ಭಾರತದ ಇತಿಹಾಸವನ್ನು ರೂಪಿಸಿದ ಎರಡು ಭಾಷೆಗಳು
ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ಮೂರನೇ ಪ್ರಪಂಚ, ಮಧ್ಯ ಸಾಮ್ರಾಜ್ಯ ಮುಂತಾದವುಗಳು ಸಾಂಸ್ಕೃತಿಕ ಚಹರೆ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೆಲ ಪ್ರದೇಶಗಳನ್ನು ಗುರುತಿಸಲು ಜನರೇ ಕೊಟ್ಟು…
‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ
[ತೋಪ್ಪಿಲ್ ಮುಹಮ್ಮದ್ ಮೀರಾನ್(1944–2019) ಆರು ಕಾದಂಬರಿಗಳನ್ನು ಹಲವು ಸಣ್ಣಕತೆಗಳನ್ನೂ ಬರೆದಿದ್ದಾರೆ. 1997 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ‘ಸೈವು ನರಕ್ಕಾಲಿ’ ಕೃತಿಗಾಗಿ ಪಡೆದಿದ್ದಾರೆ. ‘ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಅವಾರ್ಡ್’ ಹಾಗೂ ‘ಇಳಕ್ಕಿಯ ಚಿಂತನೈ ಅವಾರ್ಡ್’ ಸೇರಿದಂತೆ…
ಹಳದಿ ನಾಯಿ
ಭಾಗ-3 ನಾನು ಅಲ್ಲಿಂದ ಎದ್ದು, ಮುಂದೆ ಸಾಗಿದೆ. ಸಯ್ಯದ್ ರಜಿ಼ಯ ನಿವಾಸದ ಮುಖ್ಯದ್ವಾರದ ಬಳಿ ದೊಡ್ಡ ಹಳದಿ ನಾಯಿಯೊಂದು ನಿಂತಿರುವುದನ್ನು ಅಲ್ಲಿಂದ ಸಾಗುವಾಗ ಕಂಡೆ. ಈ ಹಳದಿ ನಾಯಿಯು ಶೇಖ್ ಹಮ್ಜಾನ ಭವನದ ಎದುರು ಸಹ ನಿಂತಿದ್ದು ನೋಡಿದ್ದೆ.…
ಹಳದಿ ನಾಯಿ
ಭಾಗ-2 ಆ ಹಿರಿಯರು ತಮ್ಮ ಪ್ರವಾಸದಿಂದ ಹಿಂತಿರುಗಿದಾಗ ರಸ್ತೆಯ ಪಕ್ಕದಲ್ಲಿ ದೈವಿ ಕಾಂತಿಯುಳ್ಳ ಮುಖಮುದ್ರೆಯ ವ್ಯಕ್ತಿಯೊಬ್ಬ ಚಪ್ಪಲಿ ಹೊಲಿಯುತ್ತಿದ್ದನು ಮುಂದೆ ಸಾಗಿ ನೋಡಿದರೆ, ಅಲ್ಲೊಂದು ಗೋಷ್ಠಿ ನಡೆದಿತ್ತು. ನಗರದ ವಿದ್ಯಾವಂತ ಜನರು ಅಲ್ಲಿ ಸೇರಿದ್ದರು. ಅದರಲ್ಲಿ ಒಬ್ಬ ವ್ಯಕ್ತಿಯು…
ಹಳದಿ ನಾಯಿ
ಭಾಗ-೧ ನರಿಮರಿಯಂಥ ವಸ್ತುವೊಂದು ಬಾಯಿಯಿಂದ ಹೊರಬಂದಿತು. ಅದನ್ನು ದುರುಗುಟ್ಟಿ ನೋಡಿದನು. ನಂತರ ಅವನು ಕಾಲಿಂದ ತುಳಿದನು. ಆದರೆ ತುಳಿದಷ್ಟು ಆ ನರಿಮರಿ ದೊಡ್ಡದಾಗುತ್ತ ಹೋಯಿತು.ಸೂಫಿ ಗುರುಗಳು ಈ ಕಥನವನ್ನು ನುಡಿದು ಮೌನಿಯಾದರು. ನಾನು ಪ್ರಶ್ನಿಸಿದೆ – ಶೇಖರೇ! ಈ…
ದುಃಖಿತ ಕಿತ್ತಳೆ ಹಣ್ಣುಗಳ ನಾಡು
ಕಥೆ ಜಾಫಾದಿಂದ ಅಕಾದ ಕಡೆಗೆ ಹೊರಟಾಗ ನನಗೇನೂ ಬೇಸರವಾಗಿರಲಿಲ್ಲ. ರಜಾ ದಿನಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತೇವಲ್ಲ; ಹಾಗೆಯೇ ಇದು ಕೂಡ ಎಂದು ಅನಿಸಿತ್ತು. ಆ ದಿನಗಳಲ್ಲಿ ಅಹಿತಕರ ಘಟನೆಗಳೇನೂ ಜರುಗಿರಲಿಲ್ಲ. ನಿಜ ಹೇಳಬೇಕೆಂದರೆ, ಇನ್ನು ಶಾಲೆಗೆ…
