‘ಅರಬ್ಬಿ ಕಡಲಿನ ರಾಜಕುಮಾರಿʼ ಕೊಚ್ಚಿಯ ಸೂಫಿ ಜಾಡು

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. ‘ಅರಬ್ಬಿ ಕಡಲಿನ ರಾಜಕುಮಾರಿ’ ಎಂದೇ ಪ್ರಸಿದ್ಧಗೊಂಡಿರುವ ಕೊಚ್ಚಿ ಕೇರಳದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಆದರೆ, ಕೊಚ್ಚಿಯ ಮೇಲಿನ ಇಸ್ಲಾಮಿಕ್‌…

ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ ಅದನ್ನು ಕಲಿಯಲು ಯಾರನ್ನಾದರೂ ಅನುಗಮಿಸುವುದು…

ಅಲ್- ಫಿಜಿರೀ : ಪರ್ಶಿಯನ್ ಕೊಲ್ಲಿಯ ಸಮುದ್ರ ಸಂಗೀತ

1930ನೇ ದಶಕದ ವಿಶಾಲವಾದ ತೈಲ ನಿಕ್ಷೇಪಗಳ ಆವಿಷ್ಕಾರಕ್ಕಿಂತಲೂ ಪೂರ್ವ ಕಾಲದಲ್ಲಿ ಪರ್ಶಿಯನ್ ಕೊಲ್ಲಿಯಲ್ಲಿನ ಜನಜೀವನ ವಿಧಾನ ಇಂದಿನ ಸ್ಥಿತಿಗತಿಗಳಿಗಿಂತ ಬಹಳ ಭಿನ್ನಾವಸ್ಥೆಯಲ್ಲಿತ್ತು. ಆಧುನಿಕ ಬಹ್ರೇನ್, ಕತಾರ್, ಕುವೈತ್ ಮತ್ತು ಸಮೀಪ ಪ್ರದೇಶದಲ್ಲಿನ ಪುರುಷರು ಆ ಕಾಲದಲ್ಲಿ ಹೆಚ್ಚಾಗಿ ಮೀನುಗಾರಿಕೆ,…

ವಿಶ್ವ ಸಂಚಾರಿ ಕಬಾಬಿನ ಕಥೆ

ಬಹುಶಃ ನಿಮಗೆ ‘ಶೀಶ್ ಕಬಾಬ್’ ಅಂದರೆ ಏನೆಂದು ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಅದರ ಅರ್ಥವೇನೆಂದು ಗೊತ್ತಿರುವ ಸಂಭಾವ್ಯ ಕಡಿಮೆ. ತುರ್ಕಿ ಭಾಷೆಯಲ್ಲಿ ‘ಸೀಸ್’ ಅಂದರೆ ಖಡ್ಗ ಎಂದೂ, ಕಬಾಬ್ ಅಂದರೆ ಮಾಂಸ (ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆಡಿನ…

ಇಸ್ಲಾಮಿಕ್ ನಾಗರಿಕತೆ ಮತ್ತು ಕ್ಯಾಲಿಗ್ರಾಫಿ; ಒಂದು ಇಣುಕು ನೋಟ

ಕ್ಯಾಲಿಗ್ರಾಫಿಯನ್ನು ಕಲಾ ಪ್ರಕಾರವಾಗಿ ಅಭಿವೃದ್ಧಿಪಡಿಸುವುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿರದೆ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿಕೊಂಡಿದೆ. ಚೈನೀಸ್, ಜಪಾನೀಸ್ ಕ್ಯಾಲಿಗ್ರಾಫಿ ಹಾಗೂ ವಾಯುವ್ಯ ಯುರೋಪಿನ ಕೆಲ್ಸ್‌ ಪುಸ್ತಕಗಳನ್ನು ಒಳಗೊಂಡಿರುವ ಬೈಬಲ್ ಕೂಡ ಕ್ಯಾಲಿಗ್ರಾಫಿ ಶೈಲಿಯಲ್ಲಿ ವಿರಚಿತವಾಗಿದೆ. ಆದಾಗ್ಯೂ,…

ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು-2

ಭಾಗ – 2 ಸ್ನೇಹ, ಸೌಂದರ್ಯ, ಮತ್ತು ಇಸ್ಲಾಮಿಕ್‌ ಕಲೆ ಖುರ್‌ ಆನಿನಲ್ಲಿ, ಒಟ್ಟಾರೆ ಇಸ್ಲಾಮಿಕ್‌ ಪರಂಪರೆಯಲ್ಲಿ ಮತ್ತು ನಮ್ಮ ನಿತ್ಯ ಬದುಕಿನಲ್ಲಿ ಕೂಡ ಸೌಂದರ್ಯ ಮತ್ತು ಸ್ನೇಹ ಪರಸ್ಪರ ತಳುಕು ಹಾಕಿಕೊಂಡಿರುವಂತದ್ದು. “ದೇವರು ಸೌಂದರ್ಯಪೂರ್ಣನು ಹಾಗೂ ಸೌಂದರ್ಯವನ್ನು…

ಪ್ರಣಯ ನಿರೂಪಣೆಯ ಪೌರಸ್ತ ಮತ್ತು ಪಾಶ್ಚಾತ್ಯ ಮಾದರಿಗಳು

ನಮ್ಮ ಸಾಮಾಜಿಕ ಸಂಬಂಧಗಳು ಮತ್ತು ಅವುಗಳನ್ನು ವ್ಯಾಖ್ಯಾನಿಸುವ ದೃಷ್ಟಿಕೋನವು ಆಧುನೀಕರಣ ಮತ್ತು ಡಿಜಿಟಲೀಕರಣಗಳಿಂದಾಗಿ ಬಹಳ ಬದಲಾವಣೆಗಳೇ ಆಗಿವೆ. ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಮೇಲೂ ಪರಿಣಾಮ ಬೀರಿದೆ. ಅಂತಹ ಭಾವನೆಗಳನ್ನು ನಿಯಂತ್ರಿಸುವುದೇ ಪ್ರೀತಿ. ಆದಾಗ್ಯೂ, ಆಯಾ ಕಾಲದ ನಂಬಿಕೆಗಳು…

ಜನಪ್ರಿಯತೆಯ ತೆವಲು : ಹೊಸತಲೆಮಾರಿಗೆ ಅಂಟಿಕೊಂಡ ಸೋಂಕು

ನಾವು ಈ ಸಾಲಿನ ಪವಿತ್ರ ರಂಝಾನ್ ತಿಂಗಳಿನಲ್ಲಿದ್ದೇವೆ. ಈ ರಂಝಾನ್ ನಮಗೆ ಆತ್ಮ ನಿಯಂತ್ರಣ ಹಾಗೂ ಕ್ಷಮೆಯ ಕುರಿತಾಗಿ ಹಲವು ರೀತಿಯಲ್ಲಿ ಬೋಧಿಸುತ್ತಿದೆ. ಹೀಗಾಗಿ ರಂಝಾನ್ ಎಂಬುವುದು ಕೇವಲ ಆಹಾರವನ್ನು ಬಿಟ್ಟು ಕೂರುವುದು ಮಾತ್ರವಲ್ಲದೆ ಒಂದು ರೀತಿಯ ಆತ್ಮಾವಲೋಕನ…

ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನದ ಆನುಭಾವಿಕ ಒಳನೋಟಗಳು

ಹಸಿರು ಬಣ್ಣ ಇಸ್ಲಾಮಿನೊಂದಿಗೆ ತಳುಕುಹಾಕಿಕೊಂಡದ್ದು ಒಂದು ಕಾಕತಾಳೀಯ ವಿದ್ಯಮಾನವೇನಲ್ಲ.ಪವಿತ್ರ ಖುರ್ಆನಿನಲ್ಲಿ ಸ್ವರ್ಗೀಯ ಉದ್ಯಾನಗಳನ್ನು ಪರಿಚಯಿಸುವಾಗ ಹಸಿರು ಬಣ್ಣವು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಹಸಿರೆನ್ನುವುದು ಸಸ್ಯ ವರ್ಗಗಳ ಸಾಮಾನ್ಯ ವರ್ಣವೆಂಬುವುದಕ್ಕಿಂತ ಮಿಗಿಲಾಗಿ ಅದು ಬೆಳವಣಿಗೆ, ಭರವಸೆ, ಫಲವತ್ತತೆ ಎಂಬಿತ್ಯಾದಿಗಳನ್ನು ಸೂಚಿಸುತ್ತದೆ.ಉಳಿದ ಯಾವ…

ಬ್ಯಾರಿಗಳ ಬದುಕಿನ ಜಾಡು ಹಿಡಿದು

ಸಹಸ್ರಾರು ವರುಷಗಳ ಇತಿಹಾಸವನ್ನೂ ಪರಂಪರೆಯನ್ನೂ ಹೊಂದಿರುವ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರ ಚರಿತ್ರೆಯನ್ನು ಹುಡುಕಿಕೊಂಡು ಮಂಗಳೂರಿಗೆ ತಲುಪಿದ್ದೆ. ಮುಂಜಾನೆ ರೈಲಿನಿಂದಿಳಿದು ಪೈಗಂಬರರ ಕಾಲದಷ್ಟು ಪ್ರಾಚೀನತೆಯುಳ್ಳ ಬಂದರಿನ ಝೀನತ್ ಬಕ್ಷ್ ಮಸೀದಿ ಹುಡುಕುತ್ತಾ ನಡೆದೆ. ಬೆಳಗಾಗುವ ಮುನ್ನವೇ ವ್ಯಾಪಾರಿಗಳಿಂದಲೂ ಸರಕು…