ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ!

ನಕ್ಷತ್ರಗಳಾಚೆಯೂ ಜಗವಿಹುದುಪ್ರೀತಿಗಿನ್ನೂ ಪರೀಕ್ಷೆಗಳು ಹಲವಿಹುದು ಈ ಲೋಕದಲ್ಲಿ ಪ್ರೀತಿಸುವ ಜೀವಿಗಳಿಗೆ ಬರವಿಲ್ಲನೂರಾರು ಕಾರವಾನಗಳು ಇನ್ನೂ ಹಲವಿಹುದು ಇಲ್ಲಿಯ ಸುಗಂಧ – ಕಾಮನೆಗಳಲ್ಲಿ ಕಳೆದುಹೋಗದಿರುಹೂದೋಟಗಳು – ಗೂಡುಗಳು ಇನ್ನೂ ಹಲವಿಹುದು ಒಂದು ನೆಲೆ ಕಳೆದುಕೊಂಡೆಯೆಂದು ಇಲ್ಲಿ ಅಳುವಿಯೇಕೆಅತ್ತು ಗೋಗರೆಯಲು ಜಾಗವಿನ್ನೂ…

ಪ್ರಜಾಸತ್ತೇ..

ಬಿಸಿಲ ಬೇಗೆಗೆ ನಲುಗಿಸೋತ ಹಗರೆಯ ಮಗುನೆಲಕ್ಕೊದ್ದಾಗಮರಳುಗಾಡಿನಲ್ಲಿಉಕ್ಕಿದ ಸಿಹಿನೀರ ಬುಗ್ಗೆಚಿನ್ನದ ಹೆದ್ದಾರಿಗಳಲ್ಲಿಉಕ್ಕುವುದಿಲ್ಲ ಜೀತದಾಳುಗಳೊಡನೆಮೋಸೆಸನುಬಂಧ ವಿಮುಕ್ತಿಯತ್ತ ನಡೆದಾಗಸಾಗರವೇ ಬಿರಿದು ದಾರಿ ತೋರಿದ ಗಳಿಗೆಇನ್ನೊಮ್ಮೆ ಬರುವುದಿಲ್ಲ ವಿಶ್ವಾಸಿಗರೇ ಕೇಳಿ‘ಸಿರಿವಂತನಿಗೆ ಸ್ವರ್ಗದ ದಾರಿಒಂಟೆಯನ್ನು ಸೂಜಿಯ ಕಣ್ಣೊಳಗೆತುರುಕಿದಷ್ಟೇ ಸುಲಭ’ಆದರೂ ಬಡವರ ಕಡೆಗೆರೈಲುಗಳು ಧಾವಿಸುವುದಿಲ್ಲವಂದೇ ಭಾರತ –…

ಜಾವೆದ್ ನಾಮಾ

ನಿನ್ನ ಹೃದಯದೊಳಗೊಂದುಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆಆ ಹೂವುಗಳ ಮೌನಗಳಿಗೆ ಮಾತಾಗುಪ್ರೀತಿಯ ಒಂದಿಷ್ಟು ಪದಗಳಾಗು ಈ ಪ್ರೀತಿಯೆಂಬ ಜಗದಲ್ಲಿಪುಟ್ಟ ತಾವು ಹುಡುಕುಈ ನವ್ಯ ಯುಗದಲ್ಲಿರಮ್ಯ ಹಗಲಿರುಳ ಹುಡುಕು ಪಶ್ಚಿಮದ ಕಲೆಗಾರರಮನೆಯ ಪರಿಚಾರಕನಾಗಬೇಡಭಾರತದ ನೆಲದಲ್ಲಿಮಧುಶಾಲೆಯ ಸುಧೆಯ ಹರಿಸು ಸಾಹಿತ್ಯವೃಕ್ಷದ ರೆಂಬೆಕೊಂಬೆಯಾಗಿರುವೆಕವಿತಾಸಾರ ಹರಿಯುತಿದೆ ನಿನ್ನ…

