ತನ್ನ ಮೂವತ್ತನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದ ಕೇಪ್ ಮಲಾಯ್ ಜನಾಂಗದಲ್ಲಿ ಜನಿಸಿದ ಸಾರಾ ಜಾಪ್ಪೆ ಮಾತ್ರ ‘ಆಫ್ರಿಕನ್ಸ್’ ಕುರಿತು ಮಾತನಾಡಲು ಸಿಕ್ಕ ವನಿತೆ. ಟೋಂಬೋಕ್ಟೋ ಮ್ಯಾನುಸ್ಕ್ರಿಪ್ಟ್ಸ್ ಪ್ರಾಜೆಕ್ಟಿನ (Tombouctou Manuscripts Project) ಭಾಗವಾಗಿ ಸಂಶೋಧನೆ ನಡೆಸುವಾಗ ಸಾರಾ ೨೦೦೮ ರಲ್ಲಿ ಆಫ್ರಿಕಾದ ಗ್ರಂಥಗಳ ಕುರಿತು ಕೇಳಲಾರಂಭಿಸುತ್ತಾರೆ. ಜೋಹಾನ್ಸ್ ಬರ್ಗ್‌ನ ವಿಟ್ವಾಟರ್ಸ್ಟಾಂಡ್ ಯುನಿವರ್ಸಿಟಿಯಲ್ಲಿ (University of the Witwatersrand) ಇತಿಹಾಸಕಾರ’ಳಾಗಿ ಸಾರಾ ಇಂದು ಅರೇಬಿಕ್, ಆಫ್ರಿಕನ್-ಅರಬಿ ಹಾಗೂ ಜಾವಿ ಭಾಷೆಯಲ್ಲಿ ಗ್ರಂಥ ವಾಚನ ನಡೆಸುತ್ತಿದ್ದರು. ‘ಗುಲಾಮೀ ವಂಶಸ್ಥರಾದ ಕೇಪ್ ಮಲಾಯ್ ಮುಸ್ಲಿಮರಿಗೆ ಕಿತಾಬ್‌ಗಳಲ್ಲದೆ ಬೇರೊಂದು ಪರಂಪರಾಗತ ಆಸ್ತಿಯಿಲ್ಲ..!’ ಸಾರಾ ತನ್ನ ಮಾತನ್ನು ಮುಂದುವರಿಸಿದರು ‘ಕಿತಾಬ್ ಅಂದರೆ ವೈಯಕ್ತಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಉತ್ಪನ್ನ. ಅಂತಹ ಕಿತಾಬ್‌ಗಳು ಕಾಲಹರಣವಾಗಿ ಹೋದರರೂ ಪ್ರತೀ ಗ್ರಂಥಗಳ ಮಹತ್ವ ತುಂಬಾ ಮಹತ್ತರವಾದ್ದು. ಬಹುಕಾಲದಿಂದ ಗುಲಾಮಗಿರಿ ಹಾಗೂ ವರ್ಣಭೇಧದಿಂದ ಕಳೆದ ನಿಮಿತ್ತ ಸಮಾಜ ಕಡೆಗಣಿಸಿದರೂ ಉತ್ತಮ ಜೀವನ ‘ಗ್ರಂಥ’ ನೀಡಿದೆ ಎಂದರೆ ತಪ್ಪಾಗಲಾರದು..’
