ಏಳು ಶತಮಾನಗಳ ನಂತರವೂ ರೂಮಿಯನ್ನು ಓದಲಾಗುತ್ತಿದೆ. ಅಷ್ಟೇ ಸಮಾನವಾಗಿ ತಪ್ಪಾಗಿ ಓದುವಿಕೆಗೆಗೂ ಒಳಗಾಗುತ್ತಿದೆ. ಪೂರ್ವದಲ್ಲಿರುವ ರೂಮಿಯಲ್ಲ ಪಶ್ಚಿಮದಲ್ಲಿಲ್ಲಿರುವುದು. ಮಸ್ನವಿಯ ಕಥೆಯೂ ಅದೇ.
ಪೂರ್ವದ ರೂಮಿ
ರೂಮಿ ಹದಿಮೂರನೇ ಶತಮಾನದ ಆರಂಭದಲ್ಲಿ ಬಲ್ಖಿಲಾನ್ ನಲ್ಲಿ (ಈಗಿನ ಅಫ್ಘಾನಿಸ್ತಾನ) ಜನಿಸಿದರು. ಮಧ್ಯ ಏಷ್ಯಾದಲ್ಲಿ ಹುಟ್ಟಿದರು ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.
ಪೂರ್ವ ಜಗತ್ತಿನಲ್ಲಿ ರೂಮಿಯ ಹೆಸರಿನ ಮುಂದೆ ಹೆಚ್ಚಾಗಿ ಮೆವ್ಲಾನಾ / ಮೌಲಾನಾ (ನಮ್ಮ ಗುರು) ಎಂದು ಸೇರಿಸಲಾಗುತ್ತದೆ. ಇಸ್ಲಾಮಿಕ್ ವಿದ್ವಾಂಸ ಮತ್ತು ಸೂಫಿ ಗುರುವಾಗಿ ಅವರು ಎಷ್ಟು ಗೌರವಿಸಲ್ಪಟ್ಟಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಮೆವ್ಲಾನಾ / ಮೌಲಾನಾ ಇಲ್ಲದೆ ಅವರ ಹೆಸರನ್ನು ಉಲ್ಲೇಖಿಸುವುದು ತಪ್ಪು ಮತ್ತು ಅಗೌರವ ಎಂದು ಪರಿಗಣಿಸಲಾಗಿದೆ.
ಕುವೈಟ್ನಲ್ಲಿರುವ ಪರ್ಷಿಯನ್ ವಿದ್ವಾಂಸರಾದ ಮುಹಮ್ಮದ್ ಅಲಿ ಮೊಜರಾದಿ ಅವರು ರೂಮಿಯ ಬಗ್ಗೆ ಈ ರೀತಿ ಹೇಳುತ್ತಾರೆ: “ಸಂಸ್ಕಾರದಲ್ಲಿ ತುಂಬಿನಿಂತ ಯಾವುದೇ ಐತಿಹಾಸಿಕ ಪುರುಷನಂತೆ, ರೂಮಿಯು ತನ್ನದೇ ಆದ ಜೀವನವನ್ನು ಸ್ವೀಕರಿಸಿದನು.” ರೂಮಿ ಸೇರಿದಂತೆ ಐತಿಹಾಸಿಕ ಗ್ರಂಥಗಳೊಂದಿಗೆ ತೊಡಗಿಸಿಕೊಂಡಾಗ ಓದುಗರು ರೂಮಿಯ ಬಗ್ಗೆ ತಮ್ಮದೇ ಆದ ತಿಳುವಳಿಕೆ ಮತ್ತು ಪಕ್ಷಪಾತವನ್ನು ವ್ಯಕ್ತಪಡಿಸುತ್ತಾರೆ ಎಂದು ಮೊಜ್ರಾದಿ ಗಮನಿಸುತ್ತಾರೆ.
