ಎಲ್ಲಿರುವೆ ನೀ?

ಎಲ್ಲಿರುವೆ ನೀ?

ಇಲ್ಲೇ ಇರುವೆ ನಾ!
ಅವಶೇಷಗಳಡಿಯಲ್ಲಿ,
ನಿನಗಾಗಿ ಕೊನೆಯ ಕವಿತೆಯ ಬರೆಯುತ್ತಾ!

​ಇಲ್ಲೇ ಇರುವೆ ನಾ!
ಕಳೆದುಹೋದ ಮುಖವೊಂದು
ಬಿಳಿ ಮರೆವಿನ ಧೂಳಿನಲ್ಲಿ
ಮತ್ತೆ ಕಣ್ಮರೆಯಾಗುತ್ತಾ

ಇಲ್ಲೇ ಇರುವೆ ನಾ!
ನಿನಗೂ ಅವರಿಗೂ
ನನ್ನ ಕೊನೆಯ ಪ್ರಶ್ನೆಯನ್ನು ಕೇಳುತ್ತಾ

ಈ ಪುಟ್ಟ ದೇಹ ನಿನಗೇನು ಮಾಡಿತ್ತು?

ನನ್ನ ಸಾವಿನ ಮೇಲೆಯೇ ನೀನು ಮತ್ತೊಮ್ಮೆ ತುಳಿದು ಸಾಗುವಷ್ಟು!

ಆಂಗ್ಲ‌ ಮೂಲ: ಮುಹಮ್ಮದ್ ಮೂಸ
ಅನುವಾದ: ಮುಹಮ್ಮದ್ ಝೈನುದ್ದೀನ್


ಮುಹಮ್ಮದ್ ಮೂಸಾ

Leave a Reply

*