ಹಳದಿ ಬಣ್ಣವುಳ್ಳ ಗ್ರಂಥ ವಾಚಿಸುವಾಗ ತನ್ನ ಕುಟುಂಬದ ಬೇರು ಇಂಡೋನೇಷ್ಯಾದಲ್ಲಿವೆ ಎಂದು ಇಬ್ರಾಹೀಮರಿಗೆ ವೇದ್ಯವಾದವು. ಕೇಪ್ ಟೌನ್‌ನಿಂದ ನಲವತ್ತೈದು ನಿಮಿಷಗಳ ದೂರದಲ್ಲಿರುವ Simon’s Town ಲ್ಲಿ ಇಬ್ರಾಹೀಮರ ಜನನ. ಶಾಲಾ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಬೀದಿಗಳಲ್ಲಿ ಅಲೆದಾಡಿ, ಖುರ್‌ಆನ್ ಕಲಿಯಬೇಕು ಎಂಬ ತನ್ನ ತಂದೆಯ ನಿರೀಕ್ಷೆ ಹುಸಿ ಮಾಡಿದ ನತದೃಷ್ಟ ವ್ಯಕ್ತಿ ಎಂದು ತನ್ನನ್ನು ಪರಿಚಯಿಸುತ್ತಾರೆ. ಇನ್ನು ಗ್ರಂಥವನ್ನು ನಾಜೂಕಾಗಿ ಸಂರಕ್ಷಿಸಿ ಇಟ್ಟ ತಂದೆಯ ಕಪ್ಪು ಸೂಟ್‌ಕೇಸ್ ಹಾಗೂ ತನಗೆ ಐದು ಅಥವಾ ಆರು ವರ್ಷವಿದ್ದಾಗ ‘ಅದನ್ನು ಮುಟ್ಟಬೇಡ’ ಎಂಬ ತಂದೆಯ ಶಾಸನವೂ ಇಬ್ರಾಹೀಮರ ಮನದಿಂದ ಮಾಯವಾಗಿಲ್ಲ. ಇಬ್ರಾಹೀಂ ಕುಡಿದದ್ದು ವರ್ಣಭೇದದ ಕಹಿ ನೀರು ಮಾತ್ರವಲ್ಲ ಹೊರತಾಗಿ ದಕ್ಷಿಣಾಫ್ರಿಕ ಸರ್ಕಾರವು ೧೯೫೦ ರಲ್ಲಿ ಜಾರಿಗೊಳಿಸಿದ ಗ್ರೂಪ್ ಏಷ್ಯನ್ ಕಾಯ್ದೆ ಅಂದರೆ ಲಕ್ಷಗಟ್ಟಲೆ ಜನ ತಮ್ಮ ತಲೆಮಾರುಗಳಿಂದ ಮನೆಕಟ್ಟಿ ವಾಸಿಸುತ್ತಿದ್ದು, ಅವರನ್ನು ಬಲವಂತವಾಗಿ ಹೊರಗಟ್ಟುವ ಮೂಲಕ ಸಮುದಾಯವನ್ನು ಭಿನ್ನವಾಗಿಸುವಲ್ಲೂ ಇಬ್ರಾಹೀಂ ಬಲಿಪಶುವಾಗಿದ್ದರು. ತನ್ನ ಹದಿ ಹರೆಯದ ಸಮಯ ಇಕ್ಕಟ್ಟಾದ ಫ್ಲಾಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದರು. ‘ನಮ್ಮ ಕೈಯಲ್ಲಿದ್ದ ಅನೇಕ ಗ್ರಂಥಗಳು ನಶಿಸಿ ಹೋದದ್ದು ಆ ದಿನಗಳಲ್ಲೇ ಆಗಿರಬಹುದು..!’ ಎನ್ನುತ್ತಾರೆ ಇಬ್ರಾಹೀಂ. ‘ದೊಡ್ಡ ಅವಿಭಕ್ತ ಕುಟುಂಬವಾದ ಕಾರಣ ಎಲ್ಲಾ ಸಾಮಾಗ್ರಿಗಳು ಖರೀದಿಸಲು ಸಾಧ್ಯವಾಗಲಿಲ್ಲ. ಅವರು ನನ್ನ ಕುಟುಂಬವನ್ನು ನಿರ್ದಯವಾಗಿ ಟ್ರಕ್ಕ್‌ಗೆ ಎಳೆದೊಯ್ಯಲಾಯಿತು. ಅಲ್ಲಿ ಟ್ರಕ್ಕಿಗೇರಿಸುವವರು ಮಾತ್ರವಿದ್ದು, ಊರವರು ಟ್ರಕ್ಕ್ ಕಂಡಷ್ಟರಲ್ಲೇ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಓಡಿಹೋದರು. ಅತ್ಯಗತ್ಯ ಉಪಕರಣಗಳು ಬಿಟ್ಟು ತೆಗೆದುಕೊಳ್ಳಲು ಸಾಧ್ಯವಾಗದ ಎಲ್ಲವನ್ನೂ ವಾಸವಿದ್ದ ಆ ಮಣ್ಣಿನಲ್ಲಿಯೇ ಅವಶೇಷಿಸಲಾಯಿತು..’ ಎಂದು ಇಬ್ರಾಹೀಂ ವಿಷಾದ ವ್ಯಕ್ತಪಡಿಸಿದರು. ನಂತರ, ಅವರು ಬೀಚ್ ಬಳಿಯ ಸಣ್ಣ ಗುಡಿಸಲಿನಲ್ಲಿ ವಾಸ ಹೂಡಲು ಪ್ರಾರಂಭಿಸಿದರು. ಬಿಳಿಯರಿಗೆ ಆಹಾರವನ್ನು ಬೇಯಿಸಿ, ನೌಕಾಪಡೆಯಲ್ಲಿ ಸೇರಿ ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದರು.