ದೈವಾನ್ವೇಷಣೆಯ ತೀವ್ರ ಅಭಿಲಾಷೆಯಿಂದ ನಡೆದ ರೂಮಿ 50,000 ಸಾಲುಗಳಿರುವ ಮಸ್ನವಿಯನ್ನು ಬರೆದರು. ಇದು ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾಯಿತು. ಫೀಹಿ ಮಾ ಫೀಹಿ, ಗುರುವಿನ ಗೌರವಾರ್ಥವಾಗಿ ಬರೆದ ಕವನಗಳ ಸಂಗ್ರಹ ದಿವಾನ್- ಏ ಶಾಮ್ಸ್- ಏ ತಬ್ರಿಜಿ ರೂಮಿಯ ಇತರ ಪ್ರಮುಖ ಕೃತಿಗಳು.
“ರೂಮಿ ಒಬ್ಬ ಕಟ್ಟಾ ಸಂಪ್ರದಾಯವಾದಿ ಎಂದು ನಾನು ಕೇಳಿದ್ದೇನೆ. ಆದರೆ ಕೆಲವರು ಅವನು ಜೋರಾಸ್ಟ್ರಿಯನ್, ವಕ್ರವಾದ ಸೂಫಿ ಅಥವಾ ಯಾವುದೇ ಧರ್ಮವನ್ನು ಸೇರದ ರೀತಿಯಲ್ಲಿ ತುಂಬಾ ಪ್ರಬುದ್ಧನಾದವನು ಎಂದೆಲ್ಲಾ ಹೇಳುತ್ತಾರೆ. ಕೆಲವರು ಅವನನ್ನು ತಾಜಿಕ್, ಖುರಾಸಾನಿ, ಪರ್ಷಿಯನ್, ಇರಾನಿಯನ್ ಎಂದು ಅರ್ಥೈಸಿದ್ದಾರೆ. ಕೆಲವರು ಅವನು ತುರ್ಕಿಕ್ ಮೂಲದವನು ಎಂದು ದೃಢವಾಗಿ ನಂಬುತ್ತಾರೆ. ಇದು ನಿಜವಾದ ರೂಮಿಗಿಂತ ನಮ್ಮ ಪಕ್ಷಪಾತದ ಸ್ವಭಾವವನ್ನು ಸೂಚಿಸುತ್ತದೆ.”
ರೂಮಿಯ ವ್ಯಕ್ತಿತ್ವವು ಆತನ ನಂಬಿಕೆಯೊಂದಿಗೆ ಆಳವಾಗಿ ಹೆಣೆದುಕೊಂಡಿದೆ. “ನನಗೆ ಆತ್ಮ ಇರುವವರೆಗೂ ನಾನು ಕುರಾನ್ನ ಸೇವಕ. ನಿಯೋಗಿಸಲ್ಪಟ್ಟ ಮಹಮ್ಮದನ ದಾರಿಯಲ್ಲಿನ ದಾರಿ ನಾನು.
ಯಾರಾದರೂ ನನ್ನ ಮಾತುಗಳನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರೆ, ನಾನು ಆ ವ್ಯಕ್ತಿಯನ್ನು ಮತ್ತು ಅವನ ಮಾತುಗಳನ್ನು ಖಂಡಿಸುತ್ತೇನೆ.
~ರೂಮಿ
ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಲಿಸಿದ ರೂಮಿ, ಪಶ್ಚಿಮದಲ್ಲಿ ಸೂಫಿಸಂ ಎಂದು ಕರೆಯಲ್ಪಡುವ ತಸವ್ವುಫನ್ನು ಸಹ ಅಭ್ಯಾಸ ಮಾಡಿದರು. ಧ್ಯಾನದ ಪಠಣಗಳು, ಹಾಡುಗಳು ಮತ್ತು ಕೆಲವೊಮ್ಮೆ ಹೆಜ್ಜೆಗಳ ಮೂಲಕ ದೇವರನ್ನು ಪ್ರತಿಬಿಂಬಿಸುವುದು ಮತ್ತು ನೆನಪಿಸಿಕೊಳ್ಳುವ ಸೂಫಿಸಂ ಆಂತರಿಕ ಶುದ್ಧೀಕರಣದ ಮೂಲಕ ದೇವರನ್ನು ಅರ್ಥಮಾಡಿಕೊಳ್ಳುವ ಮತ್ತು ಸಮೀಪಿಸುವ ಒಂದು ಮಾರ್ಗವಾಗಿದೆ.
