ಶವರ್ಮ: ಗಡಿದಾಟಿದ ಸಂಸ್ಕೃತಿ ಮತ್ತು ಆಹಾರ ಪದ್ಧತಿ

ಸುರುಟುವುದು ಎಂಬರ್ಥವನ್ನು ನೀಡುವ ‘ಜಿವಿರ್ಮ’ (Civirme) ಎಂಬ ತುರ್ಕಿ ಪದದಿಂದ ಶವರ್ಮ ಎಂಬ ಪದ ಹುಟ್ಟು ಪಡೆಯುತ್ತದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿದ ರಾಷ್ಟ್ರಗಳಲ್ಲಿ ಸೌಟನ್ನು ಉಪಯೋಗಿಸಿ ಮಾಂಸವನ್ನು ಗ್ರಿಲ್ ಮಾಡಿ ತೆಗೆಯುವುದರೊಂದಿಗೆ ಶವರ್ಮ ತಯ್ಯಾರಾಗುತ್ತದೆ. ಫೆಲಸ್ತೀನ್ ರಾಷ್ಟ್ರದಲ್ಲಿ ಶವರ್ಮ ಅಂಗಡಿಗಳಲ್ಲಿ ವೈವಿಧ್ಯಮಯ ಟೆಚ್ಚಿಂಗ್ಸ್’ಗಳು (ಶವರ್ಮಾದ ಮೇಲ್ಗಡೆ ಸುರಿಯುವ ಸಾರು ಅಥವಾ ಸೂಪ್) ಕಾಣಬಹುದು. ಗಟ್ಟಿಯಾದ ತಾಹಿನಿ, ವಾಝ್ಸಲಿ ಭಕ್ದುಲ್ಸಿಯಾ, ಗಾಝಾದಿಂದಿರುವ ಅರೆದ ಕರುಮ, ಬೆಳ್ಳುಳ್ಳಿ, ಕ್ಯಾಬೇಜ್, ಸಲಾಡ್ ಅವುಗಳ ಪೈಕಿ ಕೆಲವು. ಆ ಪೈಕಿ ಕೈಬಿಡಲಾಗದ್ದು ಮಾವಿನಕಾಯಿ ಉಪಯೋಗಿಸಿಕೊಂಡು ಮಾಡುವ ‘ಅಂಬ’. ಅಂಬ ಪ್ಯಾಲೆಸ್ಟೈನ್ ನಿಂದ ಇಲ್ಲಿಗೆ ತಲುಪಿದ ಇತಿಹಾಸದ ಹಿಂದೆ ದೇಶೀಯ ಸಾಂಸ್ಕೃತಿಕ ವಿನಿಮಯದ ಚರಿತ್ರೆಯಿದೆ. ದಕ್ಷಿಣೇಷ್ಯಾದ ಉಪ್ಪಿನಕಾಯಿ ಅರೆದು ಮಾಡಿದ ಮಸಾಲೆಯಿಂದ ಸಪೋಟ-ದಾಳಿಂಬೆ ಬಣ್ಣವುಳ್ಳ ಅಂಬ ತಯ್ಯಾರು ಮಾಡಲಾಗುತ್ತದೆ. ಮೊದಲ ಹಂತ, ಮಾವಿನ ಕಾಯಿಗಳನ್ನ ಸಣ್ಣ ತುಂಡುಮಾಡಿ ಉಪ್ಪಲ್ಲಿ ನೆನೆದುಹಾಕಿ, ನಂತರ ಮೆಣಸಿನ ಪುಡಿ, ವಿನಿಗರ್, ಸಾಸಿವೆ, ಅರಿಶಿನ ಹಾಕಿ ಅಂಬ ತಯಾರು ಮಾಡುತ್ತಾರೆ. ಇದು ಮಾವಿನಕಾಯಿಯ ಚಟ್ನಿಗಿಂತ ಹುಳಿಯಾಗಿ ಹೆಚ್ಚು ರಸವತ್ತಾಗಿರುತ್ತೆ. ದಕ್ಷಿಣ ಭಾರತದಿಂದ ಹಲವು ಶತಮಾನಗಳು ಕಳೆದಾಗಿತ್ತು ಪ್ಯಾಲೆಸ್ಟೈನ್ ಗೆ ‘ಅಂಬ’ ಕಾಲಿರಿಸುವುದು. ಮಾವು ಎಂದರ್ಥ ಬರುವ ‘ಆಂ’ ಎಂಬ ಮರಾಠಿ ಭಾಷೆಯಿಂದ ಉದ್ಭವ ಪಡೆದದ್ದೇ ಈ ಅಂಬ. ಅದನ್ನು ಇರಾಖಿಗೆ ಪರಿಚಯಿಸಿ, ದೇಶೀಯ ಆಹಾರವಾಗಿ ಬದಲಾಯಿಸಿದ್ದು ಬಗ್ದಾದೀ ಯಹೂದಿಯರು ಮತ್ತು ಭಾರತೀಯರಾಗಿದ್ದರು. ಇರಾಖಿಯನ್ನರು ಅದನ್ನು ಪ್ಯಾಲೆಸ್ಟೈನಿಯನ್ನರಿಗೆ ಪರಿಚಯಿಸಿಕೊಟ್ಟರು.

