೈದ್ಯರು ಬೇಕೆಂಬ’ ಜಾಹಿರಾತು ಕಾಣುತ್ತದೆ. ಬಾಲ್ಯ ಕಾಲದಲ್ಲಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಉತ್ಸಾಹಿಯಾಗಿದ್ದರು ಛಾಯ್. ಛಾಯ್ ಬಿ.ಬಿ.ಸಿಯಲ್ಲಿ ವಾರ್ತೆ ಕೇಳುವಾಗ ಅಚ್ಚರಿಪಟ್ಟರು, ‘ಇಸ್ರೇಲರು ಸಾಮೂಹಿಕ ಕೋಲೆ ನಡೆಸುತ್ತಿರುವುದೋ..?’ ಎಂದು ಚಿಂತಿಸಿಯಾಗಿತ್ತು ಆಶ್ಚರ್ಯಚಕಿತರಾದದ್ದು. ಕಾರಣ ಇಸ್ರೇಲರ ಕುರಿತು ಕೇಳಿದ ಸ್ಪಷ್ಟೀಕರಣ ಹಾಗೆ ಆಗಿರಲಿಲ್ಲವಲ್ಲಾ ಎಂಬುವುದಾಗಿತ್ತು. ಆದರೂ ಹಾಸ್ಪಿಟಲ್ ಕೆಲಸ ಕೊನೆಗೊಳಿಸಿ ಬೈರೂತಿನತ್ತ ಹೊರಟುನಿಂತರು. ಜಗತ್ತಿನಲ್ಲಿನ ಹಲವು ಭಾಗಗಳಿಂದಿರುವ ನೂರರಷ್ಟು ಬರುವ ವೈದ್ಯರೊಂದಿಗೆಯಾಗಿತ್ತು ಯಾತ್ರೆ.

ಈ ಪುಸ್ತಕ ಐದು ಪ್ರಮುಖ ಅಧ್ಯಯನದ ಕ್ರಮೀಕರಣದೊಂದಿಗಿದೆ. ಹೃದಯ ಉದ್ವೇಗಗೊಳ್ಳುವ ನೋವಿನ ಅನುಭವವನ್ನು ಪ್ರತೀ ಅಧ್ಯಯನದಲ್ಲಿ ಕಾಣಲು ಸಾಧ್ಯ. ಬೈರೂತಿನ ಪ್ರಾಥಮಿಕ ಯಾತ್ರೆಯ ಅನುಭವವನ್ನು ಒಳಗೊಂಡ ಮೊದಲ ಅಧ್ಯಾಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಯುದ್ಧದ ಭಯಾನಕತೆಯನ್ನು ವಿಭಿನ್ನವಾಗಿ ವಿವರಿಸುತ್ತಾರೆ; “ನಾವು ತಲುಪುವ ಹೊತ್ತಿಗೆ ವೈಮಾನಿಕ ಯುದ್ಧದ ತುಂಬ ಶೋಚನೀಯವಾದ ಹಂತವು ಮುಗಿದಿತ್ತು. ಬಾಂಬ್, ಶೆಲ್ಲ್’ಗಳು ಬಂದು ಬೀಳುವುದಿಲ್ಲವೆಂಬ ಸಂತೈಕೆಯಿದ್ದರೂ, ನಗರದಲ್ಲಿ ಕಂಡ ದೃಶ್ಯವು ಅದನ್ನ ಮರತು ಹೋಗುವಂತಾಗಿಸಿತು. ಬಾಂಬ್ ಮೂಲಕ ನೆಲಸಮವಾದ ಕಟ್ಟಡ, ಅವಶೇಷಗಳ ರಾಶಿ, ಬಿದ್ದು ನೇತಾಡುತಿರುವ ಕಟ್ಟಡ ಗೋಡೆಗಳು ನೋಡುವಾಗ ತಲೆಕೆಳಗಾಗಿದ ಅಡ್ಡ ಬಿದ್ದಂತೆ ಕಾಣುತ್ತಿತ್ತು. ನಾಶದ ಕೈಗಳಿಗೆ ಸಿಗದ ಬೈರೂತ್ ಇಂದೂ ಸುಂದರವಾಗಿದೆ.” ಎಂದು ಯುದ್ಧದ ಭಯಾನಕತೆಯ ಕುರಿತು ವಿವರಿಸುತ್ತಾರೆ. ವಿಶೇಷವಾದ ಪರಿಭಾಷಾ ಪ್ರಯೋಗದೊಂದಿಗೆ ಒಂದೊಂದೇ ಸ್ವಾನುಭವವನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.