ನೈಲಾನ್ ಕೊಡೆ
ಪ್ರಿಯ ವೈಕಂ ಚಂದ್ರಶೇಖರ್ ನಾಯರ್,ತಮ್ಮ ವಾರ ಪತ್ರಿಕೆ ‘ಚಿತ್ರ ಕಾರ್ತಿಕ’ ಸೊಗಸಾಗಿದೆ. ಅದರ ಪುಟಗಳನ್ನು ಅತ್ಯುತ್ಸಾಹದಿಂದಲೇ ತಿರುವಿ ಹಾಕುತ್ತಿದ್ದೇನೆ. ನಿಧಾನಕ್ಕೆ ಜ್ಞಾನಿಯಾಗುತ್ತಿದ್ದೇನೆ. ಸಂತೋಷವಾಗುತ್ತಿದೆ.ತಮಾಷೆಯೆಂದರೆ, ಚಿತ್ರಕಾರ್ತಿಕ ಎಂಬ ಹೆಸರನ್ನು ಮೊದಲು ಕೇಳಿದಾಗ ಹಿಂದೂಗಳ ಯಾವುದೋ ಪುರಾಣಕ್ಕೆ ಸಂಬಂಧಿಸಿದ ಸಿನಿಮಾವಾಗಿರಬೇಕೆಂದು ಭಾವಿಸಿದ್ದೆ.…
ರಾವಿ ನದಿಯ ದಂಡೆಯಲ್ಲಿ
ಶಾಂತ ಸಂಜೆಯಲ್ಲಿ ಹರಿಯುತ್ತಿದೆಮಧುರವಾಗಿ ರಾವಿ,ನನ್ನೆದೆಯ ನೋವನ್ನು ಮಾತ್ರಕೇಳದಿರಿ ಇಲ್ಲಿ ಸುಜೂದಿನ ಮೇಲುಕೀಳುಗಳಸಂದೇಶ ದೊರೆಯುತ್ತಿದೆಯಿಲ್ಲಿಜಗವೆಲ್ಲವೂ ‘ಹರಂ’ ನಹಿತ್ತಿಲಾಗಿದೆಯಿಲ್ಲಿ! ರಾವಿಯ ಅನಂತ ಹರಿವಿನ ದಂಡೆಯಲಿನಿಂತಿಹೆನು ನಾನುಆದರೂ ತಿಳಿಯದಾಗಿಹೆಎಲ್ಲಿ ನಿಂತಿರುವೆ ನಾನು! ವೃದ್ಧಗುರು ಮಧುಬಟ್ಟಲನು ಹಿಡಿದುನಿಂತಿಹನು ನಡುಗುತಿಹ ಕೈಗಳಲ್ಲಿರಕ್ತವರ್ಣದ ಮದ್ಯ ಚೆಲ್ಲಿದೆಸಂಜೆ ಬಾನಿನ…
ಹಕ್ಕಿಯ ದೂರು
ನೆನಪಾಗುತಿವೆ ಇಂದುಕಳೆದುಹೋದ ಆ ದಿನವುಹಕ್ಕಿಗಳ ಚಿಲಿಪಿಲಿಯಲ್ಲಿವಸಂತನ ಆಗಮನವು ಅತ್ತಿತ್ತ ಹಾರಿ ನಲಿದಾಡುತಿದ್ದಬೇಕೆಂದ ಕಡೆಗೆ ಹಾರಾಡುತಿದ್ದಸಂತಸದ ಗುಡಿಯಲಿದ್ದಆ ನನ್ನ ಸ್ವಾತಂತ್ರ್ಯವೆಲ್ಲಿ ಆ ಕ್ಷಣಗಳ ನೆನಪಿನಲ್ಲಿಎದೆಯೊಡೆಯುತಿಹುದಿಲ್ಲಿಇಬ್ಬನಿಯ ಕಣ್ಣೀರಿನಲ್ಲಿನಗುತಿದ್ದ ಆ ಮೊಗ್ಗೆಗಳೆಲ್ಲಿ ಯಾವ ಸೌಂದರ್ಯದ ಖನಿಯೋಅದಾವ ಮೋಹಿನಿಯ ಇರವೋಆ ಮೈಮಾಟದಲ್ಲಿ ತುಂಬಿಮುದಗೊಳ್ಳುತಿತ್ತು ಗುಡಿಯು…
ನವ ಮಂದಿರ
ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,ತಪ್ಪು ತಿಳಿಯದಿರು ಎನ್ನಹಳತಾಗುತಿವೆ ಗರ್ಭಗುಡಿಯೊಳಿರುವಆ ಮೂರ್ತಿಗಳು ನಿನ್ನ ನಿನ್ನವರನೇ ದ್ವೇಷಿಸಲುಆ ಮೂರ್ತಿಗಳಿಂದ ನೀ ಕಲಿತಿರುವಾಗವೈರತ್ವ ದ್ವೇಷಗಳನ್ನೇ ಕಕ್ಕಲುಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು ಅಯ್ಯೋ! ಈ ಮಂದಿರ ಮಸೀದಿಗಳಿಂದಲೇನಾ ಬೇಸತ್ತು ಹೋದೆಗುರುವಿನ ಧರ್ಮವೇ ಕಳೆದುಹೋಗಿದೆನಿನ್ನ…