ಆಂಡಲೂಸಿಯನ್ ತತ್ವಜ್ಞಾನಿ ಇಬ್ನ್ ಅರಬಿ ಹಾಗೂ ಮಂತಿಖುತ್ವೈರ್ ಇದರ ಪರ್ಷಿಯನ್ ಲೇಖಕ ಫರೀದುದ್ದೀನ್ ಅತ್ತಾರ್ ರವರು ರೂಮಿಯ ಸಮಕಾಲೀನರು ಮತ್ತು ಚಿಂತಕರಾಗಿದ್ದರು.
ಇಂತಹ ಚರ್ಚೆ ಮತ್ತು ಸಂವಾದಗಳಿಗೆ ಇಸ್ಲಾಮಿನ ಮುಕ್ತತೆಯು ಇತರ ಪರ್ಷಿಯನ್ ಕವಿಗಳಾದ ಹಫೀಜ್ ಮತ್ತು ಒಮರ್ ಖಯ್ಯೂಮ್ ಅವರ ಕೃತಿಗಳ ಮೇಲೆ ಮತ್ತಷ್ಟು ಪ್ರಭಾವ ಬೀರುವುದರೊಂದಿಗೆ ಕಾವ್ಯ ಮತ್ತು ಕಲೆಯನ್ನು ಶ್ರೀಮಂತಗೊಳಿಸಿತು.
ಪಶ್ಚಿಮದಲ್ಲಿ ರೂಮಿ
ರೂಮಿಯವರ ಪರ್ಷಿಯನ್ ಕೃತಿಗಳ ಮೊದಲ ಇಂಗ್ಲಿಷ್ ಅನುವಾದವನ್ನು 1772 ರಲ್ಲಿ ಬ್ರಿಟಿಷ್ ನ್ಯಾಯಾಧೀಶ ಹಾಗೂ ಭಾಷಾಶಾಸ್ತ್ರಜ್ಞನಾದ ವಿಲಿಯಂ ಜಾನ್ಸನ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರಧಾನ ಕಛೇರಿ ಕಲ್ಕತ್ತಾದಲ್ಲಿ ಪ್ರಕಟಿಸಿದರು. ಪರ್ಷಿಯನ್ ಭಾಷೆಯು ಮೊಘಲ್ ಆಳ್ವಿಕೆಯ ಪರಂಪರೆಯಾಗಿ ಈಗಲೂ ಭಾರತದಲ್ಲಿ ನ್ಯಾಯಾಲಯಗಳು ಮತ್ತು ಸಾರ್ವಜನಿಕ ಕಚೇರಿಗಳ ಅಧಿಕೃತ ಭಾಷೆಯಾಗಿ ಉಳಿದಿದೆ.
ರೂಮಿಯ ಮಿಸ್ಡಿಕಲ್ ಭಾಷೆಯು ಇತರ ಬ್ರಿಟಿಷ್ ಅನುವಾದಕರನ್ನು ಆಕರ್ಷಿಸಿಸಿತ್ತು. JW ರೆಡ್ಹೌಸ್ (1881), ರೆನಾಲ್ಡ್ಸ್ ಎ ನಿಕೋಲ್ಸನ್ (1925) ಮತ್ತು AJ ಅರ್ಬೆರಿ (ಮಿಸ್ಟಿಕಲ್ ಪೊಯಮ್ಸ್ ಆಫ್ ರೂಮಿ 1960-79) ಅವರಲ್ಲಿ ಕೆಲವರು.
ಆದರೆ ರೂಮಿಯು ತನ್ನ ಕೃತಿಗಳ ಹಳೆಯ, ಹೆಚ್ಚು ಶೈಕ್ಷಣಿಕ ಇಂಗ್ಲಿಷ್ ಅನುವಾದಗಳನ್ನು ಮರು ಭಾಷಾಂತರಿಸಿದ ನಂತರ ಸಾಮಾನ್ಯ ಓದುಗರಲ್ಲಿ ಹೆಚ್ಚು ಜನಪ್ರಿಯನಾದನು. ವಿಶೇಷವಾಗಿ 1990 ರ ದಶಕದಲ್ಲಿ ಅಮೇರಿಕನ್ ಬರಹಗಾರ ಕೋಲ್ಮನ್ ಬಾರ್ಕ್ಸ್ ಅವರ ಅನುವಾದಗಳ ಮೂಲಕ ಹೆಚ್ಚು ಜನಪ್ರಿಯನಾದನು. ಮರಣದ ಏಳು ಶತಮಾನಗಳ ನಂತರವೂ ರೂಮಿ ಹೆಚ್ಚು ಮಾರಾಟವಾದ ಕವಿಯಾಗಿ ಉಳಿದನು.