ಆಫ್ರಿಕಾದ ಗ್ರಂಥ ಸಂರಕ್ಷಕರಲ್ಲಿ ಇಬ್ರಾಹೀಂ ಮ್ಯಾನುವೇಲಿಯು ಒಬ್ಬರು. ನಾವು ಸ್ಕೈಪಿನ ಮೂಲಕ ವಿನಿಮಯಿಸಲು ಕೆಲ ಕಾಲ ಕಳೆದರೂ ಭೇಟಿಯಾಗಿರಲಿಲ್ಲ. ಎಪ್ಪತ್ತೊಂದು ವರ್ಷದ ಇಬ್ರಾಹೀಮರನ್ನು ಅವರ ಮನೆಯಲ್ಲೇ ಭೇಟಿಯಾದೆ. ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿಲ್ಲ ಎಂದು ಆರ್ಧ್ರದಿಂದ ಸಾರಾಗೆ ಹೇಳಿದರು. ನಾಲ್ಕು ಕೊಠಡಿಯಿಂದಾವೃತವಾದ ಪುಟ್ಟ ಮನೆ, ಅದರೊಳಗೆ ಇಬ್ರಾಹೀಮರ ಸುಂದರ ಜಗತ್ತು. ಅಲ್ಲಿನ ‘ಬಾಗಿಲ ಅಂತರ’ವು ಇತರ ಮನೆಗಳಿಂದ ಪ್ರತ್ಯೇಕಿಸುವ ಅಂಶವೆಂದು ಭಾವಿಸಿದೆ. ಮತ್ತೊಂದು ಗಮನಾರ್ಹ ಸಂಗತಿ ಹೆಚ್ಚಿನ ಸಂಧ್ಯಾ ವೇಳೆಗಳಲ್ಲಿ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿ ಸಂಚರಿಸುವ ಕಾರುಗಳ ಗುಂಪಿನ ದೃಶ್ಯ ಕಾಣ ಸಿಗುವುದು ಖಂಡಿತಾ. ಆಜು ಬಾಜಿನಲ್ಲಿ ಕರ್ಕಶಗಳಿಂದ ಕೂಡಿದ್ದರೂ ಇಬ್ರಾಹೀಮರು ತನ್ನ ಸುಂದರ ಜಗತ್ತನ್ನು ವಾಸ್ತವದೊಂದಿಗೂ ಕಲ್ಪನೆಯೊಂದಿಗೂ ಬೇರ್ಪಡಿಸಲಾಗದಂತೆ ಹೆಣೆದಿರುವರು. ಜೋಪಡಿಯ ಅಂಚುಗಳು ಕೇಪ್ ಮಲಾಯ್ ಮುಸ್ಲಿಮರ ಐತಿಹ್ಯ ಹಾಗೂ ವರ್ತಮಾನದ ಚಿತ್ರಣಗಳು, ಇತರೆ ದಾಖಲೆಗಳನ್ನು ವಿವರಿಸುತ್ತಿದೆ ಎಂದು ಭಾಸವಾಗುತ್ತದೆ.