ತಸ್ಬೀಹ್ ಮಾಲೆ: ಮನಃಶಾಸ್ತ್ರ ಮತ್ತು ಸೌಂದರ್ಯ ಶಾಸ್ತ್ರ

ನೀವು ತುರ್ಕಿ ರಾಷ್ಟ್ರಕ್ಕೆ ಭೇಟಿ ನೀಡಿದರೆ, ಅಲ್ಲಿನ ಜನರ ಕೈಯಲ್ಲಿ ಮಣಿಗಳಿಂದ ಪೋಣಿಸಿದ ದಾರವನ್ನು ಕಾಣಲು ಸಾಧ್ಯ. ಅವು ವಿಭಿನ್ನ ಆಕಾರ ಮತ್ತು ಬಣ್ಣಗಳಿಂದ ಕಂಗೊಳಿಸುತ್ತಿರುತ್ತವೆ. ಕೆಲವೊಂದು ವಿನ್ಯಾಸದಲ್ಲಿ ಸರಳ ಮತ್ತು ವಿಭಿನ್ನವಾಗಿದ್ದರೆ, ಇನ್ನು ಕೆಲವು ಅದ್ದೂರಿ ಮತ್ತು…

ರೂಮಿ, ಧರ್ಮ ಮತ್ತು ಪಾಶ್ಚಾತ್ಯ ಅನುವಾದಕರು

ಕೆಲವು ವರ್ಷಗಳ ಹಿಂದೆ; ನಟಿ ಗ್ಲೇನತ್ ಪಾಲ್ಟ್ರೋ ಗೆ ವಿಚ್ಛೇದನ ನೀಡಿದ ಬಳಿಕ ಕೋಲ್ಡ್ ಪ್ಲೇ ಗಾಯಕ ಕ್ರಿಸ್ ಮಾರ್ಟಿನ್ ಖಿನ್ನತೆಗೆ ಒಳಗಾಗಿದ್ದರು. ಕ್ರಿಸ್ ಮಾರ್ಟಿನ್ ಗೆ ಒಬ್ಬ ಗೆಳೆಯನಿದ್ದ. ಆತ ಮಾರ್ಟಿನ್ ನನ್ನು ಖಿನ್ನತೆಯಿಂದ ಹೊರತರಲು ಒಂದು…

ಮಾಪ್ಪಿಳ ಸಾಹಿತ್ಯದ ಮಹತ್ವ, ಇತಿಹಾಸ ಹಾಗೂ ವರ್ತಮಾನದ ಸವಾಲುಗಳು

ಹಳೆಯ ಮಲಬಾರ್ ನ ಭಾಗವಾಗಿದ್ದ ಮಂಗಳೂರು, ಉಡುಪಿ, ಕೊಡಗು ಮತ್ತು ಆಸುಪಾಸಿನಲ್ಲಿ ಹಾಸುಹೊಕ್ಕಾಗಿರುವ ಮಾಪ್ಪಿಳ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನವಿದು. ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಮಾಲೆ, ಮೌಲಿದ್, ಬ್ಯಾರಿ ಜನಪದ ಹಾಡುಗಳು, ಜನಪದ ಸಂಸ್ಕೃತಿಗಳ ಮೂಲಬೇರು ಕೇರಳದ…

ಝಹರಾ, ಬೆಳಗಿನ ತಾರೆ(ವೀನಸ್ -ಶುಕ್ರ)