ರೂಮಿಯವರ ಪರ್ಷಿಯನ್ ಕೃತಿಗಳ ಮೊದಲ ಇಂಗ್ಲಿಷ್ ಅನುವಾದವನ್ನು 1772 ರಲ್ಲಿ ಬ್ರಿಟಿಷ್ ನ್ಯಾಯಾಧೀಶ ಹಾಗೂ ಭಾಷಾಶಾಸ್ತ್ರಜ್ಞನಾದ ವಿಲಿಯಂ ಜಾನ್ಸನ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರಧಾನ ಕಛೇರಿ ಕಲ್ಕತ್ತಾದಲ್ಲಿ ಪ್ರಕಟಿಸಿದರು. ಪರ್ಷಿಯನ್ ಭಾಷೆಯು ಮೊಘಲ್ ಆಳ್ವಿಕೆಯ ಪರಂಪರೆಯಾಗಿ ಈಗಲೂ ಭಾರತದಲ್ಲಿ ನ್ಯಾಯಾಲಯಗಳು ಮತ್ತು ಸಾರ್ವಜನಿಕ ಕಚೇರಿಗಳ ಅಧಿಕೃತ ಭಾಷೆಯಾಗಿ ಉಳಿದಿದೆ.
ರೂಮಿಯ ಜನಪ್ರಿಯತೆಯ ಬಗ್ಗೆ ಕೆಲವರು ಹೀಗೆ ಹೇಳುತ್ತಾರೆ.
ಪರ್ಷಿಯನ್ ಮತ್ತು ಉರ್ದು ಕವನಗಳ ಹಲವಾರು ಸಂಕಲನಗಳನ್ನು ನಿರ್ಮಿಸಿದ ಲೇಖಕ ಮತ್ತು ಛಾಯಾಗ್ರಾಹಕ ಸಿರಾರ್ ಅಲಿ ವಿವರಿಸುತ್ತಾರೆ: “ದಶಕಗಳಿಂದಲೂ ಉಳಿದುಕೊಂಡಿರುವ ಮುಖ್ಯ ಅಂಶವೆಂದರೆ, ಮುಸ್ಲಿಮರು ಸೇರಿದಂತೆ ಪಾಶ್ಚಿಮಾತ್ಯ ಓದುಗರಿಗೆ ಪ್ರಸ್ತುತಪಡಿಸಿದ ರೂಮಿ ಜಾತ್ಯತೀತ, ಸಾರ್ವತ್ರಿಕ ಕವಿ.”
ಜರ್ಮನ್ ತತ್ವಜ್ಞಾನಿ ಇಮ್ಯಾನುಯೆಲ್ ಕಾಂಟ್ ಮತ್ತು ಇಂಗ್ಲಿಷ್ ತತ್ವಜ್ಞಾನಿ ಜಾನ್ ಲಾಕ್ ಅವರ ಕೃತಿಗಳನ್ನು ಅವರ ನಂಬಿಕೆ ವಿಧಾನಗಳನ್ನು ಅರಿಯದೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ, ರೂಮಿಯ ಕಾರ್ಯವೂ ಅದೇ ರೀತಿ ಎಂದು ಸಿರಾರ್ ಅಲಿ ಹೇಳುತ್ತಾರೆ.
ಯಾಕಾಗಿ ರೂಮಿಯನ್ನು ಇಷ್ಟು ಮುಕ್ತವಾಗಿ ಪರಿವರ್ತನೆ ಮತ್ತು ಪರಾವರ್ತನೆ ಮಾಡಲಾಗಿದೆ..?
ಸಾಂಪ್ರದಾಯಿಕ ಸುನ್ನಿ ನಂಬಿಕೆಗಳಿಂದ ರೂಮಿಯನ್ನು ದೂರ ನಿಲ್ಲಿಸಿದ್ದು ತಪ್ಪಾದ ಅನುವಾದಗಳಿಗೆ ಎಡೆಯಾಯಿತು.