೧೯೯೨ ಸೆಪ್ಟೆಂಬರ್ ೭ ರಂದು ಇಬ್ರಾಹೀಮರ ತಂದೆ ಅಸುನೀಗಿದರು. ತಂದೆಯ ಮರಣದ ಐದು ವರ್ಷಗಳ ಬಳಿಕ ಕುಟುಂಬದ ಆಸ್ತಿಯಾಗಿರುವ ಹಳದಿ ಬಣ್ಣವುಳ್ಳ ಗ್ರಂಥವನ್ನು ಅನ್ವೇಷಿಸಲು ಖುದ್ದಾಗಿ ತಂದೆ ಕನಸಿನಲ್ಲಿ ಬಂದು ಸೂಚಿಸುತ್ತಾರೆ. ಇಬ್ರಾಹಿಂ ಸತತ ಮೂರು ದಿನ ಇದೇ ಕನಸು ಕಂಡರು. ಇದಕ್ಕಾಗಿ ತನ್ನ ಚಿಕ್ಕಮ್ಮ ಕೋಬೆಯನ್ನು ಭೇಟಿ ಮಾಡಿ, ಗ್ರಂಥದ ಕುರಿತು ಮಾಹಿತಿ ಪಡೆಯಲು ಪ್ರಾರಂಭಿಸಿದರು. ಹುಡುಕಾಟದ ಅಂತಿಮ ವೇಳೆಯಲ್ಲಿ ಆ ಗ್ರಂಥವನ್ನು ಕೋಬೇಯ್ ಇಬ್ರಾಹೀಂಗೆ ಹಸ್ತಾಂತರಿಸಿದರು. ಆ ಗ್ರಂಥ ವಾಚಿಸುವಾಗ ಇಬ್ರಾಹೀಮರ ಪೂರ್ವಜರನ್ನು ಉಲ್ಲೇಖಿಸಲಾಗಿತ್ತು. ತನ್ನ ಕುಟುಂಬದ ವಂಶಾವಳಿಯ ನಕ್ಷೆಯಿಂದ ತನ್ನ ತಲೆಮಾರು ಇಂಡೋನೇಷ್ಯಾದ ಸುಂಬಾವ ದ್ವೀಪದ (Sumbawa Island) ದೊರೆ ಅಬ್ದುಲ್ ಖಾದರ್ ಜೀಲಾನಿ ಡೆಯ್ ಕೋಸಾ ಹಾಗೂ ಅವರ ಮಗ ಇಮಾಂ ಇಸ್ಮಾಈಲ್ ಡೆಯ್ ಮಲೀಲಾಗೆ ತಲುಪುತ್ತದೆ ಎಂದು ಇಬ್ರಾಹೀಮರಿಗೆ ಗ್ರಾಸವಾದವು. ೧೭೫೩ ರಲ್ಲಿ ಡಚ್ಚರು ಅವರನ್ನು ಕೇಪ್ ಆಫ್ ಗುಡ್ ಹೋಪ್ (Cape of good hope) ಗೆ ಕರೆತಂದು ಸೈಮನ್ಸ್ ಪಟ್ಟಣದ ಒಂದು ಜೈಲಿನಲ್ಲಿ ಬಂಧಿಸಿದರು. ೧೭೫೫ ರಲ್ಲಿ ಗೋಡೆ ಅಗೆದು ಜೈಲಿನಿಂದ ತಪ್ಪಿಸಿಕೊಂಡರು. ಶೀಘ್ರದಲ್ಲೇ ಅಬ್ದುಲ್ ಖಾದಿರ್ ಹಾಗೂ ಮಗ ಜನ ಸೇವೆಯಲ್ಲಿ ನಿರತರಾಗಿ ಅವರ ಸಮಸ್ಯೆಗೆ ಸ್ಪಂದಿಸಲು ತೊಡಗುತ್ತಾರೆ. ಮುಂದೆ ನಾಯಕರಾಗಿ ಬೆಳೆಯತೊಡಗಿದರು. ಸೈಮನ್ಸ್ ಟೌನ್‌ನ ಒಂದು ಬೆಟ್ಟದ ಮೇಲೆ ಅವರ ಮಖ್‌ಬರ ಇದೆ.