ಈ ಸೂರ್ಯ ಚಂದ್ರರ ಒಡನಾಟದಸುಖವನ್ನು ಬಿಟ್ಟು ಬಿಡಲೇಬೆಳಗಿನ ಸಂದೇಶವ ಸಾರುವಈ ಸೇವೆಯನು ತ್ಯಜಿಸಿ ಬಿಡಲೇ ಈ ನಕ್ಷತ್ರಗಳ ಲೋಕದಲ್ಲಿಬದುಕುವುದು ನನಗೆ ಹೇಳಿದ್ದಲ್ಲಈ ಶಿರವನೇರುವುದಕ್ಕಿಂತಭುವಿಯ ಪಾದಕ್ಕಿಳಿಯುವುದೆ ಒಳಿತು ಈ ಆಗಸವಿದೇನು? ಯಾರೊಬ್ಬರೂಬದುಕಲಾರದ ನಾಡುಮುಂಜಾವಿನ ಬಿಳಿ ಬೆಳಕಿನಾ ದಾವಣಿಯೇಶವ ವಸ್ತ್ರವಾಗುತಿದೆಯೆನಗೆ !…

ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆಬರಿದಾಗಿದೆ ಬದುಕುವಾಸೆಯಿಲ್ಲಿ,ಮುಳುಗಿಸಿಬಿಡು ಓ ಗಂಗಾ ನದಿಯೆಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ! ರಣರಂಗವಾಗಿಹುದುಜನ್ಮ ಭೂಮಿಯಿಲ್ಲಿಅದೆಂತಹಾ ಬಾಂಧವ್ಯ!ವಿರಹ ಬಂದು ಕುಳಿತಿಹುದುಪ್ರೇಮದಂಗಳದಲ್ಲಿ! ಪ್ರೀತಿಯೇ ಸಿಡಿದೆದ್ದಿಹುದುದ್ವೇಷಕ್ಕೆ ಎದುರಾಗಿಒಂದೇ ಹೊಲದೊಳಗೆಫಸಲುಗಳು ಕಾದಾಡುತಿಹವು ಸ್ನೇಹ ತಂಗಾಳಿ ಬೀಸಲಿಲ್ಲವೆಂದೂಆ ಹೂದೋಟದಲ್ಲಿಮೈನಾ ಹಕ್ಕಿಯ ಹಾಡೂಕೇಳಿ ಬರುವುದೆಂತು ಈ…

ಎಕ್ಸಿಟ್ ವೆಸ್ಟ್: ಕೊನೆಯಿಲ್ಲದ ಸ್ವರ್ಗ ರಾಜ್ಯಗಳು

ನಿರಾಶ್ರಿತರ ಹಾಗೂ ಪೌರತ್ವ ಕಾಯ್ದೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ನಿರಾಶ್ರಿತರ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವ ರಿಯಲಿಸಂ ಮತ್ತು ಮ್ಯಾಜಿಕಲ್ ರಿಯಲಿಸಂನ ಸಮ್ಮಿಶ್ರಣದಿಂದ ಒಂದುಗೂಡಿರುವ ಮೊಹ್ಸಿನ್ ಹಾಮಿದ್ ರವರ ಕಾದಂಬರಿ “ಎಕ್ಸಿಟ್ ವೆಸ್ಟ್” ಪ್ರಸ್ತುತವೆನಿಸುತ್ತದೆ. ಸಮಕಾಲೀನ ರಾಜಕೀಯ…

ಮುಸಾಫಿರ್

ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ ಹಾಗಾಗಿ, ಯಾತ್ರೆ ಹೊರಡುತೊರೆದು ನಿನ್ನ ವಿರಾಮದ ಮನೆಯಸಿಕ್ಕೇ ಸಿಗುತ್ತದೆನೀನು ತೊರೆದುದುದರ ಬದಲಿ ನಿವಾಸ ಮತ್ತು ಸೆಣಸಾಡುದಿಕ್ಕಾಪಾಲಾದ ಯಾತ್ರೆಯುದ್ದಕ್ಕೂಬದುಕಿನ ಮಾಧುರ್ಯವಿರುವುದೇಕಷ್ಟ ಕೋಟಲೆಗಳಲ್ಲಿಮತ್ತದರೆದುರು ಸೆಣಸುವುದರಲ್ಲಿ ನಾನು ಕಂಡಿದ್ದೇನೆ,ನಿಂತ ನೀರು…