ಎಲ್ಲಾ ಆಸ್ಪತ್ರೆಗಳು ಇಸ್ರಾಯೀಲರ ಬಾಂಬ್ ದಾಳಿಯಿಂದ ಉರುಳಿ ಬಿದ್ದಿದೆ. ಔಷಧಿ, ಅತ್ಯವಶ್ಯಕ ವಸ್ತುಗಳೇನೂ ಇಲ್ಲ. ಅದರ ಮಧ್ಯೆ ಮಕ್ಕಳನ್ನು ಸಹ ಹೊರಗಡೆ ಕೊಂದು ಹಾಕುತ್ತಿದ್ದಾರೆ. ಈ ಖಿನ್ನತೆಯ ಮಧ್ಯೆ ನಿಲ್ಲುವಾಗಲೂ ಅಸ್ತಮಿಸದ ಕಿರಣಗಳನ್ನು ಅವರು ಮುಖದಲ್ಲಿ ಬಿರಿಯುವುದನ್ನು ಕಾಣುವುದೆಂದು ಲೇಖಕ ಛಾಯ್ ವಿವರಿಸುತ್ತಾರೆ. ಅದರೊಂದಿಗೆ ಮನುಷ್ಯತ್ವದ ಸರ್ವ ಮಜಲುಗಳನ್ನು ಲಂಘಿಸಿ ನಡೆಸುವ ಅಧಿಕಾರದ ಕುರಿತು ಪ್ರತಿಯೊಂದು ಅಧ್ಯಾಯವು ಚರ್ಚಿಸುತ್ತದೆ.

ಹೇಗೆ ಸ್ವಾತಂತ್ರಕ್ಕೆ ಬೇಕಿರುವ ಆವೇಶವನ್ನು ಪಡೆಯುವುದೆಂದು, ಇಸ್ರೇಲರ ಮಧ್ಯೆ ಜೀವಿಸುವ ಫೆಲಸ್ತೀನಿನ ಸಣ್ಣ ಮಕ್ಕಳು ನಿರಂತರವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ ಎಂದು ಈಸಾ ಎಂಬ ಪುಟ್ಟ ಮಗುವಿನ ಅನುಭವದ ಮೂಲಕ ವಿವರಿಸಿಕೊಡುತ್ತಾರೆ. ಫೆಲಸ್ತೀನ್ ಕ್ರಿಶ್ಚಿಯನ್ ಬಂಧನದಲ್ಲಿದ್ದ ಮಗುವೇ ಈಸ. ತನ್ನ ಕಾಲು ನಷ್ಟಹೊಂದಿದಾಗಲೂ ಮಾತುಗಾರಿಕೆ ಫೆಲಸ್ತೀನಿನ ಸ್ವಾತಂತ್ರದ ಕುರಿತಾಗಿತ್ತು. ಆದರೆ ನಡೆದಾಡಲು ಸಾಧ್ಯವಿಲ್ಲದ ಈ ಮಗುವಿನ ಕುರಿತು ಮನಃವೇದನೆಗೊಳ್ಳುತ್ತಾರೆ. ಮಕ್ಕಳನ್ನು ಹೇಗೆ ಇಷ್ಟು ಭೀಕರತೆಯಿಂದ ಸಾಮೂಹಿಕವಾಗಿ ಕೊಲ್ಲುವುದು…? ಎಂದು ಆಂಗ್ ಖೇದಕರವಾಗಿ ಕೇಳುತ್ತಾರೆ.

ಒಂದು ಡೈರಿಯ ರೀತಿಯಲ್ಲಿ ಆಂಗ್ ತಾನು ಕಂಡ ಅನುಭವವನ್ನು ಈ ರೀತಿಯಾಗಿ ಪ್ರತಿಯೊಂದು ಅನುಭವ ಘಟನೆಯನ್ನು ವಿವರಿಸುತ್ತಾರೆ. ಇದು ಪ್ರತಿಯೊಬ್ಬನೂ ಓದಲೇಬೇಕಾದ ಕೃತಿ. ನಮ್ಮ ಕಾಲದ ಅಕ್ರಮ, ದುರಂತಗಳು ನಾವು ಅರಿಯದೇ ಹೋಗಬಾರದು. ಇಸ್ರಾಯೀಲರ ವಿರುದ್ಧ ಮಾನಸಿಕವಾಗಿ ಬೆಂಬಲ ನೀಡಲು ಈ ಕೃತಿ ಖಂಡಿತ ಪ್ರೇರಕವಾಗುವುದು.
ಅದಲ್ಲದೆ ಈಗಲೂ ಹಿಟ್ಲರ್ ಯಹೂದರೊಂದಿಗೆ ಮಾಡಿದ ಕ್ರೂರತೆ ಕುರಿತ ಅನುಭವಗಳು ಹಾಗೂ ಕಾದಂಬರಿಗಳು ಇಂಗ್ಲಿಷ್ ಸಾಹಿತ್ಯದಲ್ಲಿ ಮನಃಪೂರ್ವಕವಾಗಿ ಬಿಡಲಾಗುತ್ತಿದೆ. ಅದರೊಂದಿಗೆ ಯಹೂದರೊಂದಿಗಿರುವ ಸಹಾನುಭೂತಿ ಶಕ್ತವಾಗುತ್ತಿದೆ. ಹೀಗೆ ಲಭಿಸುವ ಬಲದಿಂದ ಅವರು ಅಂದು ಹಿಟ್ಲರ್ ಮಾಡಿದ ನೂರುಪಟ್ಟು ಅನೀತಿಯನ್ನು ಫೆಲಸ್ತೀನರೊಂದಿಗೆ ಮಾಡುತ್ತಿದ್ದಾರೆ…
ಹೀಗೆ ಲೇಖಕರು ಫೆಲಸ್ತೀನಿನ ಅನುಭವವನ್ನು ಪುಸ್ತಕದಂತ್ಯದವರೆಗೂ ವಿವರಿಸುತ್ತಾರೆ.
ಈ ವಿಷಯದಲ್ಲಿ ಹಲವು ಪುಸ್ತಕಗಳು ವಿಶ್ವದಾದ್ಯಂತ ರಚಿಸಲ್ಪಟ್ಟಿದೆ. ಅದು ಕನ್ನಡ ಭಾಷೆಗೆ ಬರಬೇಕಾದ ಅನಿವಾರ್ಯತೆಯಿದೆ.

ಈ ಪುಸ್ತಕವನ್ನು ಕೇರಳದ ‘Other Books’ ಪ್ರಕಾಶನ ಹೊರತಂದಿದೆ. ಅಲ್ಲದೆ ಸೂಫಿಸಂ, ಇತಿಹಾಸ, ದಲಿತ ಅಧ್ಯಯನ ಸೇರಿದಂತೆ ಹಲವು ವಿಷಯಗಳಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಯಲ್ಲಿ ಹಲವು ಉಪಯುಕ್ತ ಪುಸ್ತಕಗಳನ್ನ ಪ್ರಕಾಶನ ಮಾಡಿದ ಪ್ರಕಾಶನವಿದು.
~
ಫಕೀರ ಮುಹಮ್ಮದ್ ಕಟ್ಪಾಡಿಯವರು ತಮ್ಮ ಕನ್ನಡ ‍ಸಾಹಿತ್ಯದಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದವರು. ಇವರ ಕಥೆಗಳು ಭಾರತ‍ದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಸೂಫೀ ಸಾಹಿತ್ಯದ ಮೂರು ಕೃತಿ; ಸೂಫಿ ಸಂತರು, ಸೂಫಿ ಮಹಿಳೆಯರು,ಉತ್ತರ ಕರ್ನಾಟಕದ ಸೂಫಿಸಂತರು. ಅಲ್ಲದೆ ಹಲವು ಕಥಾ ಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ.

-ಸಲೀಂ ಇರುವಂಬಳ್ಳ.

5 Comments

  1. “Other books”ಪ್ರಕಾಶನವು ಝಿಯಾವುದ್ದೀನ್ ಸರ್ದಾರರಂತವರ ಪುಸ್ತಕವನ್ನು ಅನುವಾದಿಸಿ ಮುಸ್ಲಿಮರೆಡೆಯಲ್ಲಿ ಫಿತಿನ ನಡೆಸುತ್ತಿದೆಯೆಂದು ಕೆಲವರ ಅಭಿಪ್ರಾಯವಿದೆ..

  2. ನನಗೆ ಈ ಪುಸ್ತಕ ಬೇಕು.
    ಎಮ್ ಎಸ್ ಮಂಡಲಗೇರಿ ಕುವೆಂಪು ನಗರ ಕೊಪ್ಪಳ
    Pin code 583231
    Mobile number 8050505581

Leave a Reply

*