ತುಂತುರು ಮಳೆ ಬೀಳುವ ಮೊದಲು ನಾವು ಖಬರಿನ ಬಳಿ ಸಾಗಿದೆವು. ಮಖ್‌ಬರದಲ್ಲಿ ವಯೋವೃದ್ಧರೋರ್ವರು ಖುರ್‌ಆನ್ ಪಠಿಸುತ್ತಿದ್ದರು. ಅವರ ಪತ್ನಿ ಪಾರಾಯಣಗೈಯ್ಯುತ್ತಿದ್ದ ಪತಿಗೆ ಕೊಡೆ ಹಿಡಿಯುವ ದೃಶ್ಯ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದವು..! ಟೌನಿನ ಕೆಳಭಾಗದಲ್ಲಿರುವ ಸಮುದ್ರ ತೀರದಲ್ಲಾಗಿದೆ ಇಬ್ರಾಹೀಮರ ಚಿಕ್ಕಮ್ಮ ಕೋಬೆಯ ಜೋಪಡಿ. ಮನೆಯ ಪಕ್ಕದಲ್ಲಿ ಸೈಮನ್ಸ್ ಸ್ಕೂಲ್ ಹಾಗೂ ಮಸೀದಿಯಿದೆ. ೧೯೨೩ ರಲ್ಲಿ ನಿರ್ಮಿಸಲಾದ ಸುಂದರ ಶಾಲೆಯು ಸಮುದ್ರದ ಹೃದ್ಯ ನೋಟ ನೀಡುವುದು ಖಂಡಿತಾ. ೧೯೯೯ ರಲ್ಲಿ ಓರ್ವ ಅನುವಾದಕನೊಂದಿಗೆ ಸುಂಬಾವೆಗೆ ಪ್ರಯಾಣಿಸಲು ಇಬ್ರಾಹೀಂ ಅನ್ನು ಪ್ರೇರೇಪಿಸಿದ ವಸ್ತು ‘ದೈವೀ ವಾಣಿ’ಯಾಗಿದೆ. ಅವರನ್ನು ಕಂಡೊಡನೆ ಗ್ರಾಮಸ್ಥರ ಕಣ್ಣು ತುಂಬಿದ್ದವಂತೆ. ಡಚ್ ಈಸ್ಟ್ ಇಂಡಿಯಾ ಕಂಪನಿ ಅಸಹಕಾರದಿಂದಾಗಿ ನಾಯಕರನ್ನು ಗುಲಾಮರಂತೆ ಕರೆದೊಯ್ಯುವ ಚಿತ್ರಣವು ಇಬ್ರಾಹೀಮರ ಮನಸ್ಸಿಗೆ ಘಾಸಿ ಮಾಡಿದ್ದವು. ‘ನನಗೆ ರಾಜಕೀಯ ಸ್ವಾಗತ ನೀಡಲಾಯಿತು. ನನ್ನ ಇಡೀ ಶರೀರದಲ್ಲಿ ಒಮ್ಮೆಲೇ ರಕ್ತ ಸಂಚಾರವಾದವು. ಅದಲ್ಲದೆ ನನ್ನ ತಂದೆಗೆ ‘ಗ್ರಾಮ ನಾಯಕ ಪಟ್ಟ’ ನೋಡಿ ಆಘಾತಕ್ಕೊಳಗಾದೆ..’ ಎಂದು ಸ್ವತಃ ಇಬ್ರಾಹಿಂ ನಮ್ಮಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು. ತನ್ನ ಕುಟುಂಬದ ವಂಶಾವಳಿ ಗುರುತಿಸುವ ಆ ಹಳದಿ ಬಣ್ಣವುಳ್ಳ ಕಿತಾಬಿನ ಪ್ರತಿ ಇಬ್ರಾಹೀಂ ನಮಗೆ ತೋರಿಸಿದರು. ಇದರ ಒರ್ಜಿನಲ್ ಕಾಪಿ ಎಲ್ಲಿದೆ ಎಂಬ ನನ್ನ ಪ್ರಶ್ನೆಗೆ ವಿಷಣ್ಣತೆಯ ನೋಟ ಉತ್ತರವಾಗಿಸಿದರು. ಬಳಿಕ ಮುಂದುವರೆಸಿದರು- ‘ಆ ಕಿತಾಬು ಹಾಗೂ ಇತರೆ ಎರಡು ಕಿತಾಬನ್ನು ೩೦೦೩ ರಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಿದೆ. ಮತ್ತೆ ಆ ವ್ಯಕ್ತಿಯನ್ನು ನಾನು ನೋಡಲಿಲ್ಲ..!’ ತನ್ನ ಸಂಶೋಧನೆ ತೀವ್ರಗೊಳಿಸಲು ಹಾಗೂ ನಷ್ಟವಾದ ಕಿತಾಬನ್ನು ಸಂಗ್ರಹಿಸುತ್ತೇನೆ ಎಂದು ಇಬ್ರಾಹೀಂ ಸಾರಾಳೊಂದಿಗೆ ಹೇಳಿ ಸಂಭಾಷಣೆಗೆ ವಿರಾಮ ಹಾಕಿದರು.
