ಉರ್ದು

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟುಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿ ದಖ್ಖನಿನ ವಲಿಯು ಕೈ ತುತ್ತು ತಿನ್ನಿಸಿದಸೌದಾನ ಕವಿತೆಗಳು ಹೆಚ್ಚಿಸಿದೆ ಅಂದಮೀರ್ ನ ಮಹಿಮೆ ನಡೆಯಲು ಕಲಿತೆದಾಗ್ ನ ಅಂಗಳದಲ್ಲಿ ಅರಳಿದ…

ರಾವಿ ನದಿಯ ದಂಡೆಯಲ್ಲಿ

ಶಾಂತ ಸಂಜೆಯಲ್ಲಿ ಹರಿಯುತ್ತಿದೆಮಧುರವಾಗಿ ರಾವಿ,ನನ್ನೆದೆಯ ನೋವನ್ನು ಮಾತ್ರಕೇಳದಿರಿ ಇಲ್ಲಿ ಸುಜೂದಿನ ಮೇಲುಕೀಳುಗಳಸಂದೇಶ ದೊರೆಯುತ್ತಿದೆಯಿಲ್ಲಿಜಗವೆಲ್ಲವೂ ‘ಹರಂ’ ನಹಿತ್ತಿಲಾಗಿದೆಯಿಲ್ಲಿ! ರಾವಿಯ ಅನಂತ ಹರಿವಿನ ದಂಡೆಯಲಿನಿಂತಿಹೆನು ನಾನುಆದರೂ ತಿಳಿಯದಾಗಿಹೆಎಲ್ಲಿ ನಿಂತಿರುವೆ ನಾನು! ವೃದ್ಧಗುರು ಮಧುಬಟ್ಟಲನು ಹಿಡಿದುನಿಂತಿಹನು ನಡುಗುತಿಹ ಕೈಗಳಲ್ಲಿರಕ್ತವರ್ಣದ ಮದ್ಯ ಚೆಲ್ಲಿದೆಸಂಜೆ ಬಾನಿನ…

ಹಕ್ಕಿಯ ದೂರು

ನೆನಪಾಗುತಿವೆ ಇಂದುಕಳೆದುಹೋದ ಆ ದಿನವುಹಕ್ಕಿಗಳ ಚಿಲಿಪಿಲಿಯಲ್ಲಿವಸಂತನ ಆಗಮನವು ಅತ್ತಿತ್ತ ಹಾರಿ ನಲಿದಾಡುತಿದ್ದಬೇಕೆಂದ ಕಡೆಗೆ ಹಾರಾಡುತಿದ್ದಸಂತಸದ ಗುಡಿಯಲಿದ್ದಆ ನನ್ನ ಸ್ವಾತಂತ್ರ್ಯವೆಲ್ಲಿ ಆ ಕ್ಷಣಗಳ ನೆನಪಿನಲ್ಲಿಎದೆಯೊಡೆಯುತಿಹುದಿಲ್ಲಿಇಬ್ಬನಿಯ ಕಣ್ಣೀರಿನಲ್ಲಿನಗುತಿದ್ದ ಆ ಮೊಗ್ಗೆಗಳೆಲ್ಲಿ ಯಾವ ಸೌಂದರ್ಯದ ಖನಿಯೋಅದಾವ ಮೋಹಿನಿಯ ಇರವೋಆ ಮೈಮಾಟದಲ್ಲಿ ತುಂಬಿಮುದಗೊಳ್ಳುತಿತ್ತು ಗುಡಿಯು…

ನವ ಮಂದಿರ

ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,ತಪ್ಪು ತಿಳಿಯದಿರು ಎನ್ನಹಳತಾಗುತಿವೆ ಗರ್ಭಗುಡಿಯೊಳಿರುವಆ ಮೂರ್ತಿಗಳು ನಿನ್ನ ನಿನ್ನವರನೇ ದ್ವೇಷಿಸಲುಆ ಮೂರ್ತಿಗಳಿಂದ ನೀ ಕಲಿತಿರುವಾಗವೈರತ್ವ ದ್ವೇಷಗಳನ್ನೇ ಕಕ್ಕಲುಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು ಅಯ್ಯೋ! ಈ ಮಂದಿರ ಮಸೀದಿಗಳಿಂದಲೇನಾ ಬೇಸತ್ತು ಹೋದೆಗುರುವಿನ ಧರ್ಮವೇ ಕಳೆದುಹೋಗಿದೆನಿನ್ನ…

