ಒಂದೇ ಜೀವರತ್ನದಿಂದ ಉದಿಸಿದವರು
ಒಂದು ದೇಹದ ಅಂಗಾಂಗಳಂತೆ
ಆದಮನ ಸಂತತಿ ನಾವು ಮನುಷ್ಯರೆಲ್ಲಾ
ಕಾಲಚಕ್ರದ ಹೊಡೆತಕ್ಕೆ ಸಿಲುಕಿ
ಒಂದು ಅಂಗವು ನರಳಿದಾಗಲೆಲ್ಲಾ
ಉಳಿದ ಅಂಗಗಳೂ ಸುಖದಿಂದಿರಲು ಸಾಧ್ಯವಿಲ್ಲ
ಪರರ ದುಃಖಕ್ಕೆ ನಿನ್ನ ಮನಸ್ಸು ಕರಗದಿದ್ದರೆ
ಮನುಷ್ಯ(ಆದಮಿ)ನೆಂದುಕೊಳ್ಳಲು ನಿನಗೆ ಯೋಗ್ಯತೆಯಿಲ್ಲ
– ಸಾದಿ ಶಿರಾಝಿ
ಅನುವಾದ : ಪುನೀತ್ ಅಪ್ಪು
ಇರಾನ್ ದೇಶ ಯುನೈಟೆಡ್ ನೇಷನ್ಸ್ ಗೆ ನೀಡಿದ ಕಾರ್ಪೆಟ್ನ ಜೊತೆಗೆ ಶಾದಿ ಶಿರಾಝಿಯ ವಿಶ್ವಮಾನವತೆಯನ್ನು ಸಾರುವ ಈ ‘ಬನೀ ಆದಮ್’ ಕವಿತೆಯ ಫಲಕವನ್ನೂ ಸ್ಥಾಪಿಸಲಾಗಿದೆ.