ಹಾಗಾದರೆ ಈ ಭಾರತೀಯ ಮಾವಿನಕಾಯಿ ಉಪ್ಪಿನಕಾಯಿ ಪ್ಯಾಲೆಸ್ಟೈನಿನ ಶವರ್ಮಾ ಸ್ಯಾಂಡ್‌ವಿಚ್ ಅಂಗಡಿಗಳನ್ನು ಹೇಗೆ ತಲುಪಿತು? ಇದು ಬ್ರಿಟಿಷ್ ವಸಾಹತುಶಾಹಿಯ ಇತಿಹಾಸದೊಂದಿಗೆ ಎರಡು ವಿಭಿನ್ನ ರೀತಿಯಲ್ಲಿ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿರುವ ಸುದೀರ್ಘ ಕಥೆಯಾಗಿದೆ: 19 ನೇ ಶತಮಾನದಲ್ಲಿ ಹಿಂದೂ ಮಹಾಸಾಗರದ ವ್ಯಾಪಾರ ಜಾಲಗಳ ರೂಪಾಂತರವು ಬ್ರಿಟಿಷ್ ನಿಯಂತ್ರಣಕ್ಕೆ ಬಂದಿತು ಮತ್ತು 20 ನೇ ಶತಮಾನದಲ್ಲಿ ಝಿಯಾನಿಸ್ಟ್ ಪಡೆಗಳಿಂದ ಬ್ರಿಟಿಷ್ ಮ್ಯಾಂಡೇಟ್ ಪ್ಯಾಲೆಸ್ಟೈನ್ ವಸಾಹತುಶಾಹಿಗಳ ಪಾಲಾಯಿತು. ಈಗ ನಾವು ಆ ಇತಿಹಾಸಕ್ಕೆ ಮರಳೋಣ