ಇದು ಮನುಷ್ಯನ ಕಪಟ -ಧರ್ಮೇತರ ಚಿತ್ರಣವನ್ನು ತೋರಿಸುತ್ತದೆ.
ರೂಮಿಯನ್ನು ಸಾರ್ವತ್ರಿಕವಾದಿಯಾಗಿ ಮಾತ್ರ ಪ್ರಸ್ತುತಪಡಿಸಲಾಗಿಲ್ಲ ಎಂದು ಅಲಿ ಹೇಳುತ್ತಾರೆ. ವೈನ್, ಸ್ವತಂತ್ರ ಲೈಂಗಿಕತೆ ಮತ್ತು ಸಂತೋಷವಲ್ಲದೆ ಮತ್ತೇನನ್ನೂ ಬಯಸದ ಸ್ವತಂತ್ರ ಚಿಂತನೆಯ ಉದಾರವಾದಿಯಾಗಿಯೂ ಅವರನ್ನು ಚಿತ್ರೀಕರಿಸಲಾಗಿದೆ.
ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಏಷ್ಯನ್ ಮಧ್ಯಪ್ರಾಚ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಓಮಿದ್ ಸಫಿ ಅವರು ತಪ್ಪಾದ ರೂಮಿ ಅನುವಾದಗಳನ್ನು ಅಲ್ಲಗಳೆಯುತ್ತಾರೆ.
ಸಾಂಪ್ರದಾಯಿಕ ಸುನ್ನಿ ನಂಬಿಕೆಗಳಿಂದ ರೂಮಿಯನ್ನು ದೂರ ನಿಲ್ಲಿಸಿದ್ದು ತಪ್ಪಾದ ಅನುವಾದಗಳಿಗೆ ಎಡೆಯಾಯಿತು. ಇದು ಮನುಷ್ಯನ ಕಪಟ -ಧರ್ಮೇತರ ಚಿತ್ರಣವನ್ನು ತೋರಿಸುತ್ತದೆ.
“ದೇವ” ಅಥವಾ “ಪ್ರಿಯವಾದವನು” ಎಂಬುದನ್ನು “ಐಹಿಕ ಮತ್ತು ಸ್ವರ್ಗೀಯ ಹಾಗೂ ದೈವಿಕತೆಯ ಎಲ್ಲಾ ಪ್ರಿಯರನ್ನು ಒಳಗೊಂಡಿರುವ ಹೆಚ್ಚು ಸೂಕ್ಷ್ಮವಾದ ಅರ್ಥದಲ್ಲಿ ಬಳಸುವ ಬದಲು, ಪ್ರೀತಿಯ ಮಾನವ ಗುಣವುಳ್ಳ ಪ್ರೇಮಭಾಜನವಾಗಿ ಮಾತ್ರ ಅನುವಾದಗಳಲ್ಲಿ ತೋರಿಸಲಾಗುತ್ತದೆ. ಸಾಮಾನ್ಯವಾಗಿ ತಪ್ಪಾಗಿ ಉಲ್ಲೇಖಿಸಿದ ಮತ್ತೊಂದು ಉದಾಹರಣೆಯೆಂದರೆ, “ನಾವು ಪ್ರೀತಿಸುವ ಸೌಂದರ್ಯವು ನಾವು ಮಾಡುವುದಾಗಿರಲಿ. ಮಂಡಿಯೂರಲು ಹಾಗೂ ನೆಲವನ್ನು ಚುಂಬಿಸಲು ನೂರಾರು ದಾರಿಗಳಿವೆ”. ಈ ಸಾಲುಗಳಲ್ಲಿ ರೂಮಿ ನಿರ್ದಿಷ್ಟವಾಗಿ ರುಕೂ ಮತ್ತು ಸಾಷ್ಟಾಂಗವನ್ನು ಉಲ್ಲೇಖಿಸುತ್ತಾನೆ. ಅವು ಇಸ್ಲಾಂನಲ್ಲಿ ಆರಾಧನೆಯ ಭಾಗಗಳಾಗಿವೆಯಲ್ಲವೇ ?.
ರೂಮಿಯ ಅತ್ಯಂತ ಜನಪ್ರಿಯ ವಿಚಾರಗಳು ಇಸ್ಲಾಮಿಕ್ ಸನ್ನಿವೇಶದಿಂದ ರೂಪುಗೊಂಡವು ಎಂದು ಸಾಫಿ ಹೇಳುತ್ತಾರೆ.
2015 ರ ಹೊತ್ತಿಗೆ, ಬಾರ್ಕ್ಸ್ ಅವರ ‘ದಿ ಎಸೆನ್ಷಿಯಲ್ ರೂಮಿ’ ಎಂಬ ಅನುವಾದ ಕೃತಿಯ ಅರ್ಧ ಲಕ್ಷದಷ್ಟು ಪ್ರತಿಗಳು ಮಾರಾಟವಾದವು. ಇದು ರೂಮಿಯನ್ನು ಅಮೇರಿಕಾದಲ್ಲಿ ಹೆಚ್ಚು ಓದುವ ಕವಿಯನ್ನಾಗಿ ಮಾಡಿತು. ಕೋಲ್ಡ್ಪ್ಲೇ ಗಾಯಕ ಕ್ರಿಸ್ ಮಾರ್ಟಿನ್ನಿಂದ ಮಡೋನಾ ವರೆಗಿನ ಪಾಪ್ ಐಕಾನ್ಗಳು ರೂಮಿಯ ಸೃಷ್ಟಿಯಿಂದ ಹೇಗೆ ಸ್ಫೂರ್ತಿ ಪಡೆದಿದ್ದಾರೆಂದು ಹೇಳಿದ್ದಾರೆ. ಮಾರ್ಟಿನ್ ಬಾರ್ಕ್ಸ್ ಅವರ ಅನುವಾದವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಬಹುಶಃ ಇಸ್ಲಾಮಿನೊಂದಿಗಿನ ಆಳವಾದ ಸಂಬಂಧವನ್ನು ಅರಿತುಕೊಳ್ಳದೆಯೇ, ಇಂಟರ್ನೆಟ್ ಪ್ರಚುರಪಡಿಸುವ ಮೀಮುಗಳು ಸರಳವಾಗಿ ಅರ್ಥೈಸುವ ಒಂದು ಸಾಲಿನ ಉಲ್ಲೇಖಗಳಾಗಿ ಪರಿವರ್ತಿಸಿ, ಪ್ರೇಮಿಗಳನ್ನು ಓಲೈಸಲು ಮತ್ತು ಇತ್ಯಾದಿಗಳಿಗಾಗಿ ಉಪಯೋಗಿಸಲಾಗುತ್ತಿದೆ. ರೂಮಿಯವರ ಮೀಂ ಕಾವ್ಯದ ವಿಮರ್ಶಕರು, ಈ ಅನುವಾದಗಳೇ ರೂಮಿಯನ್ನು 21 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಕವಿಯಾಗಿ ಮಾಡಿದೆ ಎಂಬ ವಾಸ್ತವವನ್ನು ಅಂಗೀಕರಿಸುತ್ತಾರೆ.
“ಬಾರ್ಕ್ಸ್ ಅವರ ಕೃತಿಗೆ ಅರ್ಹತೆ ಇದೆಯೇ ಇಲ್ಲವೇ ಎಂಬುದನ್ನು ಬದಿಗಿರಿಸಿದರೆ, ರೂಮಿಯನ್ನು ಹೆಚ್ಚಾಗಿ ಓದಲು, ಹೆಚ್ಚು ನಿಖರವಾದ ಅನುವಾದಗಳನ್ನು ಪ್ರಕಟಿಸಲು ಮತ್ತು ಪರ್ಷಿಯನ್ ಕಲಿಯಲು ಜನರನ್ನು ಪ್ರೇರೇಪಿಸಿದರೆ, ಅದೊಂದು ಒಳ್ಳೆಯ ಕಾರ್ಯ ವಾಗಿದೆ.” ರೂಮಿಯದ್ದಾಗಿರುವ ನಕಲಿ ಉಲ್ಲೇಖಗಳ ಹೆಚ್ಚಳವನ್ನು ತಡೆಗಟ್ಟಲು 2018 ರಲ್ಲಿ ಪರ್ಷಿಯನ್ ಪೊಯೆಟಿಕ್ಸ್ ಪ್ರಾಜೆಕ್ಟ್ ಅನ್ನು ಸ್ಥಾಪಿಸಿದ ಮೊಜರಾದಿ, ಅಲ್ ಜಝೀರಾದೊಂದಿಗೆ ಅಭಿಪ್ರಾಯಿಸಿದರು.