ಅಲಿಘರ್ ವಿದ್ಯಾಲಯದಲ್ಲಿರುವ ಸಯ್ಯದರ ಸಮಾಧಿಯ ನುಡಿಗಳು

ಓ ಇಹದ ಬದುಕಿನಲಿಸಿಲುಕಿರುವ ಮನುಷ್ಯನೇಓ ಬದುಕೆಂಬ ಪಂಜರದಲಿಬಂಧಿಯಾಗಿಹ ಆತ್ಮವೇ ಈ ತೋಟದೊಳು ನಲಿಯುತಿಹಆ ಪಾದಗಳ ಸ್ವಾತಂತ್ರ್ಯವ ನೋಡು!ಅಂದು ಕಂಗೆಟ್ಟಿದ್ದವರಸಮೃದ್ಧತೆಯನೊಮ್ಮೆ ನೋಡು! ಯಾವ ಭವಿಷ್ಯದ ಕನಸಿತ್ತೋಆ ಮಹಾ ಪರ್ವವಿದು!ಸಹನೆ ತಾಳ್ಮೆಗಳ ಹೊಲದಲ್ಲಿಬೆಳೆದಿರುವ ಫಲವಿದು! ನನ್ನ ಸಮಾಧಿಯ ಫಲಕಗಳುಮಾತನಾಡ ಬಯಸುತಿವೆ ನೋಡುಅಲ್ಲಿ…

ಸಾಕಿ

ಮತ್ತೇರಿಸಿದ ಮೇಲೆ ದೂಡಿಹಾಕುವವರೇ ಎಲ್ಲಾ,ಖುಷಿಯಿರುವುದು ಬಿದ್ದವನ ಎತ್ತಿಗಮ್ಯ ಸೇರಿಸುವುದರಲ್ಲಿ, ಸಾಕಿ! ಆ ಹಳೆಯ ಮಧುಪಾನೀಕರೆಲ್ಲರೂದೂರವಾಗುತಿಹರು,ಎಲ್ಲಿಂದಲಾದರೂ ಆ ಅಮೃತಜಲವನ್ನೊಮ್ಮೆದಯಪಾಲಿಸು ಸಾಕಿ! ವರ್ಣರಂಜಿತ ಸದ್ದುಗದ್ದಲಗಳಲ್ಲೇರಾತ್ರಿಯಿಡೀ ಕಳೆದುಹೋಯಿತು,ಅದೋ ಮುಂಜಾವು ಸಮೀಪಿಸುತ್ತಿದೆಅಲ್ಲಾಹನ ಸ್ಮರಣೆ ಮಾಡು ಸಾಕಿ!! ಉರ್ದು ಮೂಲ : ಅಲ್ಲಾಮ ಇಕ್ಬಾಲ್ಅನು: ಪುನೀತ್…

ಆ ನಾಯಕನನ್ನು ಹುಡುಕು

ನೆಲೆಯ ಆಚೆಗೊಂದು ನೆಲೆಯ ಹುಡುಕುಕಿನಾರೆ ಸಿಕ್ಕಿದೆಯಾದರೆ ಸಮುದ್ರವನ್ನು ಹುಡುಕು ಕಲ್ಲೇಟಿಗೆ ಒಡೆದುಹೋಗದ ಶೀಷೆಗಳಿಲ್ಲಕಲ್ಲೇ ಒಡೆದುಹೋಗುವಂತಹ ಶೀಷೆಯನ್ನು ಹುಡುಕು ವರುಷಗಳೇ ಉರುಳಿಹೋದವು ನಿನ್ನ ಸುಜೂದಿನಲ್ಲಿನಿನ್ನ ಬದುಕನ್ನೇ ಬದಲಿಸುವಂತಹಾ ಸುಜೂದನ್ನು ಹುಡುಕು ನಿನ್ನ ಪಥಿಕನ ಕೈಯ್ಯಲ್ಲಿ ನಿನ್ನ ಅಸ್ಮಿತೆಯೇ ಕಳೆದುಹೋಯಿತುನಿನ್ನ ಅಸ್ಮಿತೆಯ…

ಸಾವಿನೊಡನೊಂದು ಮುಖಾಮುಖಿ

ಹೊಳೆವ ಸೂರ್ಯನುಮರೆಯಾದ, ಪರದೆಯೊಳಗಿಂದಇಣುಕುತಿಹಳು ನಿಶೆಯುಭುವಿಯ ಹೆಗಲಿನ ಮೇಲೆಹರಡುತಿದೆ ಇರುಳ ಕೇಶರಾಶಿ ಅದಾವ ದುಃಖವನೆದುರಿಸಲೋಈ ಕರಿಯ ಧಿರಿಸುಸೂರ್ಯನ ಸಾವಿನ ಸೂತಕಕೆಪ್ರಕೃತಿಯ ಸಭೆಯೇ? ಮಾಯಾ ತುಟಿಗಳ ಮೇಲೊಂದುಬಾನು ಪಠಿಸುತಿದೆ ಗುಪ್ತಮಂತ್ರಎಚ್ಚೆತ್ತ ಕಂಗಳನು ಕಾಯುತಿಹನಿಶೆಯ ಜಾದೂಗಾರ ನೀರವತೆಯ ನದಿಯೊಳಗೆಮುಳುಗಿಹುದು ಭಾವ ಪ್ರವಾಹಗಳುಅದೋ ಕೇಳಿ…

ಶಬ್ – ಏ – ಮೀರಾಜ್

ಆಗಸದಲ್ಲಿ ಉದಿಸುತಿಹಸಂಜೆ ನಕ್ಷತ್ರದ ಕರೆಯಿದುಯಾವ ಮುಂಜಾವುಶರಣಾಗಿಹುದೋ ಆ ರಾತ್ರಿಯಿದು! ದೈರ್ಯವಿದ್ದವನಿಗೆ ಇಹುದಿಲ್ಲಿಸ್ವರ್ಗ ಗೇಣಿನಷ್ಟೇ ದೂರದಲ್ಲಿಕೂಗಿ ಹೇಳುತಿದೆ ಅದೋಮೀರಾಜಿನ ರಾತ್ರಿ ಮುಸಲ್ಮಾನನಲ್ಲಿ! ಮೂಲ: ಅಲ್ಲಾಮ ಇಕ್ಬಾಲ್ಅನುವಾದ: ಪುನೀತ್ ಅಪ್ಪು…

ಅಲೆ

ಈ ತಾಳ್ಮೆಗೆಟ್ಟ ಎದೆಯುಸದಾ ನನ್ನ ಪ್ರಕ್ಷುಬ್ಧಗೊಳಿಸಿದೆಬದುಕಿನ ಅಸ್ತಿತ್ವವೇಪಾದರಸದಂತೆ ವಿಚಲಿತಗೊಂಡಿದೆ! ನಾನೊಂದು ಅಲೆಯಾಗಿರುವೆಸಮುದ್ರವೇ ನನ್ನ ಗಮ್ಯವಾಗಿದೆಈ ಸುತ್ತಿ ಸುಳಿಯುವ ತರಂಗಗಳೇನನ್ನ ಬಂಧಿಸಲಾರದೆ ಹೋಗಿವೆ! ಜಲಾದ್ರಿಯಲ್ಲಿ ತರಂಗರೂಪಿಯಾಗಿನಡೆಯುತ್ತಿರುವೆ ನಾನುಧಾವಣಿಯು ಮೀನ್ಗಾರನ ಬಲೆಗೆಸಿಲುಕದಂತೆ ಸಾಗುತಿಹೆ ನಾನು! ಪೂರ್ಣ ಚಂದಿರನೆಡೆಗೆ ಉನ್ಮತ್ತೆಯಾಗಿಹಾರುತಿಹೆ ನಾನುಕೆಲವೊಮ್ಮೆ ಹುಚ್ಚೆದ್ದು…