ಹಿಂದೂ ಮಹಾಸಮುದ್ರದಲ್ಲಿನ ವಾಣಿಜ್ಯ

ಹಲವಾರು ವರ್ಷಗಳಿಂದ ಸಮುದ್ರ ಗಡಿದಾಟಿ ಕೊಡು-ಕೊಳ್ಳುವಿಕೆ ನಡೆಸಿದ ವ್ಯಾಪಾರಿಗಳ ಚರಿತ್ರೆಯು ಈ ಮಹಾಸಮುದ್ರದಲ್ಲಿ ನಡೆದ ವಾಣಿಜ್ಯೀಕರಣವನ್ನು ಪರಿಚಯಿಸುತ್ತದೆ. ಪೂರ್ವ ಪಶ್ಚಿಮ-ಆಫ್ರಿಕಾದಿಂದ ದಕ್ಷಿಣ ಯೂರೋಪ್ ತನಕವೂ ಅಲ್ಲಿಂದ ಪಶ್ಚಿಮೇಷಿಯಾ, ಅಲ್ಲಿಂದ ಪರ್ಶಿಯನ್ ಒಳಗಡಲ ಮಾರ್ಗವಾಗಿಯೂ ಅರಬಿ ಕಡಲ ದಾರಿಯಾಗಿ ಅದು ಭಾರತ, ಇಂಡೋನೇಷಿಯಾ, ಚೈನಾವರೆಗೂ ವ್ಯಾಪಿಸಿತು. ಆದರೆ ಶತಮಾನಗಳಿಂದ ವಿಶ್ವ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದರೂ, ಪಶ್ಚಿಮ-ಮಧ್ಯ ಏಷ್ಯಾದ ಭೂಮಾರ್ಗದ ಮೂಲಕ ಯುರೋಪ್ ಮತ್ತು ಚೀನಾವನ್ನು ಸಂಪರ್ಕಿಸುವ ಸಿಲ್ಕ್ ರಸ್ತೆಯಂತೆ ಈ ಸಮುದ್ರ ಮಾರ್ಗವು ನೆನಪಿಸಲ್ಪಟ್ಟಿಲ್ಲ ಎಂಬುದು ವಾಸ್ತವ. ಕ್ರಿ.ಶ. 1600 ರ ಹೊತ್ತಿಗೆ ಈ ವ್ಯಾಪಾರ ಮಾರ್ಗವು ಅಭಿವೃದ್ಧಿ ಪಡೆದಿದ್ದಲ್ಲದೆ ಶತಮಾನಗಳಿಂದ ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿರುವ ವ್ಯಾಪಾರಿಗಳಿಗೆ ತಲುಪಿ ಅವರ ನಡುವೆ ಒಂದು ಕೊಂಡಿ ಸೃಷ್ಟಿಸಿತು. ಯಮನ್‌ನಿಂದ ಬಂದ ಹಳ್‌ರಮಿಗಳು ಭಾರತದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿ, ಸಿಂಗಾಪುರ ಮತ್ತು ಹಾಂಗ್-ಕಾಂಗ್‌ನಲ್ಲಿ ತಮ್ಮದೇ ಆದ ವಾಸಸ್ಥಾನಗಳನ್ನು ಕಂಡುಕೊಂಡರು.
ಗುಜರಾತಿ ವ್ಯಾಪಾರಿಗಳು ಒಮಾನ್, ಪರ್ಷಿಯನ್ ಗಲ್ಫ್ ರಾಷ್ಟ್ರಗಳಿಗೂ ಝಾಂಝಿಬರ್ (Zanzibar) -ಏಡೆನ್ ಎಂಬಲ್ಲಿಗೂ ಮತ್ತು ಪರ್ಷಿಯನ್ನರು ಚೀನಾಕ್ಕೆ ಪ್ರಯಾಣ ಬೆಳೆಸಿದರು. ಹಿಂದೂ ಮಹಾಸಾಗರದಾದ್ಯಂತ ಅನೇಕ ನಗರಗಳಲ್ಲಿ ನೆಲೆಗಳನ್ನು ಹೊಂದುವ ಮೂಲಕ, ಈ ಸಮುದಾಯಗಳು ಸಾವಿರಾರು ಮೈಲುಗಳಷ್ಟು ದೂರದ ಪಟ್ಟಣಗಳನ್ನು ಪರಸ್ಪರ ಜೋಡಿಸುವ ಬಹುರಾಷ್ಟ್ರೀಯ ವ್ಯಾಪಾರ ಜಾಲಗಳಾದವು. ಯುರೋಪಿಯನ್ ವ್ಯಾಪಾರಿಗಳು ತಮ್ಮ ವಸಾಹತುಶಾಹಿ ವಿಸ್ತರಣೆಯ ಭಾಗವಾಗಿ ಕ್ರಿ.ಶ.1600 ರ ದಶಕದಲ್ಲಿ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದಾಗ, ಅವರು ಈ ವ್ಯಾಪಾರ ಜಾಲಗಳನ್ನು ಸೇರದೆ ವಸಾಹತು ಆಗಿ ವಶಪಡಿಸಿಕೊಳ್ಳಲು ನೋಡಿದರು.

ಬಗ್ದಾದಿ ಯಹೂದಿ ಸಂಪರ್ಕಗಳು

ಕೆಲವು ಹಿಂದೂ ಮಹಾಸಾಗರದ ವ್ಯಾಪಾರ ಸಮುದಾಯಗಳು ಈ ಪ್ರಕ್ರಿಯೆಯಲ್ಲಿ ಬದುಕುಳಿಯುವಲ್ಲಿ ಯಶಸ್ವಿಯಾದವು, ಆದಾಗ್ಯೂ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕೆಲವು ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಂಡವು. ಬಗ್ದಾದಿ ಯಹೂದಿ ಸಮುದಾಯಗಳು ಇವುಗಳಲ್ಲಿ ಒಂದಾಗಿದ್ದವು. ಕ್ರಿ.ಶ. 17 ನೇ ಶತಮಾನದ ಆರಂಭದಲ್ಲಿ, ಬಾಗ್ದಾದ್‌ನಿಂದ ಇರಾಕಿನ ಯಹೂದಿ ವ್ಯಾಪಾರಿಗಳ ಗುಂಪುಗಳು ಪರ್ಷಿಯನ್ ಗಲ್ಫ್ ಬಂದರು ಬಸ್ರಾ ಮತ್ತು ಅಲ್ಲಿಂದ ಮುಂದೆ ಮೊಘಲ್ ಇಂಡಿಯಾಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರು ಬಾಂಬೆ, ಪುಣೆ ಮತ್ತು ಕಲ್ಕತ್ತಾದಂತಹ ಪಟ್ಟಣಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಕಾಲಾನಂತರದಲ್ಲಿ, ಅಲೆಪ್ಪೊ ಮತ್ತು ಯೆಮೆನ್‌ನ ಇತರ ಯಹೂದಿ ಅರಬ್ಬರು ಸಹ ಈ ಸಮುದಾಯಗಳಿಗೆ ಸೇರುತ್ತಾರೆ. ಕ್ರಿ.ಶ. 18 ಮತ್ತು 19ನೇ ಶತಮಾನಗಳಲ್ಲಿ ವ್ಯವಸಾಯೀಕರಣದ ಕಾರಣದಿಂದ ಯಾತ್ರೆ-ವಿನಿಮಯ ಮಾರ್ಗಗಳು ತ್ವರಿತವಾಗಿ ಬಳಸಿ ಒಂದೆಡೆ ಯಾಂಗೋನ್, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಶಾಂಘೈಗೆ ಮುಂತಾದ ನಗರಗಳಿಗೆ ಇದು ವ್ಯಾಪಿಸಿತು. ಇನ್ನೊಂದೆಡೆ ಲಂಡನ್ ಮತ್ತು ಮ್ಯಾಂಚೆಸ್ಟರ್ ನಗರಗಳಿಗೂ ಹರಡಿತು. ಹಿಂದೂ ಮಹಾಸಾಗರದ ತೀರದಲ್ಲಿ ವ್ಯಾಪಿಸಿರುವ ಸಮಗ್ರ ವ್ಯಾಪಾರ ಸರಪಳಿಗೆ ಮತ್ತು ಅಂತರಾಷ್ಟ್ರೀಯ ಅರಬ್-ಯಹೂದಿ ಸಂಸ್ಕೃತಿಗೆ ಇದು ಜನ್ಮ ನೀಡಿತು. ಈ ವಾಣಿಜ್ಯ ಸರಪಳಿಯು ಬಾಗ್ದಾದಿ ಯಹೂದಿ ಪಾಕಪದ್ಧತಿಯಲ್ಲಿ ಪ್ರತಿಫಲವುಂಟುಮಾಡಿತು. ಅಂಬಾದಂತೆ ಬಿರಿಯಾನಿ, ಕೋಳಿ ಸಾರು ಮತ್ತು ಪರೋಟ, ಬಾಗ್ದಾದಿ ಯಹೂದಿಗಳ ನೆಚ್ಚಿನ ಭಕ್ಷ್ಯ ವಸ್ತುವಾಯಿತು. ಇನ್ನು ಕೆಲವು ಸಮುದಾಯವು ಅವರವರ ಊರಿನ ಭೋಜನಾ ಸಂಸ್ಕೃತಿಯನ್ನು ಸ್ವೀಕರಿಸಿದವು. ಕ್ರಿ.