ಇಂಡೋನೇಷ್ಯಾ ಹಾಗೂ ದಕ್ಷಿಣ ಆಫ್ರಿಕಾದ ಜನರು ಇಬ್ರಾಹೀಮರ ಕತೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿದ್ದರೂ ಅದನ್ನು ಒದಗಿಸಬೇಕೆಂಬ ನಗ್ನ ಸತ್ಯವನ್ನು ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ. ‘ಇಬ್ರಾಹೀಂ ತನ್ನ ಕುಟುಂಬದ ಬೇರನ್ನು ಹುಡುಕಲು ಕಠಿಣ ಪ್ರಯಾಣ ಕೈಗೊಂಡಿದ್ದಾರೆ..’ ಎಂದು ಸಾರ ತನ್ನ ಮಾತನ್ನು ಮುಂದುವರಿಸಿದರು ‘ಆದ್ದರಿಂದ ಇಬ್ರಾಹೀಮರ ದೃಷ್ಟಿಕೋನ ಆಳ ಪರಂಪರೆಯ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಅನೇಕರು ಇಬ್ರಾಹೀಮರ ಬಳಿಯಿರುವ ಕಿತಾಬುಗಳನ್ನು ಸಂರಕ್ಷಿಸಲು ಸೈಮನ್ಸ್ ಟೌನ್‌ನ ಹೆರಿಟೇಜ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಅನುಮತಿ ನೀಡದ್ದಕ್ಕೆ ಇದಲ್ಲದೆ ಬೇರೆ ಕಾರಣ ಹುಡುಕುವ ಅಗತ್ಯವಿಲ್ಲ!’.
ನಾವು ಪ್ಯಾಟಿ ಆಂಟಿ ಎಂದು ಕರೆಯಲ್ಪಡುವ ಝೈನಬ್ ಡೇವಿಡನ್ಸ್ ಹಾಗೂ ಅವರ ಪತಿ ಸೆಡಿಕ್‌ರ ಮನೆಗೆ ಭೇಟಿ ನೀಡಿದೆವು. ಮನೆಯ ನೆಲ ಮಹಡಿಯಲ್ಲಿ (ಮ್ಯೂಸಿಯಂ) ಹಳೆಯ ಬಟ್ಟೆ ಸಂಗ್ರಹ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಗೋಡೆ ಚಿತ್ರ ಹಾಗೂ ಇತರೆ ದಾಖಲೆಗಳಿಂದ ತುಂಬಿದ್ದವು. ಇದಲ್ಲದೆ, ಅರೇಬಿಕ್ ಹಾಗೂ ಜಾವಿ ಭಾಷೆಯಲ್ಲಿ ಹಲವಾರು ಕಿತಾಬ್‌ಗಳನ್ನು ಗಾಜಿನಡಿಯಲ್ಲಿ ಸಂರಕ್ಷಿಸಿಟ್ಟಿದ್ದರು. ಮ್ಯೂಸಿಯಂನಲ್ಲಿ ವಿಶೇಷ ಮೇಲ್ವಿಚಾರಕರು ಇಲ್ಲದಿದ್ದರೂ ಮನುಷ್ಯ ಸ್ಪರ್ಶದಿಂದ ಕಿತಾಬ್‌ಗಳಿಗೆ ಒಂಚೂರು ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಅವರ ಸಂಗ್ರಹದಲ್ಲಿರುವ ಅತ್ಯಂತ ಹಳೆಯ ಕಿತಾಬ್ ತೋರಿಸಲು ಸೆಡಿಕ್ ನಮ್ಮ ಬಳಿ ಬಂದರು. ಪ್ಯಾಟಿ ಆಂಟಿ ಬೆಳೆದ ಈ ಮನೆ ೧೯೯೮ ರಲ್ಲಿ ವಸ್ತು ಸಂಗ್ರಹಾಲಯವಾಯಿತು. ‘ನಮ್ಮ ಸಮುದಾಯ ಒಂದು ಅದ್ಭುತ..’ ಎಂದು ಪ್ಯಾಟಿ ಆಂಟಿ ಮುಗುಳ್ನಕ್ಕು ಪುನಃ ಮಂಡಿಸಿದರು ‘ಜನರು ಈ ಮ್ಯೂಸಿಯಂ ಅನ್ನು ನಡೆಸಲೋಸ್ಕರ ಅವರ ಕೈವಶವಿರುವುದನ್ನು ನಮಗೆ ನೀಡಿದ್ದರು. ಈ ಕೂಟದಲ್ಲಿ ಇಬ್ರಾಹೀಂ ಸಾಕಷ್ಟು ಭಾವಚಿತ್ರ, ಪತ್ರಿಕಾ ಪ್ರಕಟಣೆಗಳು ನೀಡಿದರು. ಇದಲ್ಲದೆ ಒಳ್ಳೆಯ ಭವಿಷ್ಯಕ್ಕಾಗಿ ದುಡಿದರು. ಮ್ಯೂಸಿಯಮಿನ ಉದ್ಘಾಟನಾ ಸಮಾರಂಭದಂದು ಸಾವಿರಗಟ್ಟಲೆ ಜನ ಸೇರಿದ್ದರು..’ ವಿಷಾದದ ಸಂಗತಿಯೆಂದರೆ ಇಲ್ಲಿ ಪ್ಯಾಟಿ ಆಂಟಿಯ ಕುಟುಂಬದ ಕಿತಾಬ್‌ಗಳು ಯಾವುದು ಇಲ್ಲ. ಎಲ್ಲಿದೆ ಎಂಬ ನಮ್ಮ ಪ್ರಶ್ನೆಗೆ ‘ಅದನ್ನು ಅವರ ಹಿರಿಯ ಸೋದರಳಿಯನ ಬಳಿಯಿದೆ. ಅದು ಭಾರೀ ಅನರ್ಘ್ಯ ಸಂಪತ್ತು..!’ ಎಂದು ಪ್ಯಾಟಿ ಆಂಟಿ ಸಂಭಾಷಣೆಗೆ ಗೆರೆ ಎಳೆದರು.
ಪ್ರತೀ ಕುಟುಂಬಗಳು ಕಿತಾಬನ್ನು ಪರಿಗಣಿಸಿದ ರೀತಿ ವಿಭಿನ್ನ. ೯೪ ವರ್ಷ ಪ್ರಾಯದ ಇಸ್ಮಾಯಿಲ್ ಪೀಟರ್ಸನ್ ಹಾಗೂ ಅವರ ಪತ್ನಿಯ ಬಳಿ ಸಾರಾ ಕರೆದೊಯ್ದರು. ದರ್ಜಿಯಾಗಿದ್ದ ಅವರು ನನ್ನನ್ನು ಕಂಡೊಡನೆ ಅರೇಬಿಕ್ ಭಾಷೆಯ ಕೆಲವು ಪ್ರಯೋಗಗಳನ್ನು ಉಡಾಯಿಸಿದರು. “ಬಂದರಿನಲ್ಲಿ ಕೆಲಸ ಮಾಡುವಾಗ ಅನೇಕಾರು ಭಾಷೆಗಳೊಂದಿಗೆ ಒಡನಾಟ ಬೆಳೆಸಿದ್ದೆ” ಎಂದು ನನ್ನ ಆಶ್ಚರ್ಯಕ್ಕೆ ಜವಾಬು ನೀಡಿದರು. ಈ ದಂಪತಿಗಳು ಕೇಪ್ ಟೌನಿನ ಕೈಗಾರಿಕಾ ವಲಯದ ಪಕ್ಕದಲ್ಲಿರುವ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಏತನ್ಮಧ್ಯೆ ಇಸ್ಮಾಯಿಲ್, ತನ್ನಜ್ಜನ ಆಪ್ತ ವ್ಯಕ್ತಿಯಾಗಿದ್ದರು. ಅವರ ಜೊತೆ ಮಕ್ಕಾಗೆ ಪ್ರಯಾಣ ಕೈಗೊಂಡಿದ್ದರು ಎಂದು ಖುದ್ದಾಗಿ ಸಾರ ನನ್ನೊಂದಿಗೆ ಹೇಳಿದಳು. ಹತ್ತು ವರ್ಷಗಳ ಹಿಂದೆ ಸಾರಾಗೆ ಇಸ್ಮಾಯಿಲ್ ತೋರಿಸಿದ ಕೆಲವು ‘ಕುಟುಂಬ ಕಿತಾಬ್’ಗಳನ್ನು ತೋರಿಸಬಹುದಾ ಎಂದು