ಬರಕ ಬ್ಲೂವಿಗೆ ಸಂಭವಿಸಿದ್ದೂ ಇದೇ. ಹದಿಹರೆಯದವನಾಗಿದ್ದಾಗ, ಸಮಾನ ಮನಸ್ಕ ಸ್ನೇಹಿತರೊಂದಿಗೆ ಕವಿತೆಯಲ್ಲಿ ಮುಳುಗಿ ಕವಿಗಳು, ಸಂಗೀತ ತಜ್ಞರು ಮತ್ತು ಹಾಡು ರಚನೆಗಾರರಿಗೆ ಸವಾಲೆಸೆಯುವ ಸಂದರ್ಭದಲ್ಲಿ ಅವರು ರೂಮಿಯಲ್ಲಿ ಆಕರ್ಷಿತರಾದರು. ರೂಮಿಯ ಮಾತುಗಳು “ಗಹನವಾದ ಪ್ರಭಾವ” ಹೊಂದಿದ್ದವು ಎಂದು ಅವರು ಹೇಳುತ್ತಾರೆ.
“ಅವರು ಮಾತನಾಡುವ ಪರಿಸ್ಥಿತಿ ಮತ್ತು ವಾಸ್ತವವನ್ನಾಗಿದೆ ಅವರು ವಿವರಿಸಿದ್ದು. ಅದು ನನ್ನನ್ನು ಆಕರ್ಷಿಸಿತು” ಎಂದು ಶಿಕ್ಷಕ ಮತ್ತು ಕವಿ ಬರಾಕಾ ಹೇಳುತ್ತಾರೆ. 20 ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಮೂರು ತಿಂಗಳ ನಂತರ ಕೊನ್ಯಾದಲ್ಲಿರುವ ರೂಮಿಯ ಅಂತ್ಯವಿಶ್ರಮ ಕೇಂದ್ರಕ್ಕೆ ತೀರ್ಥಯಾತ್ರೆ ಕೈಗೊಂಡರು.
ಮೋನಾ ವಸ್ತುಸಂಗ್ರಹಾಲಯದ ಪಕ್ಕದಲ್ಲಿರುವ ರೂಮಿಯ ಕೇಂದ್ರವು ಲಕ್ಷಾಂತರ ಪ್ರವಾಸಿಗರು ಮತ್ತು ವಿನೋದ ಸಂಚಾರಿಗಳಿಗೆ ಯಾತ್ರಾ ಸ್ಥಳವಾಗಿ ಮಾರ್ಪಾಡಾಗಿದೆ. 2019 ರಲ್ಲಿ, ಕೋವಿಡ್ ಭಾದಿಸುವ ಒಂದು ವರ್ಷ ಮೊದಲು 3.5 ದಶಲಕ್ಷ ಜನರು ಅಲ್ಲಿಗೆ ಭೇಟಿ ನೀಡಿದ್ದಾರೆಂದು ಲೆಕ್ಕಮಂಡಳಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಶಬ್- ಎ- ಉರೂಸ್ ಸಮಯದಲ್ಲಿ ಸಮಾ ನೃತ್ಯ ಅಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.
ರೂಮಿ ಯಾಕಾಗಿ ಜನಪ್ರಿಯನಾಗಿದ್ದು..?
ಸಿರಿಯಾದ ಅಲೆಪ್ಪೊದಲ್ಲಿ ತನ್ನ ದೈವಶಾಸ್ತ್ರದ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ರೂಮಿ ಕೆನಿಯಾಗೆ ಬಂದರು. ಅಲ್ಲಿಂದ ಶಮ್ಸ್- ಎ- ತಬ್ರಿಸ್ (ಗುರು) ಎಂಬ ವಿದ್ವಾಂಸನೊಂದಿಗಿನ ಸಮಾಗಮ.
ಕ್ಯಾಲಿಫೋರ್ನಿಯಾದ ರೂಮಿ ಸೆಂಟರ್ ಎಂಬ ಮಿಸ್ಟಿಕ್ ಕಲಾ ಸಂಸ್ಥೆಯ ಸಂಸ್ಥಾಪಕ ಬರಾಕಾ ಬ್ಲೂ ಹೇಳುವಂತೆ, ತಬ್ರಿಸ್ ಅವರು ರೂಮಿಯನ್ನು ಸಮರ್ಪಕವಾಗಿ ಪರಿವರ್ತಿಸಿ ಆಧ್ಯಾತ್ಮಿಕ ಉನ್ನತಿಗೆ ತಲುಪಿಸಿದರು ಎಂದು ಹೇಳುತ್ತಾರೆ.
ದೈವಾನ್ವೇಷಣೆಯ ತೀವ್ರ ಅಭಿಲಾಷೆಯಿಂದ ನಡೆದ ರೂಮಿ 50,000 ಸಾಲುಗಳಿರುವ ಮಸ್ನವಿಯನ್ನು ಬರೆದರು. ಇದು ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾಯಿತು. ಫೀಹಿ ಮಾ ಫೀಹಿ, ಗುರುವಿನ ಗೌರವಾರ್ಥವಾಗಿ ಬರೆದ ಕವನಗಳ ಸಂಗ್ರಹ ದಿವಾನ್- ಏ ಶಾಮ್ಸ್- ಏ ತಬ್ರಿಜಿ ರೂಮಿಯ ಇತರ ಪ್ರಮುಖ ಕೃತಿಗಳು.
ಓದುಗರು ಮಸ್ನವಿಯನ್ನು ಪರ್ಷಿಯನ್ ಭಾಷೆಯಲ್ಲಿನ ಕುರಾನ್ ಎಂದು ಕರೆದರು.
ಖ್ಯಾತ ರಾಪರ್ ಮತ್ತು ಕವಿ ಬರಾಕಾ ಅವರು, ಮಸ್ನವಿ ಕುರಾನ್ನ ಪರ್ಷಿಯನ್ ವ್ಯಾಖ್ಯಾನ ಎಂದು ಗಮನಿಸುತ್ತಾರೆ.
ಮಸ್ನವಿಯ ಮುನ್ನುಡಿಯಲ್ಲಿ, ರೂಮಿ ಹೇಳುತ್ತಾರೆ, “this is the root of the root of the root of the way(faith).”
ರೂಮಿಯವರ ಮಾತುಗಳ ಆಳವನ್ನು ಸಂಪೂರ್ಣವಾಗಿ ಗ್ರಹಿಸಲು, ಸಾಮಾನ್ಯವಾಗಿ ಇಸ್ಲಾಮಿಕ್ ಸಂಪ್ರದಾಯ ಮತ್ತು ವಿಶೇಷವಾಗಿ ಸೂಫಿಸಂ ಬಗ್ಗೆ ಉತ್ತಮ ತಿಳುವಳಿಕೆ ಬೇಕು ಹಾಗೂ ಅವರ ಮಾತುಗಳು ಇಸ್ಲಾಮಿಕ್ ಸಂಪ್ರದಾಯಕ್ಕೆ ಇರುವ ಒಂದು ಸುಂದರ ಪ್ರವೇಶದ್ವಾರ ಎಂದು ಬರಕ ಹೇಳುತ್ತಾರೆ.
ಮಸ್ನವಿಯ ಓದುಗರು ಭಕ್ತಿಭಾವದಿಂದ ಇರುವಂತೆ ಸ್ವತಃ ರೂಮಿಯವರೇ ಉಪದೇಶಿಸುತ್ತಿದ್ದರು. ಅಥವಾ ಸೃಷ್ಟಿಕರ್ತನೊಂದಿಗೆ ಸಂಬಂಧವನ್ನು ಸ್ಥಾಪಿಸುವುದು ಮಸ್ನವಿಯ ಆಸಕ್ತಿಯಾಗಿತ್ತು.
ಮೂಲ : ಅಲ್ ಜಝೀರ
ಕನ್ನಡಕ್ಕೆ: ಸ್ವಾದಿಖ್ ಮುಈನಿ ಬೆಳಾಲ್