ಶ. 20ನೇ ಶತಮಾನದ ಉತ್ತರಾರ್ಧದಲ್ಲಿ ಯಮನ್‌ನ ಹಳ್ರಮಿಗಳು ಆಗ್ನೇಯ ಏಷ್ಯಾದ ಪಾಕಪದ್ಧತಿಯನ್ನು ಸೇವಿಸುತ್ತಿದ್ದರು ಎಂದು ಎಂಗ್‌ಸಂಗ್ ಹೋ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 20 ನೇ ಶತಮಾನದ ವೇಳೆಗೆ ಮಧ್ಯ ಏಷ್ಯಾ, ಭಾರತ ಮತ್ತು ಆಗ್ನೇಯ ಏಷ್ಯಾದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡ ಬ್ರಿಟಿಷ್ ಸಾಮ್ರಾಜ್ಯವು ಬಾಗ್ದಾದಿ ಯಹೂದಿಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತಲ್ಲದೆ ಅಂತರಾಷ್ಟ್ರೀಯ ಸಂಸ್ಕೃತಿಗೆ ಹೆಚ್ಚು ಒಲವನ್ನು ನೀಡಲು ಆರಂಭಿಸಿದರು. ಮೊದಲ ಮಹಾಯುದ್ಧದ ಸಮಯದಲ್ಲಿ ಇರಾಕನ್ನು ಆಕ್ರಮಿಸಿಕೊಂಡ ಬ್ರಿಟಿಷ್ ಸೈನ್ಯವು ಹೆಚ್ಚಿನ ಸಂಖ್ಯೆಯ ಭಾರತೀಯ ಸೈನಿಕರನ್ನು ಹೊಂದಿತ್ತು. ಯುದ್ಧದ ನಂತರ ಅವರು ತಮ್ಮ ತಾಯ್ನಾಡಿಗೆ ಮರಳದೆ ಇರಾಖ್‌ನಲ್ಲೇ ನೆಲೆಸಿದರು. ಐಷಾರಾಮಿ ವಸ್ತುಗಳು ರಫ್ತಾಗುವಂತೆ ಶವರ್ಮಾ ಮತ್ತು ಅಂಬಾ ಸಂಬಾರುಗಳಂತಹ ಆಹಾರ ಪದಾರ್ಥಗಳು ಸಹ ಭಾರತದಿಂದ ಇರಾಕ್‌ಗೆ ರಫ್ತು ಮಾಡಲಾಯಿತು. ಸಿಹಿ, ಹುಳಿ, ಮಸಾಲೆಯುಕ್ತ ಈ ರುಚಿಕರವಾದ ಮಾವಿನ ರಸವು ಇರಾಖ್ ರಾಷ್ಟ್ರದಾದ್ಯಂತ ಜನಪ್ರಿಯವಾಯಿತು. ಇರಾಕಿ-ಯಹೂದಿ ಕಾದಂಬರಿಗಾರ ಸೊಮೆವ್ ಸಾಸೂನ್ ಬಾಗ್ದಾದಿನ ಬೀದಿಗಳಲ್ಲಿ ಅಂಬಾದೊಂದಿಗಿನ ಅವರ ಬಾಲ್ಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ನೆನಪಿಸುತ್ತಾರೆ.

ಫೆಲಸ್ತೀನ್; ಆಹಾರ ಸಂಸ್ಕೃತಿ

ಮೊದಲನೆಯ ಮಹಾಯುದ್ಧದ ನಂತರ, ಆಟ್ಟೋಮನ್ ಸಾಮ್ರಾಜ್ಯವನ್ನು ಬ್ರಿಟಿಷರು ಮತ್ತು ಫ್ರೆಂಚರು ನಾಶಪಡಿಸಿದರು. ಸಿರಿಯಾ ಮತ್ತು ಲೆಬನಾನನ್ನು ಫ್ರೆಂಚರು ವಶಪಡಿಸಿಕೊಂಡಾಗ ಪ್ಯಾಲೆಸ್ಟೈನ್  ಮತ್ತು ಜೋರ್ಡಾನ್ ಬ್ರಿಟಿಷರ ವಶವಾಯಿತು. ಅದೇ ಸಮಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳೊಂದಿಗೆ ವಾಸಿಸುವ ಪ್ಯಾಲೆಸ್ಟೈನ್ ನಲ್ಲಿ ಒಂದು ಯಹೂದಿ ರಾಷ್ಟ್ರವನ್ನು ನಿರ್ಮಿಸಲು ಪಣತೊಟ್ಟ ಝಿಯೋನಿಸ್ಟ್ ರಾಷ್ಟ್ರೀಯ ಚಳುವಳಿಗೆ ಕೆಲವು ಯೂರೋಪಿಯನ್ ಯಹೂದಿಯರು ಆಕರ್ಷಿತರಾಗಿದ್ದರು. ಝಿಯೋನಿಸ್ಟರ ವಲಸೆಯು ವೇಗಗೊಂಡಾಗ ಯಹೂದಿಯರಿಗೆ ಮಾತ್ರವಿದ್ದ ನಗರಗಳು ಮತ್ತು ಸಂಸ್ಥೆಗಳು ಹುಟ್ಟಿಕೊಂಡವು. ಸ್ಥಳೀಯ ಜನರನ್ನು ಹೊರಗಿಡುವುದು ಅವರ ದೀರ್ಘಾವಧಿಯ ಉದ್ದೇಶವೆಂದು ಅರ್ಥವಾಯಿತು. ಇದನ್ನು ವಿರೋಧಿಸಿ ಪ್ರತಿಭಟಿಸಿದ ಪ್ಯಾಲೆಸ್ಟೈನ್ ಜನರನ್ನು ಬ್ರಿಟಿಷ್ ಸರ್ಕಾರ ಹತ್ತಿಕ್ಕಿತು ಹಾಗೂ ಝಿಯೋನಿಸ್ಟ್ ಪ್ರಣೀತ ದೇಶವನ್ನು ಸೃಷ್ಟಿಸಲಾಯಿತು. ಕ್ರಿ.ಶ. 1948 ರಲ್ಲೇ ಇಸ್ರೇಲ್ ಇಡೀ ಪ್ಯಾಲೆಸ್ಟೈನ್ ಜನರನ್ನು ನಿರ್ನಾಮ ಮಾಡಿ, ಉಳಿದ ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಸೈನ್ಯದ ನಿಯಂತ್ರಣದಲ್ಲಿಟ್ಟಿತು. ಝಿಯೋನಿಸಂನ ಈ ಬೆಳವಣಿಗೆಯು ಅರಬ್ ಜಗತ್ತಿನಲ್ಲಿ ಅರಬ್-ಯಹೂದಿ ಸಮುದಾಯಗಳನ್ನು ಗುರಿಯಾಗಿಸಿ ಆಕ್ರಮಣ ಮತ್ತು ದಂಗೆಗಳಿಗೆ ಕಾರಣವಾಯಿತು. ಹೆಚ್ಚಿನ ಅರಬ್ ಯಹೂದಿಗಳು ರಾಜಕೀಯ ಸಂಘವಾದ ಝಿಯೋನಿಸಂನಲ್ಲಿ ಆಸಕ್ತಿ ಹೊಂದಿದವರಾಗಿರಲಿಲ್ಲ.

ಈ ಸನ್ನಿವೇಶದಲ್ಲಿ, ಅನೇಕ ಯಹೂದಿಗಳು ಇಸ್ರೇಲ್‌ಗೆ ವಲಸೆ ಹೋದರು. ಮೊರಾಕೊ ಮತ್ತು ಯೆಮೆನ್‌ನಂತಹ ದೇಶಗಳಲ್ಲಿದ್ದ ಲಕ್ಷಾಂತರ ಯಹೂದಿಗಳು ಮುಕ್ತವಾಗಿ ತೊರೆದರು, ಆಗಾಗ್ಗೆ ಝಿಯಾನಿಸ್ಟ್ ಪ್ರಚಾರದ ಪ್ರಭಾವದ ಅಡಿಯಲ್ಲಿ ಇಸ್ರೇಲ್ ಅನ್ನು ಭರವಸೆಯ ಭೂಮಿ ಎಂದು ಚಿತ್ರಿಸಲಾಯಿತು. ಈಜಿಪ್ಟ್, ಇರಾಖ್ ಮು ರಾಷ್ಟ್ರಗಳಲ್ಲಿ ಯಹೂದಿಯರನ್ನ ಗುರಿಯಾಗಿಸಿ ಸರಕಾರ ತಂದ ನಿಯಮ ಹಾಗು ಕಿರುಕುಳವು ಸಾಮೂಹಿಕ ವಲಸೆಗೆ ಕಾರಣವಾಯಿತು.