ಕುತೂಹಲ ವ್ಯಕ್ತಪಡಿಸಿದರು. ಅವರು ಒಳಗೆ ಹೋಗಿ ಪತ್ರಿಕೆ ಪ್ರಕಟಣೆ ಹಾಗೂ ತಾನು ಮತ್ತು ಮಲೇಷ್ಯಾದ ರಾಜ ಸಂಭಾಷಣೆ ನಡೆಸುವ ಕೆಲವು ಫೋಟೋದೊಂದಿಗೆ ಮರಳಿದರು. ವರ್ಣಭೇದ ನೀತಿಯ ಬಳಿಕ ಕೇಪ್ ಮಲಾಯ್ ಮುಸ್ಲಿಮರನ್ನು ಮಲೇಷ್ಯಾದ ನಾಗರಿಕ ಮತ್ತು ಧಾರ್ಮಿಕ ಚಳುವಳಿಗೆ ಕೈಜೋಡಿಸಲು ಅವರು Indonesian and Malasian Seamen club ಎಂಬ ಸಮಿತಿ ರಚಿಸಿದರು. ತನ್ನ ‘ಕುಟುಂಬ ಕಿತಾಬ್’ ಎಲ್ಲೂ ನಶಿಸದೆ, ಬೀದಿಯ ಪಕ್ಕದಲ್ಲೇ ವಾಸಿಸುವ ತಮ್ಮನ ಕೈಯ್ಯಲ್ಲಾದರು ಇದೆ ಎನ್ನುವುದು ಸ್ವಲ್ಪ ಸಮಾಧಾನ ಸಂಗತಿ. ಆದರೆ ಸಹೋದರ ಇವರೊಂದಿಗೆ ಹಂಚಿಕೊಳ್ಳುವುದಿಲ್ಲ ಎನ್ನುವುದು ಖೇದಕರ.
ಇಸ್ಮಾಯಿಲರ ಪೀಳಿಗೆ ನಶಿಸಿ ಹೋದರೆ ಕಿತಾಬ್‌ಗಳ ಉಳಿವಿಗಾಗಿ ಗಂಭೀರ ಕಾಳಜಿ ಅಗತ್ಯ. ಫಾತಿಮಾ, ಕೇಪ್ ಟೌನಿನಲ್ಲಿರುವ Iziko Social History Resource ಕೇಂದ್ರದಲ್ಲಿ ಕಿತಾಬ್ ಸಂಗ್ರಹಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಳಿ ಕೈಗವಸು ಧರಿಸಿ ಅವರು ಆ ಕಿತಾಬುಗಳನ್ನು ಗ್ರಂಥ ಸಂಗ್ರಹ ಪೆಟ್ಟಿಗೆಯಿಂದ ಹೊರತೆಗೆಯುತ್ತಾರೆ. ಅವುಗಳನ್ನು ಕಾಗದದ ತುಂಡುಗಳಿಂದ ಮುಚ್ಚುಲ್ಪಟ್ಟರೂ ಪ್ರದರ್ಶನಕ್ಕಾಗಿ ಪಟ್ಟಿ ಮಾಡಲೋ, ದಾಖಲಿಸಲೋ ಹೋಗಲಿಲ್ಲ. ನಷ್ಟಹೊಂದಿದ ಕಿತಾಬ್‌ಗಳ ಬಗ್ಗೆಯಿರುವ ಪ್ರಶ್ನೆಗೆ ಫಾತಿಮಾರ ಬಳಿ ಸ್ಪಷ್ಟ ಉತ್ತರವಿಲ್ಲ. ಅವಳೊಂದಿಗೆ ಮಾತ್ರವಲ್ಲ, ಸಹೋದ್ಯೋಗಿಗಳಿಗೂ ಕೂಡಾ! ಇದು ಸತ್ಯ, ಯಾವುದೇ ಸಂಶಯ ಪಡಬೇಡಿ. ಕೇಪ್ ಮುಸ್ಲಿಮರ ಪರಂಪರೆ ನಿರ್ಧರಿಸುವಲ್ಲಿ ವಿಶಿಷ್ಟ ಪಾತ್ರ ವಹಿಸಿದ ಕಿತಾಬುಗಳು ಒಂದು ದಿನ ನಿಗೂಢ ರಹಸ್ಯ ಬಯಲು ಮಾಡುತ್ತದೆ ಎಂಬ ನಿರೀಕ್ಷೆ ಹುಸಿಯಾಗದಿರಲಿ!!
ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು