ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆಬರಿದಾಗಿದೆ ಬದುಕುವಾಸೆಯಿಲ್ಲಿ,ಮುಳುಗಿಸಿಬಿಡು ಓ ಗಂಗಾ ನದಿಯೆಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ! ರಣರಂಗವಾಗಿಹುದುಜನ್ಮ ಭೂಮಿಯಿಲ್ಲಿಅದೆಂತಹಾ ಬಾಂಧವ್ಯ!ವಿರಹ ಬಂದು ಕುಳಿತಿಹುದುಪ್ರೇಮದಂಗಳದಲ್ಲಿ! ಪ್ರೀತಿಯೇ ಸಿಡಿದೆದ್ದಿಹುದುದ್ವೇಷಕ್ಕೆ ಎದುರಾಗಿಒಂದೇ ಹೊಲದೊಳಗೆಫಸಲುಗಳು ಕಾದಾಡುತಿಹವು ಸ್ನೇಹ ತಂಗಾಳಿ ಬೀಸಲಿಲ್ಲವೆಂದೂಆ ಹೂದೋಟದಲ್ಲಿಮೈನಾ ಹಕ್ಕಿಯ ಹಾಡೂಕೇಳಿ ಬರುವುದೆಂತು ಈ…

ಮುಸಾಫಿರ್

ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ ಹಾಗಾಗಿ, ಯಾತ್ರೆ ಹೊರಡುತೊರೆದು ನಿನ್ನ ವಿರಾಮದ ಮನೆಯಸಿಕ್ಕೇ ಸಿಗುತ್ತದೆನೀನು ತೊರೆದುದುದರ ಬದಲಿ ನಿವಾಸ ಮತ್ತು ಸೆಣಸಾಡುದಿಕ್ಕಾಪಾಲಾದ ಯಾತ್ರೆಯುದ್ದಕ್ಕೂಬದುಕಿನ ಮಾಧುರ್ಯವಿರುವುದೇಕಷ್ಟ ಕೋಟಲೆಗಳಲ್ಲಿಮತ್ತದರೆದುರು ಸೆಣಸುವುದರಲ್ಲಿ ನಾನು ಕಂಡಿದ್ದೇನೆ,ನಿಂತ ನೀರು…

ಸ್ಪೈನ್ – ಅಂದ್ಯುಲೂಸಿಯಾ

ಉರ್ದು ಕವಿ ಅಲ್ಲಾಮ ಇಕ್ಬಾಲರು 1933 ರಲ್ಲಿ ಸ್ಪೇನಿಗೆ ಬೇಟಿ ನೀಡಿದ್ದರು. ಆ ಸಮಯದಲ್ಲಿ ಬರೆದಿರುವ ಎರಡು ಕವಿತೆಗಳಲ್ಲಿ ಮಸ್ಜಿದೇ ಕುರ್ತುಬಾ ಮತ್ತು ಹಿಸ್ಪಾನಿಯಾ ಪ್ರಸಿದ್ಧ ಕವಿತೆಗಳಾಗಿವೆ. ಇಲ್ಲಿ ಪ್ರಕಟಿಸಲಾದ ಕನ್ನಡ ಭಾವಾನುವಾದವು ಇಕ್ಬಾಲರು ಸ್ಪೈನ್ ದೇಶದಿಂದ ವಾಪಾಸಾಗುವ…

ಈದ್ಗಾಹ್

ರಮ್ಜಾನ್ ತಿಂಗಳ ಭರ್ತಿ ಮೂವತ್ತು ದಿನಗಳ ನಂತರ ಈದ್ ಬಂದಿತ್ತು. ಈದ್ ನ ಮುಂಜಾನೆ ಅದೆಷ್ಟು ಶುಭ್ರ ಮತ್ತು ಸುಂದರವಾಗಿತ್ತು! ಮರಗಳೆಲ್ಲಾ ಹಚ್ಚ ಹಸಿರು, ಹೊಲಗದ್ದೆಗಳಿಗೂ ಹಬ್ಬದ ಕಳೆ, ಆಕಾಶಕ್ಕೂ ಗುಲಾಬಿ ಸೊಬಗು ಬಂದಿತ್ತು. ಓಹ್ ಸೂರ್ಯನನ್ನು ನೋಡಿ!…

ಬಾಜಿ:ಆಂಟನ್ ಚೆಕೋವ್

ಅದು ಶರತ್ಕಾಲದ ಒಂದು ಕಗ್ಗತ್ತಲ ರಾತ್ರಿ. ಆ ಬಡ್ಡಿ ವ್ಯಾಪಾರಿ ಮುದುಕ ತನ್ನ ಓದಿನ ಕೊಠಡಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದಿಟ್ಟಿ ಹಾಯಿಸುತ್ತಾ ಹದಿನೈದು ವರ್ಷಗಳ ಹಿಂದೆ ಇದೇ ಶರತ್ಕಾಲದಲ್ಲಿ ತಾನು ನೀಡಿದ್ದ ಔತಣ ಕೂಟವನ್ನು ನೆನಪಿಸಿಕೊಳ್ಳುತ್ತಿದ್ದ.…

ಪರ್ಷಿಯನ್ ಕಾವ್ಯ ಸಾಹಿತ್ಯ

ವಿಶ್ವ ಸಂಸ್ಕೃತಿಗೆ ಪರ್ಷಿಯನ್ ಭಾಷೆಯು ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆಧುನಿಕ ಇರಾನಿನ ಬೆಳವಣಿಗೆಯ ಹಿಂದೆ ಪರ್ಷಿಯನ್ ಭಾಷೆಯ ಪಾತ್ರ ಹಿರಿದು. ಪರ್ಷಿಯನ್ ಮಹಾ ಕವಿಗಳಿಂದ ಪ್ರಭಾವಿತರಾಗದ ಸಾಹಿತಿಗಳು ಬಹಳ ಕಡಿಮೆ. ಪೂರ್ವದ ಹಾಗೂ ಪಶ್ಚಿಮದ ಅನೇಕ ವಿದ್ವಾಂಸರು ಈ…