ಇಸ್ರೇಲ್ ಮುಖ್ಯವಾಹಿನಿ ಸಂಸ್ಕೃತಿಯಿಂದ ತಮ್ಮ ಸಂಸ್ಕಾರ ಹಾಗು ಸಂಗೀತ ಹೊರಹಾಕಲ್ಪಟ್ಟಾಗ ಅರಬ್-ಯಹೂದಿ ಸಂಸ್ಕೃತಿಯನ್ನು ಜೀವಂತವಾಗಿಡಲು ಅವರು ಕಂಡುಕೊಂಡ ಕ್ಷೇತ್ರಗಳಲ್ಲಿ ಒಂದಾಗಿದೆ ಆಹಾರ ಸಂಸ್ಕೃತಿ. ಇಸ್ರೇಲ್‌ಗೆ ತಲುಪಿದ ಅವರು ಕೂಡಲೇ ಭಾರತೀಯ ಅಂಬಾವನ್ನು ಮಾರಾಟ ಮಾಡುವ ಸಣ್ಣ ಕಾರ್ಖಾನೆಗಳನ್ನು ಸ್ಥಾಪಿಸಿದರು. ಅರಬ್ ಯಹೂದಿಗಳು ಇಸ್ರೇಲ್‌ಗೆ ಅನೇಕ ಭಕ್ಷ್ಯಗಳನ್ನು ತಂದಿದ್ದಾರೆ, ಉದಾಹರಣೆಗೆ ಯೆಮೆನ್ ಸಾಸ್ ‘ಸ್ಕೋಕ್’, ಇರಾಕಿನ ‘ಖುಬ್ಬಹ್’ ಮತ್ತು ಮಗ್ರಿಬ್ ‘ಶಕ್ಷುಕಾ’.

ಪ್ಯಾಲೆಸ್ಟೈನಿಯನ್ನರು ಅಂಬಾವನ್ನು ತಿಳಿಯುವುದು ಇಸ್ರೇಲಿಗರೊಂದಿಗಿನ ವೃತ್ತಿ ಜೀವನದ ವೇಳೆಯಲ್ಲಾಗಿತ್ತು. ಕ್ರಿ.ಶ‌ 20 ನೇ ಶತಮಾನದ ಉತ್ತರಾರ್ಧದಲ್ಲಿ ಪ್ಯಾಲೆಸ್ಟೈನ್ ನ ಶವರ್ಮಾ ಅಂಗಡಿಗಳಿಗೆ ‘ಅಂಬಾ’ದ ಪ್ರಯಾಣವು ಐತಿಹಾಸಿಕ ಮತ್ತು ಕುತೂಹಲಕರವಾಗಿತ್ತು. ಇದು ಹಿಂದೂ ಮಹಾಸಾಗರದ ವ್ಯಾಪಾರ ಮತ್ತು ಬ್ರಿಟಿಷ್ ವಸಾಹತುಶಾಹಿಯೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯು ಹಳೆಯ ವ್ಯಾಪಾರ ಮಾರ್ಗಗಳು ಮುಚ್ಚಿತು. ಅಂಬಾವನ್ನು ಇರಾಕ್‌ಗೆ ಕರೆತಂದ ಬಾಗ್ದಾದಿ ಯಹೂದಿಗಳು ವಸಾಹತುಶಾಹಿ ಆಡಳಿತದ ಲಾಭವನ್ನು ಪಡೆದುಕೊಂಡರು. ಅದು ಹಳೆಯ ವ್ಯಾಪಾರ ಮಾರ್ಗಗಳನ್ನು ಮುಚ್ಚಿ ಹೊಸ ಮಾರ್ಗಗಳನ್ನು ತೆರೆಯಿತು. ಪ್ಯಾಲೆಸ್ಟೈನ್‌ನಲ್ಲಿ   ಬ್ರಿಟಿಷ್ ಆಳ್ವಿಕೆಯು ಝಿಯೋನಿಸ್ಟ್ ಆಡಳಿತಕ್ಕೆ ನಾಂದಿಯಾದರೂ, ಇರಾಕಿನ ಆಹಾರ ಸಂಸ್ಕೃತಿಯನ್ನು ಉಳಿದ  ಪ್ಯಾಲೆಸ್ಟೈನಿಯನ್ನರಿಗೆ ಪರಿಚಯಿಸಿತು. ಆಹಾರವನ್ನು ಅದರ ಐತಿಹಾಸಿಕ ಹಿನ್ನೆಲೆಯಿಂದ ಪ್ರತ್ಯೇಕಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂಬಾ ನಮಗೆ ನೆನಪಿಸುತ್ತದೆ.

ಮೂಲ: ಅಲೆಕ್ಸ್ ಶಂಸ್
ಅನುವಾದ: ಸಲೀಂ ಮುಈನಿ, ಇರುವಂಬಳ್ಳ

Leave a Reply

*